ಮುಂಬೈ:ನೌಕಾಪಡೆಯ ನಿವೃತ್ತ ಹಿರಿಯ ಅಧಿಕಾರಿಯೋರ್ವರಿಗೆ ಶಿವಸೇನೆ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಬಿಜೆಪಿ ಎಂಎಲ್​ಎ ಅತುಲ್​ ಭಟ್ಕಲ್ಕರ್ ಆರೋಪಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ಕಾರ್ಟೂನ್​​ನ್ನು ವಾಟ್ಸ್​ಆ್ಯಪ್​​ನಲ್ಲಿ ಫಾರ್​​ವರ್ಡ್​ ಮಾಡುತ್ತಿದ್ದಾರೆ ಎಂದು ಶಿವಸೇನೆ ಎಂಟು ಮಂದಿ ಗೂಂಡಾಗಳು ಸೇರಿ ನಿವೃತ್ತ ನೇವಿ ಅಧಿಕಾರಿ ಮದನ್​ ಶರ್ಮಾ ಅವರನ್ನು ಥಳಿಸಿದ್ದಾರೆ ಎಂದು ಹೇಳಿದ್ದಾರೆ.
ಕಂಡಿವಲಿ ಪೂರ್ವದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶಿವಸೇನೆ ಶಾಖಾ ಪ್ರಮುಖ್​ ಮದನ್​ ಶರ್ಮಾ ಅವರಿಗೆ ಕರೆ ಮಾಡಿ, ಮನೆಯಿಂದ ಈಚೆ ಬರುವಂತೆ ತಿಳಿಸಿದ್ದಾರೆ. ಮದನ್​ ಶರ್ಮಾ ಅವರು ಹೊರಗೆ ಬರುತ್ತಿದ್ದಂತೆ ಅವರನ್ನು ಥಳಿಸಿದ್ದಾರೆ. ಇದರಿಂದ ಶರ್ಮಾ ಅವರ ಕಣ್ಣಿಗೆ ಗಂಭೀರ ಗಾಯವಾಗಿದೆ ಎಂದು ಅತುಲ್​ ಅವರು ತಿಳಿಸಿದ್ದಾರೆ.ಅಷ್ಟೇ ಅಲ್ಲ, ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥರಿಗೆ ಒಂದು ಎಚ್ಚರಿಕೆ ನೀಡುತ್ತಿದ್ದೇನೆ. ನಿಮ್ಮ ಗೂಂಡಾಗಿರಿಗೆ ಹೆದರಿ ಮಹಾರಾಷ್ಟ್ರದ ಜನರು ಖಂಡಿತ ಸುಮ್ಮನೆ ಕೂರುವುದಿಲ್ಲ ಎಂಬುದು ನೆನಪಿರಲಿ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ:ಕಂಗನಾರನ್ನು ಕರೆದೊಯ್ದ ಇಂಡಿಗೋಗೆ ಡಿಜಿಸಿಎ ನೋಟಿಸ್​ !
ಈ ನಿವೃತ್ತ ಅಧಿಕಾರಿಗೆ 66 ವರ್ಷ ವಯಸ್ಸಾಗಿದ್ದು, ಅವರ ಪುತ್ರಿಯೂ ಕೂಡ, ತನ್ನ ತಂದೆಯ ಮೇಲೆ ಹಲ್ಲೆ ನಡೆದಿದ್ದಾಗಿ ಆರೋಪಿಸಿದ್ದಾರೆ.
ತಮ್ಮ ಮೇಲೆ ಸುಮಾರು 12 ಮಂದಿ ಹಲ್ಲೆ ನಡೆಸಿದ್ದಾಗಿ ಮದನ್​ ಶರ್ಮಾ ಹೇಳಿದ್ದಾರೆ. ಅಲ್ಲಿಗೆ ಬಂದ ಪೊಲೀಸರೂ ನನ್ನನ್ನೇ ಬಂಧಿಸಲು ಮುಂದಾದರು. ಆದರೆ ಬಿಜೆಪಿ ಶಾಸಕ ಅತುಲ್​ ಮತ್ತು ರಾಣಿ ದ್ವಿವೇದಿ ಸಹಾಯ ಮಾಡಿದರು ಎಂದು ತಿಳಿಸಿದ್ದಾರೆ. ಶಿವಸೇನೆ ಕಾರ್ಯಕರ್ತರ ವಿರುದ್ಧ ಸಂತ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.(ಏಜೆನ್ಸೀಸ್​)
https://www.facebook.com/VVani4U/videos/989235978225462/?t=0




ಬಿಕ್ಕಟ್ಟು ಶಮನಕ್ಕೆ ಭಾರತ-ಚೀನಾ ಮಾತುಕತೆ: ಐದು ಅಂಶಗಳ ಒಪ್ಪಂದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 20 =
Remember me
