ಮುಂಬೈ:ಬಾಬುಲನಾಥ ದೇವಾಲಯವು ಮುಂಬೈನ ಅತ್ಯಂತ ಪುರಾತನ ಮತ್ತು ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿ ದಿನ ಹಲವಾರು ಭಕ್ತರು ತಮ್ಮ ಹರಕೆಯನ್ನು ಅರ್ಪಿಸಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಬಾಬುಲನಾಥಕ್ಕೆ ಭಕ್ತರನ್ನು ಸೆಳೆಯುವ ಪ್ರಮುಖ ಕಾರಣವೆಂದರೆ ಅದು ಹೊಂದಿರುವ ಹಳೆಯ ಶಿವಲಿಂಗ. ದೂರದೂರುಗಳಿಂದ ಭಕ್ತರು ಆಗಮಿಸಿ ಪುಣ್ಯಸ್ಮರಣೆ ಮಾಡುತ್ತಾರೆ. ಈ ಶಿವಲಿಂಗವು ಬಿರುಕು ಮೂಡಿದೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಮೊದಲ ಬಾರಿಗೆ ಬಿರುಕುಗಳು ಪತ್ತೆಯಾದಾಗ, ದೇವಸ್ಥಾನದ ಟ್ರಸ್ಟಿಗಳು ತಜ್ಞರ ಸಹಾಯವನ್ನು ಕೇಳಿದ್ದರು. ಬಿರುಕುಗಳಿಗೆ ಕಾರಣವೇನು ಎಂಬುದನ್ನು ತಜ್ಞರು ಕಂಡುಹಿಡಿಯಬೇಕೆಂದು ಅವರು ಬಯಸಿದ್ದರು. ಪೂಜೆಯ ಸಮಯದಲ್ಲಿ ಬಳಸುವ ವಸ್ತುಗಳಿಂದಾಗಿ ಬಿರುಕುಗಳು ಉಂಟಾಗಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಕೈಲಾಸ ದೇಶಕ್ಕಾಗಿ ಸಲ್ಲಿಸಿದ ಅರ್ಜಿ ವಜಾ ಮಾಡಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ
ಇಲ್ಲಿಯ ಪ್ರಾಚೀನ ಬಾಬುಲನಾಥ ಶಿವಲಿಂಗದಲ್ಲಿ ಬಿರುಕು ಮೂಡಿದೆ. ಐ.ಐ.ಟಿ. ಮುಂಬೈ ವರದಿಯಿಂದ ಈ ವಿಷಯ ಬಹಿರಂಗವಾಗಿದೆ. ಶಿವಲಿಂಗದ ಮೇಲೆ ಹಾಲು, ನೀರು ಮತ್ತು ಇತರ ವಸ್ತುಗಳನ್ನು ಅಭಿಷೇಕ್ ಮಾಡಲಾಗುತ್ತದೆ. ಕಲಬೆರಕೆ ಬಣ್ಣ, ಭಸ್ಮ, ಕುಂಕುಮ, ಚಂದನ, ಹಾಲು ಅರ್ಪಿಸಿರುವುದರಿಂದ ಶಿವಲಿಂಗಕ್ಕೆ ಬಿರುಕು ಮೂಡಿರುವುದು ಪ್ರಾಥಮಿಕ ಮಾಹಿತಿ ಕಂಡು ಬಂದಿದೆ. ಇದರಿಂದ ಅಲ್ಲಿ ಭಕ್ತರಿಗೆ ಅಭಿಷೇಕ ಮಾಡುವುದನ್ನು ಆಡಳಿತವರ್ಗವು ನಿರ್ಬಂಧಿಸಿದೆ.
ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಕಾಂಗ್ರೆಸ್​​ ನಾಯಕಿ ಅರೆಸ್ಟ್​​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 10 =
Remember me
