ನವ ದೆಹಲಿ:ಭಾರತದ ಕ್ರಿಕೆಟ್ ತಂಡದ ಆಲ್​​ರೌಂಡರ್ ರವೀಂದ್ರ ಜಡೇಜಾ ಗಾಯದಿಂದಾಗಿ ಏಷ್ಯಾಕಪ್ ಸರಣಿಯ ಅರ್ಧದಿಂದಲೇ ಹೊರನಡೆದಿದ್ದರು. ಶಸ್ತ್ರಚಿಕಿತ್ಸೆಯ ನಂತರ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕಟ್ ಅಕಾಡೆಮಿಯಲ್ಲಿರುವ ಜಡೇಜಾ, ಶಿಖರ್ ಧವನ್ ಜೊತೆಗೆ ರೀಲ್ಸ್​ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಇನ್ಸ್​ಟಾಗ್ರಾಂನಲ್ಲಿ ಟ್ರೆಂಡಿಂಗ್​ನಲ್ಲಿದೆ.
ಶಿಖರ್ ಧವನ್ ಶೇರ್ ಮಾಡಿರುವ ಈ ತಮಾಷೆಯ ವಿಡಿಯೋಗೆ ನೆಟ್ಟಿಗರು ಕೂಡಾ ತಾಮಾಷೆಯಾಗಿಯೇ ಕಮೆಂಟ್ ಮಾಡುತ್ತಿದ್ದಾರೆ. ಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಕಾರಣ ಜಡೇಜಾ ಎದ್ದು ಓಡಾಡುತ್ತಿಲ್ಲ. ಹೀಗಾಗಿ ಶಿಖರ್ ಧವನ್, ಜಡೇಜಾ ಮುಂದೆಯೇ ಡ್ಯಾನ್ಸ್​ ಮಾಡಿ ಕಾಲೆಳೆದಿದ್ದಾರೆ.
ಶಿಖರ್ ಧವನ್ ಸದಾ ಒಂದಿಲ್ಲೊಂದು ತಾಮಾಷೆಯ ರೀಲ್ಸ್ ಮಾಡಿ ಇನ್ಸ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಹೆಚ್ಚಿನ ವಿಡಿಯೋಗಳಲ್ಲಿ ಸಹ ಅಟಗಾರರೂ ಕೂಡ ಕಾಣಿಸಿಕೊಳ್ಳುತ್ತಾರೆ. ಇದೀಗ ರವೀಂದ್ರ ಜಡೇಜಾ ಸರದಿ.
ಶಿಖರ್ ಧವನ್ ಶೇರ್ ಮಾಡಿರುವ ಈ ವಿಡಿಯೋದಲ್ಲಿ ಜಡೇಜಾ ಹಿಂದಿ ಡೈಲಾಗ್​ಗೆ ಲಿಪ್ ಸಿಂಕ್ ಮಾಡಿದರೆ, ಶಿಖರ್​ ಧವನ್ ಡ್ಯಾನ್ಸ್ ಮಾಡಿದ್ದಾರೆ. “Iski shaadi karwa dijiye, zimmedari ayegi to sudhar jayeja” ಎಂಬ ಡೈಲಾಗ್​ಗೆ ಜಡೇಜಾ ಧ್ವನಿ ಸೇರಿಸಿದ್ದಾರೆ. ಇವರಿಬ್ಬರ ಈ ತಮಾಷೆಯ ರೀಲ್ಸ್​​ ಭಾರತೀಯ ತಂಡದ ಕ್ರಿಕೆಟ್​ ಆಟಗಾರರು ಕಮೆಂಟ್ ಮಾಡಿದ್ದಾರೆ. ಬೌಲರ್​ಗಳಾದ ಆರ್ಶದೀಪ್​ ಸಿಂಗ್ ಹಾಗೂ ಖಲೀಲ್ ಅಹ್ಮದ್ ನಗುವ ಇಮೋಜಿ ಪೋಸ್ಟ್ ಮಾಡಿದ್ದಾರೆ.
ಶಿಖರ್ ಧವನ್ ಹಾಗೂ ರವೀಂದ್ರ ಜಡೇಜಾ ಮುಂಬರುವ ಟಿ-20 ವಿಶ್ವಕಪ್​ನಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಸದ್ಯ ಇವರಿಬ್ಬರೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ. (ಏಜೆನ್ಸೀಸ್)
A post shared by Shikhar Dhawan (@shikhardofficial)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 20 =
Remember me
