ಮುಂಬೈ:ಸಾಯಿ ಬಾಬಾನ ಜನ್ಮ ಸ್ಥಳಕ್ಕೆ ಸಂಬಂಧಿಸಿದಂತೆ ವಾದ ವಿವಾದಗಳು ಎದ್ದಿದ್ದು, ಈ ಸಂಬಂಧ ನಾಳೆಯಿಂದ ಶಿರಡಿ ಸಾಯಿ ಬಾಬಾ ಮಂದಿರ ಮುಚ್ಚಲಿದೆ.
ಕಳೆದ ವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರು ಪ್ರಭಾನಿ ಜಿಲ್ಲೆಯ ಪಥ್ರಿ ಎಂಬ ಗ್ರಾಮವೇ ಸಾಯಿ ಬಾಬಾ ಅವರ ಜನ್ಮ ಸ್ಥಳ ಎಂದಿದ್ದರು. ಅಲ್ಲದೆ ಈ ಬಾರಿ ಬಜೆಟ್​ನಲ್ಲಿ ಸಾಯಿ ಬಾಬಾ ಜನ್ಮ ಸ್ಥಳವಾದ ಪಥ್ರಿ ಅಭಿವೃದ್ಧಿಗೆ 100 ಕೋಟಿ ರೂಪಾಯಿಗಳ ಅನುದಾನ ನೀಡಲಾಗುವುದು ಎಂದು ಘೋಷಿಸಿದ್ದರು.
ಉದ್ಧವ್​ ಠಾಕ್ರೆ ಅವರ ಈ ಹೇಳಿಕೆಯಿಂದಾಗಿ ವಿವಾದ ಉಂಟಾಗಿತ್ತು. ಈ ನಡುವೆ ಶಿರಡಿಯ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್​ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಭಾನುವಾರದಿಂದ ದೇಗುಲ ಬಂದ್​ ಮಾಡಲಾಗುವುದು ಎಂದು ತಿಳಿಸಿದೆ.
ಸಾಯಿ ಬಾಬಾ ಸಂಸ್ಥಾನ ಟ್ರಸ್​​ ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಚರ್ಚಿಸಲು ಇಂದು ಸಭೆ ಆಯೊಜಿಸಿದೆ. ಇದರಲ್ಲಿ ಟ್ರಸ್ಟ್​ನವರು ಮತ್ತು ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಟ್ರಸ್ಟಿ ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 2 =
Remember me
