ಗೋಪಾಲ್​​ಗಂಜ್​:ಹುಡುಗಿಯರು ಅಪರಿಚಿತ ನಂಬರ್​ನಿಂದ ಬರುವ ಕರೆಗೆ ಪ್ರತಿಕ್ರಿಯಿಸದಿರುವುದೇ ಒಳಿತು. ಅಂಥ ಒಂದು ಕಾಲ್​ಗೆ ಪ್ರತಿಕ್ರಿಯಿಸಿದ್ದೇ ಈಕೆಯ ಪಾಲಿಗೆ ಒಂದು ರೀತಿಯಲ್ಲಿ ಕಾಲನ ಕರೆಯಾಗಿಬಿಟ್ಟಿತು. ಒಂದು ಕರೆಯಿಂದ ಉಂಟಾದ ಪರಿಚಯ ಈಗ ಈಕೆಯ ಮನೆಯವರೆಲ್ಲ ಪರಿತಪಿಸುವಂತೆ ಮಾಡಿದೆ.
ಬಹುಶಃ ಆತನೊಂದಿಗೆ ಫೋನ್​ ಮೂಲಕ ಮಾತನಾಡುತ್ತಿದ್ದಾಗ ಅವಳಿಗೆ ಹೀಗೆಲ್ಲ ಆಗುತ್ತದೆ ಎಂಬ ಕಲ್ಪನೆಯೂ ಇದ್ದಿರಲಿಕ್ಕಿಲ್ಲ. ಹಾಗೆ ಫೋನ್​ ಮೂಲಕ ಪರಿಚಿತನಾದ ಯುವಕನೊಂದಿಗೆ ಆಕೆ ಗೆಳೆತನ ಮುಂದುವರಿಸಿದ್ದಳು. ಆತ ಅದನ್ನು ಪ್ರೀತಿ ಎಂದುಕೊಂಡು, ಮದುವೆಯಾಗುವಂತೆ ಒತ್ತಾಯಿಸಿದ. ಹೀಗೆ ಫೋನ್​ ಕರೆ ಮೂಲಕ ಫ್ರೆಂಡ್​ ಆಗಿದ್ದ ಯುವತಿಯ ಮನೆಗೆ ತೆರಳಿದ ಆತ ಮದುವೆ ಆಗುವಂತೆ ಒತ್ತಾಯಿಸಿದ್ದ. ಆದರೆ ಮದುವೆಯಾಗಲು ಆಕೆ ನಿರಾಕರಿಸಿದ್ದರಿಂದ ಬೇಸರಗೊಂಡು ಸಿಟ್ಟಾದ ಆತ ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ಗಾಯಗೊಂಡ ಅವಳನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಪ್ರಾಣಬಿಟ್ಟಿದ್ದಾಳೆ.
ಇದನ್ನೂ ಓದಿ:ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಮುಕೇಶ್​ ಅಂಬಾನಿ ಈಗ ಟಾಪ್​ 10ನಿಂದಲೇ ನಾಪತ್ತೆ!
ಇಂಥದ್ದೊಂದು ಅಪರಾಧ ಪ್ರಕರಣ ಬುಧವಾರ ಸಂಭವಿಸಿದೆ. ಬಿಹಾರದ ಗೋಪಾಲ್​ಗಂಜ್ ಜಿಲ್ಲೆಯ ಸಿಧ್ವಾಲಿಯಾ ಎಂಬಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಯುವತಿಯ ಸಾವಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅನಿಲ್​ ಯಾದವ್ ಹಾಗೂ ಆತನ ಗೆಳೆಯ ಧೀರಜ್ ಎಂಬಾತನನ್ನು ಗುರುವಾರ ಬಂಧಿಸಿದ್ದಾರೆ. ಜಲಲ್​ಪುರ ಗ್ರಾಮದ ಅನಿಲ್ ಯಾದವ್ ಸಂತ್ರಸ್ತ ಯುವತಿಗೆ ಫೋನ್​ ಮೂಲಕ ಪರಿಚಿತನಾಗಿದ್ದ. ಆಕೆ ಮದುವೆಗೆ ಒಪ್ಪದ್ದಕ್ಕೆ ಆತ ಈ ಕೃತ್ಯವೆಸಗಿದ್ದು, ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)
ಇವರಿಬ್ಬರು ಸಿಕ್ಕಿ ಬೀಳದಿದ್ದರೆ ವರ್ಷಾಂತ್ಯದ ಮಧ್ಯರಾತ್ರಿ ಅದೇನಾಗಿರುತ್ತಿತ್ತೋ!?

Video | ನಿಮ್ಮ ವಾಹನದ ಮೇಲೆ ‘ಆರ್​ಎಸ್ಎಸ್​’ ಸ್ಟಿಕ್ಕರ್ ಇದ್ಯಾ?; ಹಾಗಿದ್ದರೆ ಇಲ್ಲಿಗೆ ಹೋಗುವಾಗ ಒಮ್ಮೆ ಯೋಚಿಸಿ…

ಕೈಮುಗಿದು ಬೇಡಿಕೊಳ್ಳುತ್ತೇನೆ, ಯಾರೂ ಗೋವನ್ನು ತಿನ್ನಬೇಡಿ; ಸಿ.ಎಂ. ಇಬ್ರಾಹಿಂ ಮನವಿ

‘ದೃಶ್ಯ’ ಸಿನಿಮಾ ಕಥೆ ನೆನಪಿಸಿತು ಅರ್ಚಕರ ಕೊಲೆ ರಹಸ್ಯ; ಕ್ಲೈಮ್ಯಾಕ್ಸ್​ನತ್ತ ತನಿಖೆ…

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:4 × 1 =
Remember me
