ಕುರುಕ್ಷೇತ್ರ: ಮದ್ಯವ್ಯಸನಿ ಗಂಡನನ್ನು ತೊರೆದು ಮತ್ತೊಬ್ಬನೊಂದಿಗೆ ಪ್ರೇಮ ಶುರುವಿಟ್ಟುಕೊಂಡವಳಿಗೆ ಪ್ರೇಮಿಯೇ ವಿಷವುಣಿಸಿ ಕೊಂದ ಘಟನೆ ನಡೆದಿದೆ.ಮೃತ ಮಹಿಳೆ ಹೆಸರು ಪಿಂಕಿ, ಕುರುಕ್ಷೇತ್ರದ ಬೊಹ್ಲಿ ಗ್ರಾಮದವಳು.  ಸುಮಾರು 10 ವರ್ಷದ ಹಿಂದೆ ಪಿಂಕಿ ರವಿ ಎಂಬಾತನನ್ನು ಮದುವೆಯಾದಳು. ಅವರಿಗೆ ಇಬ್ಬರು ಮಕ್ಕಳು ಜನಿಸಿದರು. ಏತನ್ಮಧ್ಯೆ ಸುಮಾರು 3 ವರ್ಷಗಳ ಹಿಂದೆ, ರವಿ ಮಾದಕ ವ್ಯಸನಿಯಾದ. ಇದರಿಂದ ತೀವ್ರ ನೊಂದ ಪಿಂಕಿ, ಪತಿಯಿಂದ ದೂರವಾಗಿ ತನ್ನ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಥಾನೇಸರದ ಆಕಾಶ್ ನಗರ ಪ್ರದೇಶದ ಬಾಡಿಗೆ ಮನೆಗೆ ಬಂದಳು.
ಇದನ್ನೂ ಓದಿ:ಹಿಂದೂ ರಾಷ್ಟ್ರಕ್ಕೆ ನಿಮ್ಮ ಕೊಡುಗೆ ಅಮೂಲ್ಯ ಎಂದು ಯೋಗಿಗೆ ಪತ್ರ ಬರೆದರಾ ಮೋದಿ ? ಸತ್ಯ ಏನು?
ದಿನಗಳೆದಂತೆ ಆಕೆಗೆ ಗಂಗಾ ಸಿಂಗ್ ಎಂಬಾತನೊಂದಿಗೆ ಪ್ರೇಮ ಅಂಕುರಿಸಿತು. ಆದರೆ ಗಂಗಾ ಕೂಡ ಮದ್ಯವ್ಯಸನಿಯಾಗಿದ್ದ, ಆತ ಪಿಂಕಿಯ ಮೇಲೆ ಹಲ್ಲೆ ಮಾಡಿ ಮದ್ಯ ತರಲು ಹಣಕ್ಕಾಗಿ ಒತ್ತಾಯಿಸುತ್ತಿದ್ದ. ಮತ್ತಷ್ಟು ನೊಂದ ಪಿಂಕಿಗೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿತ್ತು. ಇತ್ತೀಚೆಗೆ ತನ್ನ ತಾಯಿಗೆ ಈ ಅತಂತ್ರ ಸ್ಥಿತಿಯ ಕುರಿತು ಹೇಳಿಕೊಂಡಿದ್ದಾಳೆ. ಆಗಸ್ಟ್ 7 ರಂದು ಗಂಗಾ ಮತ್ತು ಆತನ ಹೆಂಡತಿ ಪಿಂಕಿ ಮನೆಗೆ ಬಂದಿದ್ದರು ಅವರಿಬ್ಬರೂ ತಂದ ಔಷಧವನ್ನು ಪಿಂಕಿಗೆ ಕುಡಿಸಿದ್ದಾರೆ.
ಇದನ್ನೂ ಓದಿ:LIVE: ಚೆನ್ನೈ-ಅಂಡಮಾನ್​ ಸಬ್​ಮರೈನ್ ಆಪ್ಟಿಕಲ್ ಫೈಬರ್ ಕನೆಕ್ಟಿವಿಟಿಗೆ ಚಾಲನೆ ನೀಡಿದ ಪ್ರಧಾನಿ
ಔಷಧ ಸೇವಿಸಿದ ನಂತರ, ಪಿಂಕಿಗೆ ವಾಂತಿ ಶುರುವಾಗಿ ಆಕೆ ಶನಿವಾರ ಸಾವಿಗೀಡಾಗಿದ್ದಾಳೆ. ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಭಾನುವಾರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಲಾಗಿದೆ ಎಂದು ಕೃಷ್ಣ ಗೇಟ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಾಂಗೆ ರಾಮ್ ತಿಳಿಸಿದ್ದಾರೆ.
ನಿಮ್ಮ ಒಗ್ಗಟ್ಟನ್ನು ವಿಶ್ವಾಸ ಮತದ ವೇಳೆ ತೋರಿಸಿ: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಗೆಹ್ಲೋಟ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve − 6 =
Remember me
