ಮುಂಬೈ:ಇತ್ತೀಚೆಗೆ ಬಾಲಿವುಡ್​​ ನಟ ಸಲ್ಮಾನ್​ ಖಾನ್​ ಜತೆ ಮುಜುಗರವಾಗಿ ವರ್ತಿಸಿ ಭಾರೀ ಟ್ರೋಲ್​​ಗೊಳಗಾಗಿದ್ದ ಬಿಗ್​ಬಾಸ್​ ಖ್ಯಾತಿಯ ಪಂಜಾಬ್​ ಗಾಯಕಿ ಶೆಹನಾಜ್​ ಗಿಲ್​ ಇದೀಗ ಸ್ಪಷ್ಟನೆ ನೀಡಿದ್ದಾರೆ.
ಸಲ್ಮಾನ್​ ಖಾನ್​ ನಿವಾಸದಲ್ಲಿ ನಡೆದ ಈದ್​​ ಪಾರ್ಟಿ ಮುಗಿಸಿ ವಾಪಸ್ಸಾಗುವ ವೇಳೆ ಸಲ್ಮಾನ್ ಖಾನ್​ ಕೈ ಹಿಡಿದೇ ಹೊರಬಂದ ಶೆಹನಾಜ್​​, ತಮ್ಮ ಕಾರಿನವರೆಗೂ ಸಲ್ಮಾನ್​ ಅವರನ್ನು ತಬ್ಬಿ ಹಿಡಿದು, ಮುತ್ತು ಕೊಟ್ಟು ಮುಜುಗರಕ್ಕೊಳಗಾಗುವಂತೆ ಮಾಡಿದ್ದರು.
ಸ್ವತಃ ಸಲ್ಮಾನ್ ಖಾನ್ ಕೂಡ ಬಿಡಿಸಿಕೊಳ್ಳು ಎಷ್ಟೇ ಪ್ರಯತ್ನಪಟ್ಟರೂ, ಎಲ್ಲರ ಮುಂದೆ ಸಲ್ಮಾನ್ ಅವರನ್ನು ಬಿಡದೇ ನಿಂತಿದ್ದ ಶೆಹನಾಜ್​ ಅವರನ್ನು ನೆಟ್ಟಿಗರು ಭಾರೀ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಇದಕ್ಕೆ ಪ್ರತಿಕ್ರಿಯಿಸಿರುವ ಶೆಹನಾಜ್​, ನಾನು ಕೇವಲ ಧನಾತ್ಮಕ ವಿಷಯಗಳನ್ನಷ್ಟೇ ತೆಗೆದುಕೊಳ್ಳುವೆ, ಋಣಾತ್ಮಕ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಟ್ವೀಟ್​ ಮಾಡಿದ್ದಾರೆ.
ಬಾಲಿವುಡ್​ನಲ್ಲಿ ಬ್ಯಾಡ್​ ಬಾಯ್​ ಎಂದು ಕರೆಸಿಕೊಂಡಿದ್ದರೂ ಸಹ, ತಮ್ಮ ಉತ್ತಮ ವ್ಯಕ್ತಿತ್ವದಿಂದ ತಮ್ಮದೇ ಇಮೇಜ್​ ಗಳಿಸಿಕೊಂಡಿರುವ ಸಲ್ಮಾನ್​ ಖಾನ್​ ಅವರೊಂದಿಗೆ ಈ ರೀತಿ ನಡೆದುಕೊಳ್ಳಬಾರದಿತ್ತು ಎಂದು ಟ್ವಿಟ್ಟಿಗರು ಟ್ರೋಲ್​ ಮಾಡಿದ್ದರು. ಅಲ್ಲದೇ ಬಿಗ್​ ಬಾಸ್​ 13ನೇ ಆವೃತ್ತಿಯಲ್ಲಿ ಪರಿಚಯವಾಗಿದ್ದ ಸಿದ್ಧಾರ್ಥ್​ ಶುಕ್ಲಾ ಅವರಿಲ್ಲ ಹಾಗಾಗಿ ಸಲ್ಮಾನ್​ ಅವರನ್ನೇ ಸಿದ್ಧಾರ್ಥ್​ ಎಂದುಕೊಂಡಿರಬಹುದು ಎಂದೂ ಕೂಡ ಕೆಲವರು ಪ್ರತಿಕ್ರಿಯಿಸಿದ್ದರು.(ಏಜೆನ್ಸೀಸ್​)
ರಾಷ್ಟ್ರ ರಾಜಧಾನಿಯಲ್ಲಿ ತಂಪೆರೆದ ವರುಣ: ದೆಹಲಿಯ ಹಲವೆಡೆ ಭಾರೀ ಮಳೆ, ವಿಮಾನ ಸಂಚಾರ ವಿಳಂಬ

ಹಲವು ವರ್ಷಗಳಿಂದ ಮುಚ್ಚಿದ ಆಸ್ಪತ್ರೆ ಕಟ್ಟಡದಲ್ಲಿ ಇಬ್ಬರು ಹೆಣ್ಣು ಮಕ್ಕಳು ಸೇರಿ ನಾಲ್ವರ ಶವ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
