ಮುಂಬೈ: ಬೈಹನ್​ಮುಂಬೈ ಮುನ್ಸಿಪಲ್ ಕಾರ್ಪೊರೇಷನ್​(ಬಿಎಂಸಿ)ನ 141ನೇ ವಾರ್ಡ್​ ಮನ್​ಕುಡ್​ನ ಉಪಚುನಾವಣೆಯಲ್ಲಿ ಶಿವಸೇನೆ ಗೆಲುವಿನ ನಗೆ ಬೀರಿದೆ.ಈ ವಾರ್ಡ್​ನ ಉಪಚುನಾವಣೆ ಗುರವಾರ ನಡೆದಿದ್ದು, ಶುಕ್ರವಾರ ಮತ ಎಣಿಕೆ ಆಗಿದೆ. ಶಿವಸೇನೆಯ ಅಭ್ಯರ್ಥಿ ವಿಠಲ ಲೋಕರೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬಬ್ಲು ಪಾಂಚಾಲ್ ಅವರನ್ನು 1,385 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಲೋಕರೆಗೆ 4,427 ಮತಗಳು ಬಿದ್ದರೆ, ಬಬ್ಲೂಗೆ 3,042 ಮತಗಳು ಸಿಕ್ಕಿವೆ. ಕಣದಲ್ಲಿ ಒಟ್ಟು 18 ಅಭ್ಯರ್ಥಿಗಳು ಇದ್ದರು. ಈ ವಾರ್ಡ್​ಗೆ ಉಪಚುನಾವಣೆ ನಡೆಯಲು ಕಾರಣವಾಗಿದ್ದು ಲೋಕರೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಲೋಕರೆ ಅಲ್ಲಿ ರಾಜೀನಾಮೆ ಕೊಟ್ಟು 2019ರ ಆಗಸ್ಟ್​ನಲ್ಲಿ ಶಿವಸೇನೆ ಸೇರಿದ್ದರು. ಬಳಿಕ ಶಿವಸೇನೆಯ ಟಿಕೆಟ್​ ಪಡೆದು ಅಕ್ಟೋಬರ್​ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮನ್​ಕುದ್​ ಶಿವಾಜಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಆದರೆ, 25,000 ಮತಗಳ ಅಂತರದ ಸೋಲು ಕಂಡರು.
ಭಾರತದ ಅತ್ಯಂತ ಶ್ರೀಮಂತ ಸ್ಥಳೀಯಾಡಳಿತ ಸಂಸ್ಥೆ ಇದಾಗಿದ್ದು, 227 ಸದಸ್ಯರಿದ್ದಾರೆ. ಇಲ್ಲಿ ಶಿವಸೇನೆಯ ಆಡಳಿತ ಇದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 14 =
Remember me
