ಮುಂಬೈ:ಇತ್ತೀಚೆಗೆ ಕರ್ನಾಟಕದ ವಕೀಲೆಯೊಬ್ಬರು ಸಾಹಿತಿ ಭಗವಾನ್​ ಮೇಲೆ ಕಪ್ಪು ಮಸಿ ಎರಚಿ ಸುದ್ದಿಯಾಗಿತ್ತು. ಇದೀಗ ಅದೇ ತರಹದ ಮತ್ತೊಂದು ಘಟನೆ ಮಹಾರಾಷ್ಟ್ರದ ಸೊಲಾಪುರದಲ್ಲಿ ವರದಿಯಾಗಿದೆ. ಆಡಳಿತದಲ್ಲಿರುವ ಶಿವಸೇನೆ ಪಕ್ಷದ ಕಾರ್ಯಕರ್ತರು ಬಿಜೆಪಿ ನಾಯಕನೊಬ್ಬನ ಮೇಲೆ ಕಪ್ಪು ಮಸಿ ಎರಚಿರುವುದಾಗಿ ಸುದ್ದಿಯಾಗಿದೆ.
ಭಾನುವಾರದಂದು ಇಂತದ್ದೊಂದು ಘಟನೆ ನಡೆದಿದೆ. ವೈಟ್​ ಅಂಡ್​ ವೈಟ್​ ಧರಿಸಿರುವ ಒಂದಿಷ್ಟು ಜನರು ಓರ್ವ ವ್ಯಕ್ತಿಯನ್ನು ಸುತ್ತುವರೆದು, ಕಪ್ಪು ಮಸಿ ಎರಚುತ್ತಾರೆ. ಅದಾದ ಮೇಲೆ ಸೀರೆಯೊಂದನ್ನು ಆತನ ಹೆಗಲ ಮೇಲಿಟ್ಟು, ತೊಡುವಂತೆ ಆಗ್ರಹಿಸುತ್ತಾರೆ. ಈ ರೀತಿ ದಾಳಿ ನಡೆಸಿದವರು ಶಿವಸೇನೆಯ ಕಾರ್ಯಕರ್ತರು ಎನ್ನಲಾಗಿದೆ. ದಾಳಿಗೆ ಒಳಗಾದವ ಬಿಜೆಪಿ ನಾಯಕ ಶಿರೀಶ್ ಕಟೇಕರ್ ಎಂದು ಎಎನ್​ಐ ವರದಿ ಮಾಡಿದೆ. ಆತ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು, ಅದೇ ಕಾರಣಕ್ಕೆ ಈ ರೀತಿ ಮಾಡಿರುವುದಾಗಿ ತಿಳಿಸಲಾಗಿದೆ.
ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸೋಲಾಪುರ ಪೊಲೀಸ್​ ಠಾಣೆಯಲ್ಲಿ 17 ಜನರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)
#UPDATEFIR registered against 17 accused, all of them arrested: Solapur Police, Maharashtra
Shiv Sena workers had poured black ink on a BJP leader and forced him to wear a saree after the latter criticised Chief Minister Uddhav Thackeray, in Solapur yesterday.https://t.co/jLCjUBwTci
— ANI (@ANI)February 8, 2021

ಪಾಕ್‌ಗೆ ತೆರಳಿದ ಕಾಶ್ಮೀರಿ ಯುವಕರು ಕಣ್ಮರೆ- ವಾಪಸ್‌ ಬಂದವರೂ ನಾಪತ್ತೆ! ಆತಂಕದ ವರದಿ ಬಿಚ್ಚಿಟ್ಟ ಭದ್ರತಾ ಪಡೆ

ಕಾರು ತೊಳೆಯುತ್ತಿದ್ದವ ಮಾಟ ಮಂತ್ರ ಶುರು ಮಾಡಿದ ! ಈಗ ಪೊಲೀಸರ ಅತಿಥಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
