ಮುಂಬೈ:ಭಾರತದ ಷೇರು ಸೂಚ್ಯಂಕ ಕಳೆದ ಒಂದೂವರೆ ವರ್ಷದಲ್ಲೇ ಅತಿದೊಡ್ಡ ಏಕದಿನ ಕುಸಿತ ದಾಖಲಿಸಿದೆ. ಸೆನ್ಸೆಕ್ಸ್ ಬುಧವಾರ 1,628 ಪಾಯಿಂಟ್ (ಶೇ.2.23) ಇಳಿಕೆ ಕಂಡು ಹೂಡಿಕೆದಾರರನ್ನು ಕಂಗೆಡಿ ಸಿದೆ. ಬ್ಯಾಂಕಿಂಗ್, ಲೋಹ ಮತ್ತು ತೈಲ ಷೇರುಗಳಲ್ಲಿನ ತೀವ್ರ ಮಾರಾಟ ಕಂಡುಬಂತು. ದುರ್ಬಲ ಜಾಗತಿಕ ಪ್ರವೃತ್ತಿಗಳಿಂದ ಮಾರುಕಟ್ಟೆ ಭಾರಿ ಇಳಿಕೆ ಕಂಡಿತು. ಸೆನ್ಸೆಕ್ಸ್ 1,628.01 ಪಾಯಿಂಟ್ ಕುಸಿದು 71,500.76ಕ್ಕೆ ಸ್ಥಿರವಾಯಿತು. ದಿನದ ಸಮಯದಲ್ಲಿ 1,699.47 ಇಳಿಕೆ ಆಗಿತ್ತು. ನಿಫ್ಟಿ 460.35 ಪಾಯಿಂಟ್ (ಶೇ. 2.09) ಕುಸಿದು 21,571.95 ಕ್ಕೆ ಸ್ಥಿರವಾಯಿತು. ಜೂನ್ 2022ರ ನಂತರ ಇದು ದೊಡ್ಡ ಮಟ್ಟದ ಕುಸಿತವಾಗಿದೆ.
ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ಮೂರನೇ ತ್ರೖೆಮಾಸಿಕ ಫಲಿತಾಂಶದಲ್ಲಿ ಮಾರುಕಟ್ಟೆಯ ನಿರೀಕ್ಷೆಗಳನ್ನು ಪೂರೈಸಲು ವಿಫಲವಾದ ಕಾರಣ ಶೇ. 8 ಇಳಿಕೆ ಕಂಡಿತು. ಅದರ ಮಾರುಕಟ್ಟೆ ಮೌಲ್ಯವು 1 ಲಕ್ಷ ಕೋಟಿ ರೂ.ಗಿಂತ ಹೆಚ್ಚು ತಗ್ಗಿತು. ಇದರ ಜತೆಗೆ ಇತರ ಬ್ಯಾಂಕ್ ಷೇರುಗಳೂ ಕುಸಿದ ಕಾರಣ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸಂಭವಿಸಿತು. ಕೊಟಕ್ ಮಹೀಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್​ಬಿಐ ಮತ್ತು ಇಂಡಸ್ ಇಂಡ್ ಬ್ಯಾಂಕ್ ಸಹಿತ ಬಹುತೇಕ ಬ್ಯಾಂಕಿಂಗ್ ಷೇರುಗಳಲ್ಲಿ ಭಾರಿ ಮಾರಾಟ ಕಂಡುಬಂತು. ಟಾಟಾ ಸ್ಟೀಲ್, ಜೆಎಸ್​ಡಬ್ಲೂ್ಯ ಸ್ಟೀಲ್, ಬಜಾಜ್ ಫಿನ್​ಸರ್ವ್, ಮಾರುತಿ, ಏಷ್ಯನ್ ಪೇಂಟ್ಸ್, ಟಾಟಾ ಮೋಟಾರ್ಸ್ ಇನ್ನಿತರ ಷೇರುಗಳಲ್ಲಿ ಇಳಿಕೆ ಕಂಡುಬಂತು. ಎಚ್​ಸಿಎಲ್ ಟೆಕ್ನಾಲಜೀಸ್, ಇನ್ಪೋಸಿಸ್, ಟೆಕ್ ಮಹೀಂದ್ರಾ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ನೆಸ್ಲೆ ಮತ್ತು ಲಾರ್ಸೆನ್ ಟೂಬ್ರೊ ಲಾಭ ಗಳಿಸಿದವು. ಜಾಗತಿಕ ತೈಲ ಮಾನದಂಡ ಬ್ರೆಂಟ್ ತೈಲವು ಬ್ಯಾರೆಲ್​ಗೆ ಶೇ. 1.84ರಷ್ಟು ಕುಸಿದು, 76.85 ಡಾಲರ್​ಗೆ ತಲುಪಿದೆ.
1.5 ಲಕ್ಷ ರೂ. ಮುಟ್ಟಿದ ಎಂಆರ್​ಎಫ್:ಎಂಆರ್​ಎಫ್ ಎಂದೇ ಜನಪ್ರಿಯವಾಗಿರುವ ಮದ್ರಾಸ್ ರಬ್ಬರ್ ಫ್ಯಾಕ್ಟರಿಯ ಷೇರುಗಳು ಬುಧವಾರ 1.5 ಲಕ್ಷ ರೂ. ಗಡಿಯನ್ನು ಮುಟ್ಟಿದವು. ಷೇರು ಸತತ ಆರನೇ ವಹಿವಾಟಿನಲ್ಲೂ ಏರಿಕೆ ಕಂಡಿತು. ಇದು ಭಾರತದ ಅತ್ಯಂತ ದುಬಾರಿ ಷೇರು ಎಂಬ ಖ್ಯಾತಿಗೂ ಪಾತ್ರವಾಗಿದೆ. ಆದರೆ ಮಧ್ಯಾಹ್ನದ ನಂತರ ಇಳಿಕೆ ಕಂಡು 1,37,711 ರೂ.ನಲ್ಲಿ ಮುಕ್ತಾಯ ಕಂಡಿತು.
ಎಲ್​ಐಸಿ ನಂ.1 ಸರ್ಕಾರಿ ಕಂಪನಿ:ಭಾರತೀಯ ಜೀವ ವಿಮಾ ನಿಗಮ (ಎಲ್​ಐಸಿ) ಭಾರತದ ಅತ್ಯಂತ ಮೌಲ್ಯಯುತವಾದ ಸರ್ಕಾರಿ ಕಂಪನಿಯಾಗಿ ಹೊರಹೊಮ್ಮಿದೆ. ಷೇರು ಬೆಲೆ ಏರಿಕೆಯಾದ ಕಾರಣ ಬುಧವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಹಿಂದಿಕ್ಕಿದೆ. ಸರ್ಕಾರಿ ಕಂಪನಿಗಳ ಮೌಲ್ಯದಲ್ಲಿ ಎಲ್​ಐಸಿ ಅಗ್ರಸ್ಥಾನ ಪಡೆದಿದ್ದರೂ, ಕಂಪನಿ ಹೂಡಿಕೆದಾರರ ಸಂಪತ್ತಿ ನಲ್ಲಿ ಗಮನಾರ್ಹ ಏರಿಕೆ ಕಂಡುಬಂದಿಲ್ಲ. ಐಪಿಒ ಬೆಲೆಯಲ್ಲೇ ಈಗ ಎಲ್​ಐಸಿ ಷೇರು ವಹಿವಾಟು ನಡೆಸುತ್ತಿದೆ. ಸುಮಾರು 2 ವರ್ಷಗಳಿಂದ ನಷ್ಟದಲ್ಲೇ ವಹಿವಾಟು ನಡೆಸುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಐಪಿಒ ಬೆಲೆಗಿಂತ ತುಸು ಹೆಚ್ಚಿನ ಮಟ್ಟ ತಲುಪಿದೆ. ಬುಧವಾರ ಕಂಪನಿಯ ಷೇರಿನ ಬೆಲೆ ಮೊದಲ ಬಾರಿಗೆ -ಠಿ;900 ತಲುಪಿದೆ. ಇದು ಎಲ್​ಐಸಿಯ 52 ವಾರಗಳ ಗರಿಷ್ಠ ಮಟ್ಟವಾಗಿದೆ. ಎಲ್​ಐಡಿ ಷೇರು 2022ರ ಮೇ 17ರಂದು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿತ್ತು. ಪ್ರತಿ ಷೇರಿಗೆ -ಠಿ;875. 25ರಂತೆ ಐಪಿಒ ದರ ನಿಗದಿಯಾಗಿತ್ತು. ವಿತರಣೆ ಬೆಲೆ -ಠಿ;949 ಆಗಿತ್ತು. ನಂತರ ಷೇರು ಸತತವಾಗಿ ನಷ್ಟ ಅನುಭವಿಸಿದೆ. -ಠಿ;530 ಕನಿಷ್ಠ ಮಟ್ಟ ತಲುಪಿ, ಈಗ ಚೇತರಿಕೆ ಕಾಣುತ್ತಿದೆ.
ಚಿನ್ನ 400 ರೂ. ಇಳಿಕೆ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದುರ್ಬಲ ಸೂಚನೆಗಳ ನಡುವೆ ಬುಧವಾರ ಚಿನ್ನದ ಬೆಲೆ 10 ಗ್ರಾಂಗೆ 400 ರೂ. ಕುಸಿದು 63,050 ರೂ.ಗೆ ತಲುಪಿದೆ. ಬೆಳ್ಳಿ ಕೂಡ ಪ್ರತಿ ಕಿಲೋ ಗ್ರಾಂಗೆ 600 ರೂ. ಇಳಿಕೆ ಕಂಡು, 75,800 ರೂ. ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − one =
Remember me
