ಮುಂಬೈ:ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪೀಟರ್​ ಮುಖರ್ಜಿಗೆ ಬಾಂಬೆ ಹೈಕೋರ್ಟ್​ ಗುರುವಾರ ಜಾಮೀನು ನೀಡಿದೆ. ಹೀಗಿದ್ದರೂ ಪೀಟರ್​ ಮುಖರ್ಜಿ ಜೈಲಿನಿಂದ ಸದ್ಯಕ್ಕೆ ಹೊರಬರಲು ಸಾಧ್ಯವಿಲ್ಲ.
ತಾನು ನೀಡಿರುವ ಜಾಮೀನು ತೀರ್ಪಿಗೆ ಬಾಂಬೆ ಹೈಕೋರ್ಟ್​ ಆರು ವಾರಗಳ ಕಾಲ ತಡೆ ನೀಡಿದ್ದು, ಅಲ್ಲಿಯವರೆಗೆ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋಗಬಹುದಾಗಿದೆ. ಶೀನಾ ಬೋರಾ ಪ್ರಕರಣದಲ್ಲಿ ಆರೋಪಿ ಪೀಟರ್​ ಮುಖರ್ಜಿ ವಿರುದ್ಧ ಬಲವಾದ ಸಾಕ್ಷಿ ಇಲ್ಲದ ಕಾರಣದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಜೈಲು ವಾಸಿಯಾಗಿದ್ದ ಮುಖರ್ಜಿಗೆ ಹೈಕೋರ್ಟ್​ ಜಾಮೀನು ನೀಡಿದೆ.
ಆರೋಪಿಯ ಆರೋಗ್ಯ ಸ್ಥಿತಿಯೂ ಕೂಡ ಜಾಮೀನು ನೀಡಲು ಕಾರಣವಾಗಿದೆ. ಅಲ್ಲದೆ, 2 ಲಕ್ಷ ರೂ. ಪಾವತಿಸುವಂತೆ ಕೋರ್ಟ್​ ಆರೋಪಿಗೆ ಸೂಚಿಸಿದೆ. ಸದ್ಯ ಮಕ್ಕಳಾದ ರಾಹುಲ್ ಮತ್ತು ವಿಧಿ ಅವರನ್ನು ಸಂಪರ್ಕಿಸಲು ಪೀಟರ್​ ಮುಖರ್ಜಿಗೆ ಕೋರ್ಟ್​ ಅನುಮತಿಯನ್ನು ನೀಡಿಲ್ಲ.​ಶೀನಾ ಬೋರಾ ಕೊಲೆ ಪ್ರಕರಣವೇನು?ಪೀಟರ್​ ಮುಖರ್ಜಿ ಅವರು ಮಾಜಿ ಮಾಧ್ಯಮ ಕಾರ್ಯನಿರ್ವಾಹಕರು. ತಮ್ಮ ಮಾಜಿ ಪತ್ನಿ ಇಂದ್ರಾಣಿ ಮುಖರ್ಜಿ ಮಗಳು ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿಯಾಗಿದ್ದಾರೆ. 2012ರಲ್ಲಿ ಶೀನಾ ಬೋರಾ ಕೊಲೆಯಾಗಿತ್ತು. ಬಳಿಕ 2015ರಲ್ಲಿ ಪೀಟರ್​ ಮುಖರ್ಜಿಯನ್ನು ಬಂಧಿಸಲಾಗಿತ್ತು.
ಕಳೆದ ವರ್ಷ ನವೆಂಬರ್​ನಲ್ಲಿ ಜಾಮೀನು ಕೋರಿ ಪೀಟರ್​ ಮುಖರ್ಜಿ ಸಿಬಿಐ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸಿಬಿಐ ವಕೀಲರು ಪ್ರಕರಣ ಸಂಬಂಧ ಸಿಬಿಐ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಪೀಟರ್​ಗೆ ಎಲ್ಲವೂ ಗೊತ್ತಿದೆ. ಪೀಟರ್​ ಸೈಲೆಂಟ್​ ಕಿಲ್ಲರ್​ ಎಂದು ಹೇಳಿ, ಜಾಮೀನು ನೀಡಲು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕೊಲೆ ನಡೆದಾಗ ನಾನು ಭಾರತದಲ್ಲಿ ಇರಲೇ ಇಲ್ಲ ಎಂದು ಪೀಟರ್​ ವಾದಿಸಿದ್ದರು.
ಇದೇ ಪ್ರಕರಣದಲ್ಲಿ ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿಯವರನ್ನು 2015ರಲ್ಲಿ ಬಂಧಿಸಲಾಗಿದ್ದು, ಈ ಕ್ಷಣದವರೆಗೂ ಜೈಲು ವಾಸಿಯಾಗಿದ್ದಾರೆ. ಇವರೊಂದಿಗೆ ಮಾಜಿ ಪತಿ ಸಂಜೀವ್​ ಖನ್ನಾ ಮತ್ತು ಪೀಟರ್​ ಮುಖರ್ಜಿ ಕೂಡ ಬಂಧಿಸಲಾಗಿತ್ತು. ಆಸ್ತಿ ವಿವಾದವೇ ಕೊಲೆಗೆ ಕಾರಣ ಎಂದು ಸಿಬಿಐ ವಾದಿಸಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
