ಮುಂಬೈ:ಶಬ್ದ ಮಾಲಿನ್ಯ ತಗ್ಗಿಸಲು ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಬೇಕು ಎಂದು ಶಿವಸೇನೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಶಿವಸೇನೆಯ ಮುಖವಾಣಿ ‘ಸಾಮ್ನಾ’ ಪತ್ರಿಕೆಯಲ್ಲಿ ಸಂಪಾದಕೀಯದಲ್ಲಿ ಈ ಆಗ್ರಹ ಮಾಡಲಾಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಹೇಳಿದೆ. ಮುಸ್ಲಿಂ ಮಕ್ಕಳಿಗಾಗಿ ‘ಆಜಾನ್’ ಎಂಬ ವಾಚನ ಕಾರ್ಯಕ್ರಮ ನಡೆಸಬೇಕು ಎಂದು ಶಿವಸೇನೆಯ ಮುಂಬೈ ದಕ್ಷಿಣ ವಿಭಾಗದ ಪ್ರಮುಖರಾಗಿರುವ ಪಾಂಡುರಂಗ ಸಕ್ಪಾಲ್ ನೀಡಿದ್ದ ಸಲಹೆ ವಿವಾದವೆಬ್ಬಿಸಿದ ಬೆನ್ನಲ್ಲೇ ಶಿವಸೇನೆ ಈ ಬೇಡಿಕೆ ಮುಂದಿಟ್ಟಿದೆ.
ಶಿವಸೇನೆ ನಾಯಕರ ‘ಆಜಾನ್’ ಪ್ರಸ್ತಾಪಕ್ಕೆ ಬಿಜೆಪಿ ನಾಯಕರು ವಿರೋಧಿಸುತ್ತಿರುವುದು ಅಕ್ಷಮ್ಯ. ದೆಹಲಿಯ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ‘ಪಾಕಿಸ್ತಾನಿ ಪ್ರೇರಿತ ಉಗ್ರಗಾಮಿಗಳು’ ಎಂದು ಆರೋಪಿಸುತ್ತಿರುವ ರೀತಿಯಲ್ಲೇ ಪಾಂಡುರಂಗ ಸಕ್ಪಾಲ್ ಮೇಲೆ ಟೀಕೆಗಳನ್ನು ಮಾಡಲಾಗಿದೆ ಎಂದು ಬಿಜೆಪಿ ವಿರುದ್ಧ ಶಿವಸೇನೆ ಕಿಡಿಕಾರಿದೆ. ಈ ವಿಷಯ ವನ್ನು ನಾವು ರಾಜಕೀಯಗೊಳಿಸುವುದಿಲ್ಲ. ದೇಶದಲ್ಲಿ 22 ಕೋಟಿ ಮುಸ್ಲಿಂ ಜನಸಂಖ್ಯೆಯಿದೆ ಎಂದೂ ಸಾಮ್ನಾದಲ್ಲಿ ಹೇಳಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + eight =
Remember me
