ನವದೆಹಲಿ:ಚಿತ್ರರಂಗ ಹಾಗೂ ಉದ್ಯಮ ಕ್ಷೇತ್ರದ ಗಮನ ಸೆಳೆಯುವಂಥ ಬೆಳವಣಿಗೆಯೊಂದು ಇಂದು ನಡೆದಿದೆ. ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿಯೂ ಆಗಿರು ರಾಜ್​ ಕುಂದ್ರಾ ಅವರನ್ನು ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ಬಂಧಿಸಿದ್ದಾರೆ.
ಅಶ್ಲೀಲ ಸಿನಿಮಾಗಳನ್ನು ತಯಾರಿಸಿ ಅವುಗಳನ್ನು ಕೆಲವು ಆ್ಯಪ್​ಗಳ ಮೂಲಕ ಪ್ರಸಾರ ಮಾಡುತ್ತಿದ್ದ ಆರೋಪ ಅವರ ಮೇಲಿದೆ. ಅದರ ರೂವಾರಿ ಅವರು ಎಂಬ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಲಭಿಸಿದ ಆಧಾರದ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಅಶ್ಲೀಲ ಸಿನಿಮಾಗಳನ್ನು ಕೆಲವು ಆ್ಯಪ್​ಗಳ ಮೂಲಕ ಪ್ರಸಾರ ಮಾಡುತ್ತಿರುವ ಕುರಿತು 2021ರ ಫೆಬ್ರವರಿಯಲ್ಲಿ ಮುಂಬೈ ಕ್ರೈಂ ಬ್ರ್ಯಾಂಚ್​ನಲ್ಲಿ ಕೇಸು ದಾಖಲಾಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ 2021ರ ಜುಲೈ 19ರಂದು ರಾಜ್​ ಕುಂದ್ರಾ ವಿರುದ್ಧ ದೂರು ದಾಖಲಾಗಿತ್ತು. ಈ ಎಲ್ಲದರ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ರಾಜ್​ ಕುಂದ್ರಾ ಅವರನ್ನು ಬಂಧಿಸಿದ್ದಾರೆ.
ರಾಜ್​ ಕುಂದ್ರಾ 2009ರಲ್ಲಿ ನಟಿ ಶಿಲ್ಪಾ ಶೆಟ್ಟಿ ಅವರನ್ನು ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇದಕ್ಕೂ ಮೊದಲು ರಾಜ್​, ಕವಿತಾ ಎಂಬವರನ್ನು ಮದುವೆಯಾಗಿದ್ದು, ಆ ದಾಂಪತ್ಯಕ್ಕೆ ಒಂದು ಹೆಣ್ಣು ಮಗು ಜನಿಸಿತ್ತು. (ಏಜೆನ್ಸೀಸ್)
ರಾಜಕಾರಣಿಗಳೇ ಈತನ ಟಾರ್ಗೆಟ್, ಬಲೆ ಬೀಸಿದ್ದು ಒಬ್ಬಿಬ್ಬರಿಗಲ್ಲ!; ಶಾಸಕರ ಹೆಸರಿನಲ್ಲಿ ಶಾಸಕಿಗೇ ವಂಚಿಸಿ ಕೊನೆಗೂ ಸಿಕ್ಕಿಬಿದ್ದ..

ಎಸ್​ಎಸ್​ಎಲ್​ಸಿಯಲ್ಲಿ ಅಂಕ ಕಡಿಮೆ ಬರಬಹುದೇನೋ ಎಂಬ ಭಯದಿಂದ ಆತ್ಯಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ಎಸ್ಎಸ್​​ಎಲ್​ಸಿ ಪರೀಕ್ಷೆ: ಮೊದಲ ದಿನ ರಾಜ್ಯದ ಎಲ್ಲೆಲ್ಲಿ, ಏನೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 2 =
Remember me
