ನವದೆಹಲಿ: ಆಗಸ್ಟ್​ 5ರಂದು ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದೆ. ಅದರ ನಿಮಿತ್ತ ಆಗಸ್ಟ್​ 4ರಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು ತಮ್ಮ ನಿವಾಸದಲ್ಲಿ ಹನುಮಾನ್​ ಚಾಲೀಸಾ ಪಠಣ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಮಲನಾಥ್​ ಅವರ ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ನ ಹಲವು ಪ್ರಮುಖರು ಪಾಲ್ಗೊಂಡಿದ್ದರು.ಇದೀಗ ಅಂದಿನ ಹನುಮಾನ್​ ಚಾಲೀಸಾ ಪಠಣ ಕಾರ್ಯಕ್ರಮದ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವಿಚಾರವನ್ನಿಟ್ಟುಕೊಂಡು ಕಮಲನಾಥ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ:ಬಾಬ್ರಿ ಮಸೀದಿ ಧ್ವಂಸದ ತೀರ್ಪು ಸೆ.30 ರೊಳಗೆ ನೀಡಿ; ಸುಪ್ರೀಂ ಸೂಚನೆ; ಏನಾಗುತ್ತೆ ಅಡ್ವಾಣಿ, ಜೋಶಿ, ಕಲ್ಯಾಣ್​ ಸಿಂಗ್​ ಭವಿಷ್ಯ?
ಹನುಮಾನ್​ ಚಾಲೀಸಾ ಪಠಣ ಭಕ್ತರಿಗೆ ಅನುಗ್ರಹಿಸುತ್ತದೆ ಹೊರತು ದೆವ್ವಗಳಿಗೆ ಅಲ್ಲ ಎಂದು ಕಿಡಿಕಾರಿದ್ದಾರೆ. ಬಳಿಕ ಸ್ಪಷ್ಟನೆ ನೀಡಿದ್ದ ಕಮಲನಾಥ್​ ಅವರು, ನಾನು ಹನುಮಾನ್​ ಚಾಲೀಸಾ ಪಠಣ ಮಾಡಿದ್ದಕ್ಕೂ, ಭೂಮಿಪೂಜೆಗೂ ಯಾವುದೇ ಸಂಬಂಧವಿಲ್ಲ. ನಾನು ಈ ಕಾರ್ಯಕ್ರಮ ಮಾಡಿದ್ದು ಮಧ್ಯಪ್ರದೇಶದ ಅಭಿವೃದ್ಧಿ, ಒಳಿತಿಗಾಗಿ ಎಂದು ಹೇಳಿದ್ದರು.
ಇದೀಗ ಶಿವರಾಜ್​ ಸಿಂಗ್ ಚೌಹಾಣ್​ ಅವರು ಪ್ರತಿಕ್ರಿಯೆ ನೀಡಿ, ಕಮಲನಾಥ್​ ಅವರು ರಾಮಮಂದಿರ ಭೂಮಿ ಪೂಜೆಯ ಮುನ್ನಾದಿನ ಹನುಮಾನ ಚಾಲೀಸಾ ಪಠಿಸಿದ್ದಾರೆ. ಆದರೆ ಹನುಮಾನ ಚಾಲೀಸಾ ಪಠಣ ಭಕ್ತರಿಗೆ ಒಳಿತು ಮಾಡುತ್ತದೆ ಹೊರತು ದೆವ್ವಗಳಿಗೆ ಅಲ್ಲ ಎಂದಿದ್ದಾರೆ. (ಏಜೆನ್ಸೀಸ್​)
ಕೆಲಸ ಕಳೆದುಕೊಂಡ ಮೂವರು ಸ್ನೇಹಿತರು ಹಣಕ್ಕಾಗಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
