ಮುಂಬೈ:ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ 2024ರ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿಲ್ಲ. ಬಿಜೆಪಿ ಉತ್ತಮ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ಕುರಿತು ಉದ್ಧವ್ ಗುಂಪಿನ ಸಂಸದ ಮತ್ತು ವಕ್ತಾರ ಸಂಜಯ್ ರಾವತ್ ಮಹಾರಾಷ್ಟ್ರ ರಾಜಕೀಯದಲ್ಲಿ ಖಳನಾಯಕನಿದ್ದರೆ ಅದು ಬಿಜೆಪಿಯ ದೇವೇಂದ್ರ ಫಡ್ನವಿಸ್ ಎಂದು ಲೇವಡಿ ಮಾಡಿದ್ದಾರೆ.
ಇದನ್ನು ಓದಿ:ಮೋದಿ 3.0 ಪ್ರಮಾಣ ವಚನ ಸಮಾರಂಭಕ್ಕೆ ಯಾರೆಲ್ಲಾ ಬರಲಿದ್ದಾರೆ?: ಇಲ್ಲಿದೆ ಜಾಗತಿಕ ನಾಯಕರ ಪಟ್ಟಿ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ದೇವೇಂದ್ರ ಫಡ್ನವಿಸ್ ಕಾರಣ. ಫಡ್ನವೀಸ್ ಅವರು ಹಲವಾರು ಕುಟುಂಬಗಳನ್ನು ನಾಶಪಡಿಸಿದ್ದಾರೆ. ಅಲ್ಲದೆ ಅವರು ರಾಜಕೀಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಅದರ ಫಲಿತಾಂಶವೇ ಬಿಜೆಪಿಯ ಈ ಸೋಲು ಎಂದು ರಾವತ್​ ಆರೋಪಿಸಿದ್ದಾರೆ.
“ಮಹಾರಾಷ್ಟ್ರದಲ್ಲಿನ ವೈಫಲ್ಯದ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ನನಗೆ ವಿಧಾನಸಭೆಗೆ ಪೂರ್ಣ ಸಮಯ ಕೆಲಸ ಮಾಡಲು ಅವಕಾಶ ನೀಡುವಂತೆ ಪಕ್ಷದ ಉನ್ನತ ನಾಯಕತ್ವವನ್ನು ನಾನು ವಿನಂತಿಸುತ್ತೇನೆ. ನಾನು ಅವರ ಆದೇಶವನ್ನು ಅನುಸರಿಸುತ್ತೇನೆ. ಅದರಂತೆ ಮುಂದೆಯೂ ಕೆಲಸ ಮಾಡುತ್ತೇನೆ” ಎಂದು ಉಪಮುಖ್ಯಮಂತ್ರಿ ಫಡ್ನವೀಸ್ ಹೇಳಿದ್ದರು.
ಫಡ್ನವೀಸ್ ಅವರ ಈ ಹೇಳಿಕೆಗೆ ರಾವತ್, ರಾಜಕೀಯದಲ್ಲಿ ಇದೆಲ್ಲ ಗಿಮಿಕ್. ಪ್ರಧಾನಿ ಮೋದಿ ಕೂಡ ನಾಟಕ ಮಾಡುತ್ತಾರೆ, ಕೆಲವೊಮ್ಮೆ ನಗುತ್ತಾರೆ ಮತ್ತು ಕೆಲವೊಮ್ಮೆ ದುಃಖಿಸುತ್ತಾರೆ. ಫಡ್ನವಿಸ್ ಅವರ ಶಿಷ್ಯರು. ಅವರಂತೆ ಇವರು ನಾಟಕ ಮಾಡುತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 13 ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಒಂಬತ್ತು, ಎನ್‌ಸಿಪಿ-ಎಸ್‌ಪಿ ಎಂಟು, ಶಿವಸೇನೆ ಏಳು ಮತ್ತು ಎನ್‌ಸಿಪಿ ಒಂದು ಸ್ಥಾನವನ್ನು ಗೆದ್ದವು. (ಏಜೆನ್ಸೀಸ್​​)
ದೆಹಲಿ ನೀರಿನ ಸಮಸ್ಯೆ : 137 ಕ್ಯೂಸೆಕ್​​ ಹೆಚ್ಚುವರಿ ನೀರು ಬಿಡುವಂತೆ ಹಿಮಾಚಲಪ್ರದೇಶಕ್ಕೆ ಸುಪ್ರೀಂಕೋರ್ಟ್​ ಸೂಚನೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × one =
Remember me
