ಮುಂಬೈ:ಛತ್ರಪತಿ ಶಿವಾಜಿಯ ಹುಲಿ ಪಂಜ ನವೆಂಬರ್​ನಲ್ಲಿ ಲಂಡನ್​ನಿಂದ ಭಾರತಕ್ಕೆ ಮರಳಲಿದೆ. ಈ ಹುಲಿ ಪಂಜ ಆಯುಧವು ಪ್ರಸ್ತುತ ಲಂಡನ್​ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿದೆ.
ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಸುಧೀರ್ ಮುಂಗಂತಿವಾರ್ ಈಗಾಗಲೇ ಲಂಡನ್ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತಕ್ಕೆ ತರಲು ಅಗತ್ಯವಿರುವ ಎಲ್ಲ ಅನುಮತಿ ಪಡೆಯಲಾಗಿದೆ. ಶೀಘ್ರದಲ್ಲೇ ಅವರು ತಮ್ಮ ತಂಡದೊಂದಿಗೆ ಲಂಡನ್​ಗೆ ತೆರಳಿ ಬ್ರಿಟಿಷ್ ಮ್ಯೂಸಿಯಂನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಈ ವರ್ಷ ಛತ್ರಪತಿ ಶಿವಾಜಿಯ 350ನೇ ವಾರ್ಷಿಕೋತ್ಸವವನ್ನು ಗುರುತಿಸುವುದರಿಂದ, ಈ ಸಮಯದಲ್ಲಿ ಲಂಡನ್​ನಲ್ಲಿರುವ ಅವರ ಆಯುಧವನ್ನು ಭಾರತಕ್ಕೆ ತಂದು ಗೌರವ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಿದೆ.
ಹುಲಿ ಪಂಜವನ್ನು ಭಾರತದಲ್ಲಿ ಮೂರು ವರ್ಷಗಳ ಕಾಲ ಮ್ಯೂಸಿಯಂನಲ್ಲಿ ಇರಿಸಲಾಗುವುದು ಮತ್ತು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಲಾಗುವುದು. ಇದನ್ನು ದಕ್ಷಿಣ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂನಲ್ಲಿ ಇಡುವ ಸಾಧ್ಯತೆಗಳಿವೆ. ಲಂಡನ್​ನಿಂದ ಹುಲಿ ಪಂಜ ಮರಳಿ ತರಲು ಭದ್ರತೆ ಮತ್ತು ಸಾರಿಗೆ ವ್ಯವಸ್ಥೆ ಯೋಜಿಸಲು ಮಹಾರಾಷ್ಟ್ರ ಸರ್ಕಾರ 11 ಸದಸ್ಯರ ಸಮಿತಿ ರಚಿಸಿದೆ. 1659ರ ಪ್ರತಾಪಗಡ ಕದನದಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್​ನನ್ನು ಸೋಲಿಸಲು ಛತ್ರಪತಿ ಶಿವಾಜಿ ಅವರು ಈ ಆಯುಧವನ್ನು ಬಳಸಿದ್ದರಿಂದ ಐತಿಹಾಸಿಕ ಮಹತ್ವ ಪಡೆದಿದೆ. ಇದು ಮರಾಠ ಸಾಮ್ರಾಜ್ಯದ ಸ್ಥಾಪನೆಯ ಮಹತ್ವದ ತಿರುವು.
ಬ್ರಿಟನ್ ಸೇರಿದ್ದು ಹೇಗೆ?:ಛತ್ರಪತಿ ಶಿವಾಜಿ ಯುದ್ಧಕ್ಕಾಗಿ ವಿಶೇಷವಾಗಿ ತಯಾರಿಸಿದ ಈ ಆಯುಧವನ್ನು ಆತನ ವಂಶಸ್ಥರು ಈಸ್ಟ್ ಇಂಡಿಯಾ ಕಂಪನಿ ಅಧಿಕಾರಿ ಜೇಮ್ಸ್ ಗ್ರಾಂಟ್ ಡಫ್ ಅವರಿಗೆ ನೀಡಿದ್ದರು. ಜೇಮ್ಸ್ ಗ್ರಾಂಟ್ ಭಾರತದಲ್ಲಿ ಸೇವೆ ಸಲ್ಲಿಸಿದ ನಂತರ ಬ್ರಿಟನ್​ಗೆ ಆಯುಧವನ್ನು ತೆಗೆದುಕೊಂಡು ಹೋದರು. ಡಫ್ ಅವರ ವಾರಸುದಾರರು ನಂತರ ಅದನ್ನು ವಸ್ತುಸಂಗ್ರಹಾಲಯಕ್ಕೆ ದಾನ ಮಾಡಿದ್ದಾರೆ. ಅಂದಿನಿಂದ ಬ್ರಿಟನ್ ಮ್ಯೂಸಿಯಂನಲ್ಲಿ ಇಡಲಾಗಿದೆ.
ಕಾರು ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವು; ವಾಹನ ಚಲಾಯಿಸುತ್ತಿದ್ದ ಚಿತ್ರನಟ ನಾಗಭೂಷಣ್ ಮದ್ಯಪಾನ ಮಾಡಿದ್ದರಾ?

ಎಮ್ಮೆಗೆ ನೀರು ಕುಡಿಸಲು ಹೋದ ಪತ್ನಿಗೆ ಶಾಕ್; ಹೆಂಡತಿಯನ್ನು ರಕ್ಷಿಸಲು ಧಾವಿಸಿದ ಗಂಡ; ಕೊನೆಗೆ ಇಬ್ಬರ ಸಾವು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + 12 =
Remember me
