ನವದೆಹಲಿ:ಅತ್ತ ಬ್ಲೂ ಫಿಲ್ಮ್​ ಕೇಸ್​​ನಲ್ಲಿ ಪತಿ ರಾಜ್​ ಕುಂದ್ರಾ ಬಂಧನವಾಗುತ್ತಿದ್ದಂತೆ ಇತ್ತ ಪತ್ನಿ ಶಿಲ್ಪಾ ಶೆಟ್ಟಿ ‘ಚಾಪ್ಟರ್’​ ಕುರಿತ ಕುತೂಹಲ ಉಂಟಾಗಿದೆ. ಅವರಿರುವ ‘ಚಾಪ್ಟರ್’ ಕ್ಲೋಸ್​ ಆಗಲಿದೆಯೇ ಅಥವಾ ಅವರ ಬದಲಿಗೆ ಬೇರೆಯವರು ಇರುವ ‘ಚಾಪ್ಟರ್’ ತೆರೆದುಕೊಳ್ಳಲಿದೆಯೇ ಎಂಬ ಕೌತುಕ ಕೂಡ ಉಂಟಾಗಿದೆ.
ಶಿಲ್ಪಾ ಶೆಟ್ಟಿ ಜಡ್ಜ್​ ಆಗಿರುವ ‘ಸೂಪರ್ ಡಾನ್ಸರ್​- ಚಾಪ್ಟರ್​ 4’ ರಿಯಾಲಿಟಿ ಶೋ ಈಗ ಎಲ್ಲರ ಗಮನವನ್ನು ಸೆಳೆಯಲಾರಂಭಿಸಿದೆ. ಅದಕ್ಕೆ ಪೂರಕವೆಂಬಂತೆ ಇಂದು ಮತ್ತೆ ಆರಂಭವಾಗಿರುವ ಶೂಟಿಂಗ್​ಗೆ ಬರಬೇಕಿದ್ದ ಶಿಲ್ಪಾ ಶೆಟ್ಟಿ ಗೈರಾಗಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ. ಇನ್ನು ಇವತ್ತಿನ ಶೂಟಿಂಗ್​ನಲ್ಲಿ ಅವರ ಬದಲಿಗೆ ಬೇರೆ ಯಾರೂ ಕಾಣಿಸಿಕೊಂಡಿಲ್ಲ.
ಮತ್ತೊಂದೆಡೆ ಕರಿಷ್ಮಾ ಕಪೂರ್​ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ‘ಸೂಪರ್ ಡಾನ್ಸರ್​- ಚಾಪ್ಟರ್​ 4’ ಇದೀಗ ಸಾಕಷ್ಟು ಕುತೂಹಲ ಉಂಟುಮಾಡಿದೆ. ಇನ್ನೊಂದೆಡೆ ಶಿಲ್ಪಾ ಪತಿ ರಾಜ್​ ಕುಂದ್ರಾ ಅವರನ್ನು ಜುಲೈ 23ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. (ಏಜೆನ್ಸೀಸ್​)
ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾ ಅರೆಸ್ಟ್​: ಅಶ್ಲೀಲ ಸಿನಿಮಾ ತಯಾರಿಸಿ ಪ್ರಸಾರ ಮಾಡುತ್ತಿದ್ದ ಆರೋಪ

ಎಸ್​ಎಸ್​ಎಲ್​ಸಿಯಲ್ಲಿ ಅಂಕ ಕಡಿಮೆ ಬರಬಹುದೇನೋ ಎಂಬ ಭಯದಿಂದ ಆತ್ಯಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
