ನವದೆಹಲಿ:ಕರೊನಾ ವಿರುದ್ಧ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವ ಸೇನಾನಿಗಳಾದ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರ ಸೇವೆಯನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.
ಲಾಕ್​ಡೌನ್​ ಸಮಯದಲ್ಲೂ ಇವರ ಸೇವೆಗೆ ಪೂರಕ ಹಾಗೂ ಪರೋಕ್ಷವಾಗಿ ಹಲವರು ಶ್ರಮಿಸುತ್ತಿದ್ದಾರೆ. ಅದರಲ್ಲೂ ಈ ಯೋಧರಿಗೆ ಗುರಾಣಿ ನೀಡುವ ಕೆಲಸದಲ್ಲಿ ತೊಡಗಿದೆ ಸ್ತ್ರೀಶಕ್ತಿ.
ದೇಶಾದ್ಯಂತ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಟೇಲರಿಂಗ್​ ಕೌಶಲವನ್ನು ಬಳಸಿಕೊಂಡು ಮಾಸ್ಕ್​, ಪಿಪಿಇ ಕಿಟ್​, ಸ್ಯಾನಿಟೈಜರ್​ ತಯಾರಿಕೆ ಮೊದಲಾದವುಗಳಲ್ಲಿ ತೊಡಗಿವೆ.
ಇದನ್ನೂ ಓದಿ;ಭಾರತದ ವೈದ್ಯಕೀಯ ರಾಯಭಾರ, 90ಕ್ಕೂ ಅಧಿಕ ರಾಷ್ಟ್ರಗಳಿಗೆ ನೆರವು
ಮಾರ್ಚ್​ನಿಂದ ಈವರೆಗೆ 10 ಕೋಟಿಗೂ ಹೆಚ್ಚು ಮಾಸ್ಕ್​ಗಳನ್ನು ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿದ್ದಾರೆ. 12 ರಾಜ್ಯಗಳ 4,000ಕ್ಕೂ ಅಧಿಕ ಮಹಿಳೆಯರು 2 ಲಕ್ಷಕ್ಕೂ ಅಧಿಕ ಪಿಪಿಇ ಕಿಟ್​ಗಳನ್ನು ಉತ್ಪಾದಿಸಿದ್ದಾರೆ ಎಂದು ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆ ಮಾಹಿತಿ ನೀಡಿದೆ.
ದೀನ್​ದಯಾಳ್​ ಅಂತ್ಯೋದಯ ಯೋಜನೆಯ- ರಾಷ್ಟ್ರೀಯ ಜೀವನಾಧಾರ ಯೋಜನೆಯಡಿಯಲ್ಲಿ ಈ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ಮಹಿಳೆಯರು ಪಿಪಿಇ ಕಿಟ್​ಗಳಲ್ಲಿ ಬಳಸಲಾಗುವ ಮಾಸ್ಕ್​, ಫೇಸ್​ಶೀಲ್ಡ್​, ಕೈಗವಸು, ಶೂ ಕವರ್​, ಗೌನ್​ ಮೊದಲಾದವುಗಳನ್ನು ತಯಾರಿಸಿ ನೀಡುತ್ತಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ;ಕರೊನಾ ಲಸಿಕೆ ಸಂಶೋಧನೆ ಮಾಹಿತಿಗೆ ಚೀನಾ ಹ್ಯಾಕರ್​ಗಳಿಂದ ಕನ್ನ…!
ಸ್ವಸಹಾಯ ಸಂಘಗಳ ಮೂಲಕ ಮೂರು ಲಕ್ಷ ಲೀಟರ್​ ಸ್ಯಾನಿಟೈಜರ್​ ಉತ್ಪಾದಿಸಲಾಗಿದೆ. ಹಲವು ಕಡೆಗಳಲ್ಲಿ ಸಾಮುದಾಯಿಕ ಅಡುಗೆ ಮನೆಗಳನ್ನು ನಿರ್ವಹಿಸುತ್ತಿದ್ದಾರೆ. ಈ ಸಂಘಗಳಿಗೆ ನೆರವಾಗಲು ಕೇಂದ್ರ ಸರ್ಕಾರವು ಮೊದಲ ಕಂತಿನ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಇಲಾಖೆ ತಿಳಿಸಿದೆ.
ಸ್ವಾವಲಂಬನೆ ಸಾಧಿಸಿದ ಭಾರತ:ಆರಂಭದಲ್ಲಿ ಪಿಪಿಇ ಕಿಟ್​ಗಳನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕಿತ್ತು. ಆದರೆ, ಈಗ ಇದರಲ್ಲಿ ನಾವು ಸ್ವಾವಲಂಬನೆಯನ್ನು ಸಾಧಿಸಿದ್ದೇವೆ. ಪ್ರತಿದಿನ ಎರಡು ಲಕ್ಷಕ್ಕೂ ಅಧಿಕ ಪಿಪಿಇ ಕಿಟ್​ಗಳನ್ನು ಉತ್ಪಾದಿಸಲಾಗುತ್ತಿದೆ. ಅದರಲ್ಲೂ ಮೇ 2ರಂದು ಒಂದೇ ದಿನ 2.06 ಲಕ್ಷ ಪಿಪಿಇ ಕಿಟ್​ಗಳನ್ನು ತಯಾರಿಸಲಾಗಿದೆ. ಇದು ಅಸಾಧ್ಯವೆನಿಸಿದ ಗುರಿಯಾಗಿತ್ತು. ಈ ನಿಟ್ಟಿನಲ್ಲಿ ಭಾರತವೀಗ ತನಗೆ ಅಗತ್ಯವಾದ ಕಿಟ್​ಗಳನ್ನು ತಾನೇ ತಯಾರಿಸಿಕೊಳ್ಳುತ್ತಿದೆ ಎಂದು ಆರೋಗ್ಯ ಇಲಾಕೆ ಅಧಿಕಾರಿಗಳು ತಿಳಿಸಿದ್ದಾರೆ.
ಕರೊನಾದೊಂದಿಗೆ ಬದುಕಲು ಕಲಿಯಿರಿ, ಇನ್ನೆರಡು ವರ್ಷ ಲಸಿಕೆ ಅನುಮಾನ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
