ಮುಂಬೈ:ಮಹಾರಾಷ್ಟ್ರವನ್ನು ಕರೊನಾ ಇನ್ನಿಲ್ಲದಂತೆ ಕಾಡುತ್ತಿದೆ. ದೇಶದಲ್ಲಿ ಕರೊನಾ ಸೋಂಕಿತರ 33,160ಕ್ಕೆ ತಲುಪಿದ್ದರೆ, ಮಹಾರಾಷ್ಟ್ರವೊಂದರಲ್ಲಿಯೇ ಇವರ ಸಂಖ್ಯೆ 10,000ಕ್ಕೆ ತಲುಪಿದೆ.
ಕಳೆದ ನವೆಂಬರ್​ನಲ್ಲಿ ರಾಜಕೀಯ ಹೈಡ್ರಾಮಾ ನಡುವೆ ಅಧಿಕಾರಕ್ಕೆ ಬಂದ ಶಿವಸೇನೆ, ಕಾಂಗ್ರೆಸ್​ ಹಾಗೂ ಎನ್​ಸಿಪಿ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ಉದ್ಧವ್​ ಠಾಕ್ರೆ ಅಧಿಕಾರ ಸ್ವೀಕರಿಸಿದ್ದಾರೆ. ಇದೀಗ ಮತ್ತೊಂದು ರಾಜಕೀಯ ಹೈಡ್ರಾಮಾಗೆ ಮಹಾರಾಷ್ಟ್ರ ಸಾಕ್ಷಿಯಾಗುತ್ತಾ ಎಂಬ ಆತಂಕ ಮೈತ್ರಿಕೂಟದ ಮುಖಂಡರಲ್ಲಿ ಮನೆ ಮಾಡಿದೆ.
ಉದ್ಧವ್​ ಠಾಕ್ರೆ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದರೆ, ಅಧಿಕಾರ ಸ್ವೀಕರಿಸಿದ ಆರು ತಿಂಗಳೊಳಗೆ ವಿಧಾನಸಭೆ ಅಥವಾ ವಿಧಾನಪರಿಷತ್​ ಸದಸ್ಯರಾಗಿ ಆಯ್ಕೆಯಾಗಬೇಕು. ಅಂದರೆ ಮೇ 27ರ ಒಳಗಾಗಿ ಆಯ್ಕೆಯಾಗಬೇಕು. ಅಂದರೆ ಇನ್ನೊಂದು ತಿಂಗಳು ಕೂಡ ಕಾಲಾವಕಾಶವಿಲ್ಲ. ಇದು ಶಿವಸೇನೆ ಮುಖಂಡರ ಹೃದಯಬಡಿತ ಹೆಚ್ಚಾಗಿಸಿದೆ.
ಸದ್ಯ ವಿಧಾನಪರಿಷತ್​ 9 ಸ್ಥಾನಗಳಿಗಾಗಿ ನಡೆಯಬೇಕಿದ್ದ ಚುನಾವಣೆಗಳನ್ನು ಕರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಈ ನಡುವೆ ಮಹಾರಾಷ್ಟ್ರ ಸಚಿವ ಸಂಪುಟ ಈಗಾಗಲೇ ಉದ್ಧವ್​ ಠಾಕ್ರೆ ಅವರನ್ನು ವಿಧಾನಪರಿಷತ್​ಗೆ ನಾಮ ನಿರ್ದೇಶನ ಮಾಡಿ ರಾಜ್ಯಪಾಲರಿಗೆ ಪ್ರಸ್ತಾವನೆ ಕಳುಹಿಸಿದೆ. ಆದರೆ, ಸಂಪುಟದ ಶಿಫಾರಸುಗಳ ಬಗ್ಗೆ ರಾಜ್ಯಪಾಲ ಭಗತ್​ ಸಿಂಗ್​ ಕೋಶಿಯಾರಿ ಮೌನವಾಗಿದ್ದಾರೆ.
ಸದ್ಯ ಸರ್ಕಾರವನ್ನು ಉಳಿಸಲು ಅಂದರೆ ಉದ್ಧವ್​ ಠಾಕ್ರೆ ಅವರನ್ನೇ ಸಿಎಂ ಆಗಿ ಮುಂದುವರಿಯುವಂತೆ ಮಾಡಲು ಇರುವ ಎಲ್ಲ ಮಾರ್ಗಗಳ ಶೋಧ ನಡೆದಿದೆ. ಸ್ವತಃ ಸಿಎಂ ಉದ್ಧವ್​ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರಿಂದ ರಾಜಭವನಕ್ಕೆ ಒಂದೆರಡು ದಿನಗಳಲ್ಲಿ ‘ಸೂಚನೆ’ ಬರಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದಲ್ಲದೇ, ಪರಿಷತ್​ ಚುನಾವಣೆಗಳನ್ನು ನಡೆಸುವಂತೆ ಆಯೋಗಕ್ಕೆ ಪತ್ರ ಬರೆಯುವುದು. ಇನ್ನೊಂದು ಆಯ್ಕೆ ಎಂದರೆ, ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸುವುದು, ಆ ಮೂಲಕ ಚುನಾವಣೆಗಳನ್ನು ನಡೆಸುವಂತೆ ಆಯೋಗಕ್ಕೆ ನಿರ್ದೇಶಿಸುವಂತೆ ಕೋರುವುದು.
ಆದರೆ, ಠಾಕ್ರೆ ರಾಜೀನಾಮೆ ಸಂದರ್ಭ ಎದುರಾಗಲಿಕ್ಕಿಲ್ಲ ಎಂದೇ ಶಿವಸೇನೆ ನಂಬಿಕೊಂಡಿದೆ. ಅಷ್ಟಕ್ಕೂ ಉದ್ಧವ್​ ಠಾಕ್ರೆ ನಾಮ ನಿರ್ದೇಶನವನ್ನು ರಾಜ್ಯಪಾಲರು ಅಂಗೀಕರಿಸದಿದ್ದರೆ, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಮೈತ್ರಿಕೂಟದ ಅಧ್ಯಕ್ಷರಾಗಿ ಮತ್ತೊಮ್ಮೆ ಅವರನ್ನೇ ಆಯ್ಕೆ ಮಾಡುವ ಚಿಂತನೆ ನಡೆದಿದೆ. ಆದರೆ, ಸರ್ಕಾರ ಬಿದ್ದ ಸಂದರ್ಭವನ್ನು ಬಿಜೆಪಿ ಅಧಿಕಾರಕ್ಕೇರಲು ಬಳಸದೇ ಇರುತ್ತಾ ಎನ್ನುವುದು ಪ್ರಶ್ನೆ. ಅದಕ್ಕಾಗಿ ಈಗಿನಿಂದಲೇ ತಂತ್ರ ಹಣೆಯುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಐಸ್​ಕ್ರೀಂ, ಶೀತಲೀಕೃತ ಆಹಾರ ಸೇವನೆಯಿಂದ ಕರೊನಾ ಹರಡುತ್ತಾ? ಇಲ್ಲಿದೆ ಫ್ಯಾಕ್ಟ್​ಚೆಕ್​



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 3 =
Remember me
