ಚೀನಾ: ನದಿಯ ಸೇತುವೆಗೆ ಸರಕು ಸಾಗಣೆ ಹಡಗು ಢಿಕ್ಕಿ ಹೊಡೆದ ಪರಿಣಾಮ ಹಲವು ವಾಹನಗಳು ನದಿಗೆ ಬಿದ್ದಿವೆ. ಈ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿದ್ದಾರೆ.
ದಕ್ಷಿಣ ಚೀನಾದ ಗುವಾಂಗ್‌ಝೌ ನಗರದ ನನ್ಶಾ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಅಪಘಾತದಿಂದ ಸೇತುವೆಯ ಮಧ್ಯ ಭಾಗ ಸಂಪೂರ್ಣ ಕುಸಿದಿದೆ.ಇದರಿಂದ ಹಲವು ವಾಹನಗಳು ಪರ್ಲ್ ನದಿಗೆ ಬಿದ್ದಿವೆ.
ಫೋಶಾನ್‌ನಿಂದ ಬಂದು ಗುವಾಂಗ್‌ಝೌ ಕಡೆಗೆ ಪ್ರಯಾಣಿಸುತ್ತಿದ್ದಾಗ, ಸರಕು ಹಡಗು ಗುವಾಂಗ್‌ಝೌನಲ್ಲಿರುವ ಲಿಕ್ಸಿನ್ ಸಮುದ್ರ ಸೇತುವೆಗೆ ಡಿಕ್ಕಿ ಹೊಡೆದಿದೆ. ಸೇತುವೆ ಮಧ್ಯದಲ್ಲಿ ಕುಸಿದಿದ್ದರಿಂದ ಬಸ್ ಸೇರಿದಂತೆ ಐದು ವಾಹನಗಳು ನದಿಗೆ ಬಿದ್ದಿವೆ. ಅಪಘಾತಕ್ಕೆ ಕಾರಣವಾದ ಹಡಗಿನಲ್ಲಿ ಯಾವುದೇ ಸರಕು ಇರಲಿಲ್ಲ ಮತ್ತು ಸೇತುವೆಯ ಕೆಳಗೆ ಸಿಲುಕಿಕೊಂಡಿತ್ತು. ಅಪಘಾತದ ದೃಶ್ಯಗಳನ್ನು  ಚೀನಾ ಸೆಂಟ್ರಲ್ ಟೆಲಿವಿಷನ್ (CCTV) ನಲ್ಲಿ ದಾಖಲಿಸಲಾಗಿದೆ.
#BreakingA cargo ship fractures a bridge in south#China's#Guangzhou, causing an unknown number of vehicles to plunge into the water on Thursday.pic.twitter.com/jfecoe7IYq
— Ifeng News (@IFENG__official)February 22, 2024

ಅಪಘಾತಕ್ಕೆ ಕಾರಣವಾದ ಹಡಗಿನ ಕ್ಯಾಪ್ಟನ್‌ನನ್ನು ಗುವಾಂಗ್‌ಝೌ ಪೊಲೀಸರು ಬಂಧಿಸಿದ್ದಾರೆ. ಲಿಕ್ಸಿನ್ ಸಮುದ್ರ ಸೇತುವೆಯ ಸುತ್ತಮುತ್ತ ವಾಸಿಸುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು  ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + ten =
Remember me
