ಅಹಮದಾಬಾದ್:ಪತಿ ಮತ್ತು ಆತನ ಮನೆಯವರು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಾರೆಂದು ಆರೋಪಿಸಿ 31 ವರ್ಷದ ಅಹಮದಾಬಾದ್ ಮಹಿಳೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.ಸಣ್ಣ ಪುಟ್ಟ ವಿಷಯಕ್ಕೂ ಗಂಡ ಆಕೆಗೆ ಥಳಿಸುತ್ತಾನೆ ಮತ್ತು ಮುಂಬೈಯಲ್ಲಿ ಅಪಾರ್ಟ್​​ಮೆಂಟ್ ಖರೀದಿಸಲು ಹಣಕ್ಕಾಗಿ ತನ್ನ ಹೆತ್ತವರಿಗೆ ಫೋನ್ ಮಾಡಲು ಒತ್ತಾಯಿಸಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.2013 ರಲ್ಲಿ ಅವರ ಮದುವೆಯಾಗಿದೆ. ಗರ್ಭಾವಸ್ಥೆಯಲ್ಲಿ, ಆಕೆಗೆ ಅನಾರೋಗ್ಯದ ಹೊರತಾಗಿಯೂ ಕೆಲಸ ಮಾಡಲು ಪತಿಯ ಮನೆಯವರು ಒತ್ತಾಯಿಸಿದ್ದರಲ್ಲದೆ, ಕೆಲಸ ಮಾಡಲಾಗದಿದ್ದರೆ ತವರು ಮನೆಗೆ ಹೊರಟುಹೋಗಬೇಕು ಎಂದು ಒತ್ತಾಯಿಸಿದ್ದರು.
ಇದನ್ನೂ ಓದಿ:ಕರೊನಾ ಹೆಸರಲ್ಲಿ ದೆಹಲಿಯಲ್ಲಿ ಪ್ಲಾಸ್ಮಾ ಮಾಫಿಯಾ: ಸ್ಫೋಟಕ ಮಾಹಿತಿ ಬಹಿರಂಗ
ಏತನ್ಮಧ್ಯೆ ಪತಿಗೆ 2014 ರಲ್ಲಿ ಮುಂಬೈನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ನಂತರ ಆಕೆ ತನ್ನ ಗಂಡ ಹಾಗೂ ಮಗಳೊಂದಿಗೆ ಮುಂಬೈಗೆ ಹೋದಳು.ಗಂಡನ ಮನೆಯವರ ಮಾತು ಕೇಳಿ ಗಂಡ ಸಣ್ಣ ಸಮಸ್ಯೆಗಳಿಗೂ ಹೊಡೆಯಲು ಮತ್ತು ನಿಂದಿಸುತ್ತಾನೆ.ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆಕೆ ದೂರಿದ್ದಾಳೆ. ಆಕೆಯ ಹೆತ್ತವರಿಗೂ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾನೆ ಎಂದು ಆಕೆ ದೂರಿದ್ದಾಳೆ.ಫೆಬ್ರವರಿ 3 ರಂದು ಪತಿ ಬೇರೆ ಮನೆಗೆ ಹೋಗಿದ್ದು, ಆಕೆ ಕರೆ ಮಾಡಿದಾಗ ಕಾರಿನಲ್ಲಿ ಮಲಗಿದ್ದಾಗಿ ತಿಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ತನ್ನ ಗಂಡನ ಮನೆಗೂ ಹೋಗಲು, ಗಂಡನ ಜತೆ ಮುಂಬೈನಲ್ಲಿ ಇರಲೂ ಆಕೆಯ ಮನೆಯವರು ಮತ್ತು ಆತ ನಿರಾಕರಿಸಿದ ಕಾರಣ ಲಾಕ್‌ಡೌನ್ ಮುಗಿದ ನಂತರ ಆಕೆ ಮತ್ತೆ ಮುಂಬೈಗೆ ಬಂದಿದ್ದು. ಗುರುವಾರ ವಸ್ತ್ರಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ನಾಕಾ ತಪಾಸಣೆ ವೇಳೆ ಸಿಕ್ಕಿಬಿದ್ದ ಮಾದಕವಸ್ತು ಮಾರಾಟಗಾರರ ಬಳಿ ಸಿಕ್ಕಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − ten =
Remember me
