ಚಂಡೀಗಢ:ಹರಿಯಾಣದ ಫರೀದಾಬಾದ್​ನಲ್ಲಿ ಹಾಡಹಗಲೇ ನಡೆದ ಯುವತಿಯೊಬ್ಬಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಪೊಲೀಸ್​ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಸೋಮವಾರ ಮಧ್ಯಾಹ್ನ ನಿಖಿತಾ ತೋಮರ್ ಎಂಬ 21 ವರ್ಷದ ಯುವತಿ ಪರೀಕ್ಷೆ ಮುಗಿಸಿ ಕಾಲೇಜಿನಿಂದ ಹೊರಬರುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ.
ಪ್ರಕರಣದ ಪ್ರಮುಖ ಆರೋಪಿ ತೌಸೀಫ್​ ಬಂಧನವಾಗಿದ್ದು, ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮತ್ತೊಬ್ಬನೊಂದಿಗೆ ಮದುವೆಯಾಗಲು ನಿಖಿತಾ ಒಪ್ಪಿದ್ದಕ್ಕೆ ಆಕೆಯನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ.
ಕೊಲೆಯಾಗುವ ಒಂದು ದಿನದ ಮುಂಚೆ ಅ. 24-25ರ ಮಧ್ಯರಾತ್ರಿ ನಿಖಿತಾ ಮತ್ತು ತೌಸೀಫ್​ ಮೊಬೈಲ್​ನಲ್ಲಿ ಮಾತನಾಡಿದ್ದಾರೆ. ಸುಮಾರು 16 ನಿಮಿಷ ಇಬ್ಬರು ಸಂಭಾಷಣೆ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿಯ ನೋಟು ಕಾಂಗ್ರೆಸ್​ಗೆ ಓಟು ಅಂದ್ರೆ ದೂರು ಕೊಡ್ತಾರೆ – ಡಿಕೆಶಿ ಆಕ್ರೋಶ

ಇನ್ನು ನಿಖಿತಾ ಕುಟುಂಬದ ಪ್ರಕಾರ ತೌಸೀಫ್​ ಬಹಳ ದಿನಗಳಿಂದ ಅವರ ಮಗಳಿಗೆ ಕಿರುಕುಳ ನೀಡುತ್ತಿದ್ದನಂತೆ. ಮದುವೆಯಾಗುವಂತೆ ಮಗಳನ್ನು ಪೀಡಿಸುತ್ತಿದ್ದಲ್ಲದೆ, ಆಕೆಯನ್ನು ಅಪಹರಿಸಿದ್ದಾನಂತೆ. ಈ ಬಗ್ಗೆ ದೂರು ನೀಡಿದ ಮೇರೆಗೆ 2018ರಲ್ಲಿ ತೌಸೀಫ್​ನನ್ನು ಬಂಧಿಸಲಾಗಿತ್ತಂತೆ. ಇದಾದ ಬಳಿಕ ಎರಡು ಕುಟುಂಬಗಳು ಒಟ್ಟುಗೂಡಿ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದರಂತೆ. ಅಲ್ಲದೆ, ದೂರನ್ನು ಸಹ ಹಿಂಪಡೆದುಕೊಂಡಿದ್ದೆವು ಎಂದು ಸಂತ್ರಸ್ತೆಯ ಸಹೋದರ ತಿಳಿಸಿದ್ದಾರೆ.
ನನ್ನ ವಿರುದ್ಧ ದೂರು ನೀಡಿ ಬಂಧಿಸಿದ್ದಕ್ಕೆ ನಿಖಿತಾಳನ್ನು ಕೊಂದು ಸೇಡು ತೀರಿಸಿಕೊಂಡಿದ್ದೇನೆಂದು ಆರೋಪಿ ತೌಸೀಫ್​ ಬಾಯ್ಬಿಟ್ಟಿದ್ದಾನೆ. ನಾನು ಬಂಧನವಾಗಿದ್ದರಿಂದ ಡಾಕ್ಟರ್​ ಓದಲು ಆಗಲಿಲ್ಲ. ಅದೇ ದ್ವೇಷಕ್ಕೆ ಕೊಲೆ ಮಾಡಿದೆ ಎಂದು ತೌಸೀಫ್​ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಘಟನೆ ಹಿನ್ನೆಲೆಸೋಮವಾರ ಮಧ್ಯಾಹ್ನ ನಿಖಿತಾ ಕಾಲೇಜಿನ ಹೊರಗಡೆ ವಾಹನದಲ್ಲಿ ಬಂದಿದ್ದ ಆರೋಪಿ ತೌಸೀಫ್​ ಆಕೆಯನ್ನು ಬಲವಂತಾಗಿ ಕಾರೊಳಗೆ ಹಾಕಿ ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ನಿಖಿತಾ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ತೌಸೀಫ್​ ಗುಂಡು ಹಾರಿಸಿದ್ದಾನೆ. ಈ ವೇಳೆ ತೌಸೀಫ್​ಗೆ ಆತನ ಸ್ನೇಹಿತನ ಕೂಡ ಸಾಥ್​ ನೀಡಿದ್ದ.
ಆರೋಪಿಗಳು ಯುವತಿ ಮೇಲೆ ಗುಂಡು ಹಾರಿಸಿ ವಾಹನ ಹತ್ತಿ ಪರಾರಿಯಾದರೆ, ಇತ್ತ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಕೂಡಲೇ ನಿಖತಾಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಗಂಭೀರ ಗಾಯಗೊಂಡಿದ್ದರಿಂದ ನಿಖಿತಾ ಮೃತಪಟ್ಟಿದ್ದಾಳೆ. ಸಿಸಿಟಿವಿಯನ್ನು ಆಧರಿಸಿ ಇಬ್ಬರು ಆರೋಪಿಯನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)
ಕಾಲೇಜು ಯುವತಿ ಮೇಲೆ ಗುಂಡಿನ ದಾಳಿ- ಸಿಸಿಟಿವಿಯಲ್ಲಿ ದಾಖಲಾಯ್ತು ಭಯಾನಕ ದೃಶ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + 13 =
Remember me
