ಮುಂಬೈ:ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ವಿಪಕ್ಷಗಳು ಒಂದುಗೂಡಿದ್ದು, ಈ ನಿಟ್ಟಿನಲ್ಲಿ ಆಗಸ್ಟ್​ 31 ಹಾಗೂ ಸೆಪ್ಟೆಂಬರ್​ 1ರಂದು ಮುಂಬೈನಲ್ಲಿ I.N.D.I.A ಒಕ್ಕೂಟದ ಮೂರನೇ ಸಭೆಯನ್ನೂ ನಡೆಸಲಾಗುವುದು ಎಂದು ಶಿವಸೇನೆಯ(ಉದ್ಧವ್​ ಠಾಕ್ರೆ ಬಣ) ರಾಜ್ಯಸಭೆ ಸದಸ್ಯ ಸಂಜಯ್​ ರಾವುತ್​ ತಿಳಿಸಿದ್ದಾರೆ.
ಮಹಾ ವಿಕಾಸ್​ ಅಘಾಡಿ ನಾಯಕರ ಜೊತೆ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾವುತ್​ ಮುಂಬೈನಲ್ಲಿ ನಡೆಯಲಿರುವ I.N.D.I.A ಒಕ್ಕೂಟದ ಮೀಟಿಂಗ್​ನ ನೇತೃತ್ವವನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:VIDEO| ಗಲಭೆ ಪೀಡಿತ ನೂಹ್​ ಪ್ರದೇಶದಲ್ಲಿ 60ಕ್ಕೂ ಹೆಚ್ಚು ಅಂಗಡಿ-ಮನೆಗಳನ್ನು ನೆಲಸಮ ಮಾಡಿದ ಸರ್ಕಾರ
ಈ ಹಿಂದೆ ಪಟನಾ ಹಾಗೂ ಬೆಂಗಳೂರಿನ ರೀತಿಯಲ್ಲೇ ಮುಂಬೈನಲ್ಲಿ ನಡೆಯುವ ಸಭೆಯೂ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಮಹಾ ವಿಕಾಸ್​ ಅಘಾಡಿಯ ಪ್ರತಿಯೊಬ್ಬ ನಾಯಕರಿಗೂ ಜವಾಬ್ದಾರಿಗಳನ್ನು ವಹಿಸಲಾಗಿದೆ. ಮುಂಬೈನ ಗ್ರ್ಯಾಂಡ್​ ಹಯಾಟ್​​​​ ಹೋಟೆಲ್​ನಲ್ಲಿ ಎರಡು ದಿನಗಳ ಕಾಲ ಸಭೆ ನಡೆಯಲಿದೆ. ಸಭೆಗೆ ಆಗಮಿಸುತ್ತಿರುವ ನಾಯಕರ ಭದ್ರತೆ, ವಾಹನ ವ್ಯವಸ್ಥೆ ಕುರಿತು ರಾಜ್ಯ ಸರ್ಕಾರದೊಂದಿಗೆ ಮಹಾ ವಿಕಾಸ್​ ಅಘಾಡಿಯ ನಾಯಕರು ಮಾತನಾಡಲಿದ್ದಾರೆ ಎಂದು ಶಿವಸೇನೆಯ(ಉದ್ಧವ್​ ಠಾಕ್ರೆ ಬಣ) ರಾಜ್ಯಸಭೆ ಸದಸ್ಯ ಸಂಜಯ್​ ರಾವುತ್​ ತಿಳಿಸಿದ್ದಾರೆ.
ಜೂನ್​ 23ರಂದು ಬಿಹಾರದ ಪಟನಾದಲ್ಲಿ, ಜುಲೈ 13, 14ರಂದು ಬೆಂಗಳೂರಿನಲ್ಲಿ 26 ವಿರೋಧ ಪಕ್ಷಗಳ ಒಕ್ಕೂಟವಾದ I.N.D.I.Aದ ಸಭೆ ನಡೆಸಲಾಗಿತ್ತು. ಬಿಹಾರದ ಪಟನಾದಲ್ಲಿ ನಡೆದ ಸಭೆಯ ನೇತೃತ್ವವನ್ನು ಸಿಎಂ ನಿತೀಶ್​ ಕುಮಾರ್​ ವಹಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ನಡೆದ ಸಭೆಯ ನೇತೃತ್ವವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಹಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 4 =
Remember me
