ನವದೆಹಲಿ:ಮದುವೆಯಾಗು ಎಂದು ಈಕೆಯನ್ನು ಇಬ್ಬರು ಒತ್ತಾಯಿಸುತ್ತಿದ್ದರು. ಆದರೆ ಇಬ್ಬರ ಬೇಡಿಕೆಯನ್ನೂ ನಿರಾಕರಿಸಿದ್ದೇ ಈಕೆಯ ಸಾವಿಗೆ ಕಾರಣವಾಗಿದೆ. 25 ವರ್ಷದ ಈ ಯುವತಿ ಎರಡು ಗುಂಡೇಟಿಗೆ ಬಲಿಯಾಗಿ ಮೃತಪಟ್ಟಿದ್ದಾಳೆ.
ಬ್ರಿಟಿಷ್ ಯುವತಿ ಮಯ್ರಾ ಜುಲ್ಫೀಕರ್​ ಕೊಲೆಯಾದ ಯುವತಿ. ಈಕೆ ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ಹತ್ಯೆಗೀಡಾಗಿದ್ದಾಳೆ. ಪಾಕಿಸ್ತಾನದ ಲಾಹೋರ್​ನ ಡಿಫೆನ್ಸ್​ ಹೌಸಿಂಗ್ ಅಥಾರಿಟಿಗೆ ಸೇರಿದ ನಿವಾಸದಲ್ಲಿ ಈಕೆ ವಾಸವಾಗಿದ್ದಳು. ಲಾಹೋರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈಕೆಯ ಸ್ನೇಹಿತ ಅಸಾದ್ ಅಮೀರ್ ಬಟ್​ ಬಗ್ಗೆ ಶಂಕೆ ಹೊಂದಿದ್ದಾರೆ.
ಮಯ್ರಾ ತನ್ನ ಗೆಳತಿ ಇಕ್ರಾ ಜತೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದಳು. ಮಯ್ರಾ ಪೋಷಕರು ಯುಕೆಯಲ್ಲಿದ್ದು, ಈಕೆ ಮೂರು ತಿಂಗಳ ಹಿಂದೆ ಲಾಹೋರ್​ಗೆ ಬಂದಿದ್ದಳು. ಮಯ್ರಾ ಕತ್ತು ಹಾಗೂ ತೋಳಿನ ಮೇಲೆ ಒಂದೊಂದು ಗುಂಡೇಟು ಬಿದ್ದಿದ್ದು, ಕೈ ಹಾಗೂ ಕಾಲಿನ ಮೇಲೆ ಪರಚಿದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಧೂಮಪಾನಿಗಳು-ಸಸ್ಯಾಹಾರಿಗಳಲ್ಲಿ ಕೋವಿಡ್ ಸೋಂಕು ಸಾಧ್ಯತೆ ಕಡಿಮೆ; ಸಿಎಸ್​ಐಆರ್ ಸಮೀಕ್ಷೆಯಲ್ಲಿ ಬಹಿರಂಗ
ಮಯ್ರಾ ಅಂಕಲ್, ಲಾಹೋರ್​ನಲ್ಲೇ ನೆಲೆಸಿರುವ ಮಹಮದ್ ನಜೀರ್, ಕೊಲೆಯಾಗುವ ಹಿಂದಿನ ದಿನ ಮಯ್ರಾ ತಮ್ಮ ಮನೆಗೆ ಬಂದಿದ್ದು, ಮದುವೆ ಆಗುವಂತೆ ಆಕೆಗೆ ಇಬ್ಬರು ಒತ್ತಾಯಿಸುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಸಾದ್ ಅಮೀರ್ ಬಟ್​ ಹಾಗೂ ಜಹೀದ್ ಜದೂನ್ ಎಂಬಿಬ್ಬರು ಮದುವೆ ಆಗುವಂತೆ ಒತ್ತಾಯಿಸಿದ್ದು, ಅದನ್ನು ಮಯ್ರಾ ನಿರಾಕರಿಸಿದ್ದಕ್ಕೆ ಅವರೇ ಈ ಕೊಲೆ ಮಾಡಿದ್ದಾರೆ ಎಂದು ನಜೀರ್ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾರೆ. ಈ ಮೇರೆಗೆ ಪೊಲೀಸರು ಆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದಾರೆ.
ಭಾರತಕ್ಕೆ ಕರೊನಾ ಮೂರನೇ ಅಲೆ ಪ್ರವೇಶ ಯಾವತ್ತು ಗೊತ್ತಾ?; ಇಲ್ಲಿದೆ ನೋಡಿ ಮಾಹಿತಿ…

ಗುಂಡ್ಲುಪೇಟೆ ತಾಲೂಕಾಸ್ಪತ್ರೆಯಲ್ಲಿ ಕೋವಿಡ್ ಮರಣಾತಂಕ; ನಾಲ್ವರು ಸೋಂಕಿತರ ಸಾವು, ಮೃತರ ಸಂಖ್ಯೆ 11ಕ್ಕೆ ಏರಿಕೆ

ಅತಿ ಅಗತ್ಯವಿರದೆ ಸಿಟಿ ಸ್ಕ್ಯಾನ್​ ಮಾಡಿಸ್ಕೊಂಡ್ರೆ ಮತ್ತೊಂದು ಅಪಾಯ ಮೈಮೇಲೆ ಎಳೆದುಕೊಂಡಂತೆ: ಎಐಐಎಂಎಸ್​ ವೈದ್ಯರ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 6 =
Remember me
