ಮುಂಬೈ:ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಲ್ಕರ್​ ಹತ್ಯೆ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಘಟನೆಯನ್ನು ಹೋಲುವ ಘಟನೆಯೊಂದು ಮಹಾನಗರಿ ಮುಂಬೈನಲ್ಲಿ ನಡೆದಿತ್ತು.
ತನ್ನ ಪ್ರೇಮಿಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಕುದಿಸಿದ ಆರೋಪದ ಮೇಲೆ ಪ್ರಿಯಕರ ಮನೋಜ್​ ಸಾನೆ(56) ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ಧಾರೆ.
ಇದನ್ನೂ ಓದಿ:ಫ್ಲ್ಯಾಟ್​​ನಲ್ಲಿ ಮಹಿಳೆಯನ್ನು ಹತ್ಯೆಗೈದು ದೇಹವನ್ನು ಕತ್ತರಿಸಿ ಕುಕ್ಕರ್‌ನಲ್ಲಿ ಕುದಿಸಿದ ಪಾಪಿ
ವಿಚಾರಣೆ ವೇಳೆ ಆರೋಪಿಯೂ ತನ್ನ ಪ್ರೇಯಸಿ ಸರಸ್ವತಿ ವೈದ್ಯ(32) ಜೂನ್​ 3ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ವಿಚಾರ ಹೊರ ಬಂದರೆ, ಎಲ್ಲಿ ಪೊಲೀಸರು ತನ್ನನ್ನು ಪ್ರಕರಣದಲ್ಲಿ ಸಿಲುಕಿಸುತ್ತಾರೆ ಎಂದು ಭಯಭೀತಗೊಂಡು ಆಕೆಯ ದೇಹವನ್ನು ಮರ ಕಟ್​ ಮಾಡುವ ಮೆಷಿನ್​ನಿಂದ ತುಂಡು ತುಂಡಾಗಿ ಕತ್ತರಿಸಿದೆ.
ಬಳಿಕ ಆಕೆಯ ದೇಹ ಭಾಗಗಳನ್ನ ಮೊದಲಿಗೆ ಕುಕ್ಕರ್​ನಲ್ಲಿ ಕುದಿಸಿ ಮಾಂಸ ಹಾಗೂ ಮೂಳೆಯನ್ನು ಬೇರ್ಪಡಿಸಿದೆ. ಬಳಿಕ ಅದನ್ನು ಮಿಕ್ಸಿಯಲ್ಲಿ ರುಬ್ಬಿ ನಾಯಿಗಳಿಗೆ ಬಡಿಸಿದೆ. ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದೆ. ಆದರೆ, ಈ ವಿಚಾರದಲ್ಲಿ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
