ಮುಂಬೈ:ಮಹಾರಾಷ್ಟ್ರದ ‘ಮಹಾ ವಿಕಾಸ್ ಆಘಾಡಿ’ ಮೈತ್ರಿಕೂಟದಲ್ಲಿ ಪ್ರಮುಖ ಖಾತೆಗಳ ಹಂಚಿಕೆ ವಿಚಾರದಲ್ಲಿ ಮಿತ್ರಪಕ್ಷಗಳ ನಡುವೆ ಪೈಪೋಟಿ ಹಾಗೂ ಭಿನ್ನಮತ ಇರುವುದನ್ನು ಶಿವಸೇನೆ ಗುರುವಾರ ಒಪ್ಪಿಕೊಂಡಿದೆ. ಸಚಿವಾಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಾಗಲಿಲ್ಲ ಎಂದು ಅದು ಹೇಳಿದೆ.
36 ಮಂತ್ರಿಗಳನ್ನು ಸೇರಿಸಿಕೊಂಡು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ಸಚಿವ ಸಂಪುಟ ವಿಸ್ತರಿಸಿದ್ದರು. ಸಚಿವ ಸ್ಥಾನ ವಿಚಾರದಲ್ಲಿ ಮೈತ್ರಿಕೂಟದಲ್ಲಿ ಅತೃಪ್ತಿ ಇರುವುದನ್ನು ನೋಡಿ ಪ್ರತಿಪಕ್ಷ ಖುಷಿಪಡುತ್ತಿರಬಹುದು. ಆದರೆ ಹಿಂದಿನ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರ್ಕಾರವೂ ಇಂಥ ಅತೃಪ್ತಿಗೆ ಹೊರತಾಗಿರಲಿಲ್ಲ ಎಂದು ಶಿವಸೇನೆ ಪತ್ರಿಕೆ ‘ಸಾಮ್ನಾ’ ಹೇಳಿದೆ. ಶಿವಸೇನೆಗೆ ಬೆಂಬಲ ನೀಡಿದ ಮೂವರು ಪಕ್ಷೇತರರಿಗೆ ಕೂಡ ಸಚಿವ ಸ್ಥಾನ ನೀಡಿ ಶಿವಸೇನೆ ತನ್ನ ಮಾತನ್ನು ಉಳಿಸಿಕೊಂಡಿದೆ ಎಂದು ಅದು ತಿಳಿಸಿದೆ. ‘ಒಂದು ಪ್ರಬಲ ಹಾಗೂ ಅನುಭವಿ ಸಚಿವ ಸಂಪುಟ ನಮ್ಮದಾಗಿದ್ದು ಅದಕ್ಕೆ ಕೆಲಸ ಮಾಡಲು ಬಿಡಬೇಕು’ ಎಂದು ಶಿವಸೇನೆ ಹೇಳಿದೆ.
ಅಜಿತ್​ಗೆ ಹಣಕಾಸು, ಚವಾಣ್​ಗೆ ಪಿಡಬ್ಲ್ಯೂಡಿ?: ಮಹಾರಾಷ್ಟ್ರದ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಮೈತ್ರಿಕೂಟದ ಮೂರೂ ಪಕ್ಷಗಲ್ಲಿ ಭಿನ್ನಮತ ಉಂಟಾಗಿರುವ ನಡುವೆಯೇ ಗುರುವಾರ ಸಚಿವರಿಗೆ ಖಾತೆಗಳ ಹಂಚಿಕೆಯ ಕಸರತ್ತು ಮುಂದುವರಿಯಿತು. ಗುರುವಾರ ಅಥವಾ ಶುಕ್ರವಾರ ಖಾತೆ ಹಂಚಿಕೆ ಆಗಬಹುದು ಎಂದು ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್​ಸಿಪಿ) ಹಿರಿಯ ನಾಯಕ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್​ಗೆ ಹಣಕಾಸು ಖಾತೆ ಸಿಗುವ ಸಾಧ್ಯತೆಯಿದೆ. ಕಾಂಗ್ರೆಸ್ ಪಕ್ಷದ ಮುಖಂಡ ಅಶೋಕ್ ಚವಾಣ್​ಗೆ ಲೋಕೋಪಯೋಗಿ ಖಾತೆಯ ಹೊಣೆ ಸಿಗುವ ನಿರೀಕ್ಷೆಯಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − four =
Remember me
