ಫತೇಗಢ ಸಾಹಿಬ್ (ಚಂದೀಗಢ):ಗಂಡನಿಂದ ನಿರಂತರ ಹಲ್ಲೆಗೊಳಗಾದ ಮಹಿಳೆಯೋರ್ವಳು ಬೇಸರಗೊಂಡು ಆತನನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾಳೆ.ಈ ಘಟನೆ ಜಿಲ್ಲೆಯ ಬಾಸ್ಸಿ ಪಥಾನಾ ಬ್ಲಾಕ್‌ನಲ್ಲಿ ನಡೆದಿದೆ.ಕರಮ್‌ಜಿತ್ ಸಿಂಗ್ ಅಲಿಯಾಸ್ ರಾಜು ಸಾವಿಗೀಡಾದವ. ಕಾಳೇರನ್ ಗ್ರಾಮದ ಆತ ರೈಲ್ವೆಯ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ.
ಇದನ್ನೂ ಓದಿ:ಎಚ್ಚರ! ನಿಮ್ಮ ಮೇಲೆ ಕಣ್ಣಿಟ್ಟಿದೆ ಫೇಸ್‌ಬುಕ್‌- 7 ದಶಲಕ್ಷ ಪೋಸ್ಟ್‌ ಡಿಲೀಟ್‌
ಆರೋಪಿ ಮಹಿಳೆಯನ್ನು ಕುಲದೀಪ್ ಕೌರ್ ಎಂದು ಗುರುತಿಸಲಾಗಿದೆ. ಆತನಿಂದ ದೌರ್ಜನ್ಯ ಅನುಭವಿಸಿದ ಆಕೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಕೊಲೆಗೆ ಸಂಚು ರೂಪಿಸಿದ್ದಳೆಂದು ಆರೋಪಿಸಲಾಗಿದೆ. ಮಹಿಳೆಗೆ ಅವಳ ಮೂವರು ಸಂಬಂಧಿಕರು- ಮನಿಂದರ್ ಸಿಂಗ್, ಪರ್ವಿಂದರ್ ಸಿಂಗ್ ಮತ್ತು ಸಹೋದರ ಸನ್ನಿ ಸಹಾಯ ಮಾಡಿದ್ದಾರೆನ್ನಲಾಗಿದೆ.10 ವರ್ಷಗಳ ಹಿಂದೆ ಕುಲದೀಪ್ ಕರಮ್ ಜಿತ್ ನನ್ನು ವಿವಾಹವಾದಳು. ಇದು ಪ್ರೇಮ ವಿವಾಹವಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದರು. ಆದರೆ, ಕುಲದೀಪ್ ಕುಡಿದ ಮತ್ತಿನಲ್ಲಿ ಆಕೆ ಮೇಲೆ ಹಲ್ಲೆ ಮಾಡುತ್ತಿದ್ದ.
ಇದನ್ನು ಓದಿ:ಪ್ರಣಯದ ಗುಂಗಲ್ಲಿ ಅವಳ ಬದಲು ಅವಳಪ್ಪನಿಗೆ ಸಂದೇಶ ಕಳುಹಿಸಿದ. ಈ ಯಡವಟ್ಟಿಗೆ ಇಬ್ಬರು ಬಲಿಯಾದರು
ಭಾನುವಾರ ಬೆಳಗ್ಗೆ, ಸನ್ನಿ ಕರಮ್ಜಿತ್ ನನ್ನು ದ್ವಿಚಕ್ರ ವಾಹನದಲ್ಲಿ ಮನೆಗೆ ಕರೆದೊಯ್ಯುತ್ತಿದ್ದ. ಅಮಲಿನಲ್ಲಿದ್ದ ಕರಮ್‌ಜಿತ್ ರಾತ್ರಿ ಕರ್ತವ್ಯದಿಂದ ಮನೆಗೆ ಮರಳುತ್ತಿದ್ದ.
ಇಬ್ಬರು ಹೋಗುವಾಗ ಕುಲದೀಪ್ ತನ್ನ ಗಂಡನನ್ನು ಮರದ ರಾಡ್‌ನಿಂದ ತಲೆಗೆ ಹೊಡೆದಳು. ಯಾವುದೇ ಸಿಸಿಟಿವಿ ಕ್ಯಾಮದರಾಗಳಿಲ್ಲದ ಲಿಂಕ್ ರಸ್ತೆಯ ಬಳಿ ವಾಹನ ಇದ್ದಾಗ ಈ ದಾಳಿ ನಡೆದಿದೆ.ಅತಿಯಾದ ರಕ್ತಸ್ರಾವವಾಗಿದ್ದರಿಂದ ಕರಮ್‌ಜಿತ್ ಸ್ಥಳದಲ್ಲೇ ನಾವಿಗೀಡಾಗಿದ್ದಾನೆ. ಮಾಹಿತಿ ಸಿಕ್ಕ ನಂತರ ಪೊಲೀಸರು ಪ್ರಕರಣದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿ ಮತ್ತು ಅದನ್ನು ಒಂದೇ ದಿನದಲ್ಲಿ ಪರಿಹರಿಸಿದರು. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಬಳಸಿದ ಮರದ ರಾಡ್ ಮತ್ತು ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎಣ್ಣೆ ಮತ್ತಿನಲ್ಲಿದ್ದವರು ವೃದ್ಧನನ್ನು ನೂರೈವತ್ತು ಬಾರಿ ಚಚ್ಚಿ ಕೊಂದರು. ಆ ಕ್ರೌರ್ಯ ಕೇಳಿದರೆ ನೀವೂ ಮೂರ್ಛೆ ಹೋಗುತ್ತೀರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 6 =
Remember me
