ಭೋಪಾಲ್​:ಚೆನ್ನೈನಿಂದ ದೆಹಲಿಗೆ ಸಾಗಿಸುತ್ತಿದ್ದ ಹೈ ಸೆಕ್ಯುರಿಟಿ ಕಾರ್ಗೋ ಟ್ರಕ್‌ನಿಂದ ಕೋಟ್ಯಂತರ ರೂಪಾಯಿ ಮೌಲ್ಯದ 1500 ಕ್ಕೂ ಹೆಚ್ಚು ಐಫೋನ್‌ಗಳನ್ನು ಕಳವು ಮಾಡಿರುವ ಘಟನೆ ಮಧ್ಯಪ್ರದೇಶದ ಸಾಗರ್​ನಲ್ಲಿ ನಡೆದಿದೆ. ಕಳವಾದ ಫೋನ್​ಗಳ ಬೆಲೆ ಸುಮಾರು 15 ಕೋಟಿ ರೂಪಾಯಿ ಎಂದು ಹೇಳಲಾಗಿದ್ದು, ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಾಗರ್ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಕಾಸ್​ ಸೆಹ್ವಾಲ್​, ಚೆನ್ನೈನಿಂದ ಲಾರಿ ದೆಹಲಿ ಕಡೆ ಹೋಗುತ್ತಿತ್ತು ಟ್ರಕ್​ನಲ್ಲಿ ಒಬ್ ಸೆಕ್ಯೂರಿಟಿ ಹಾಗೂ ಕ್ಲೀನರ್​ ಕೂಡ ಇದ್ದರು. ಲಾರಿ ಲಖ್ನಾಡಸ್​ ನರಸಿಂಗಪುರದ ನಡುವೆ ಇರುವಾಗ ಎಲ್ಲರೂ ಒಟ್ಟಿಗೆ ಚಹಾ ಸೇವಿಸಿದ್ದು, ಬಳಿಕ ಚಾಲಕನಿಗೆ ನಿದ್ದೆ ಬರಲು ಆರಂಭಿಸಿದೆ. ಇದನ್ನು ಗಮನಿಸಿದ ಕ್ಲೀನರ್​ ಹಾಗೂ ಸೆಕ್ಯೂರಿಟಿ ಗಾರ್ಡ್​ ಲಾರಿಯನ್ನು ನಿಲ್ಲಿಸಿ ನಿದ್ದೆ ಮಾಡುವಂತೆ ಹೇಳಿದ್ದು, ಅದರಂತೆ ಲಾರಿಯನ್ನು ಚಾಲಕ ಪಾರ್ಕ್​ ಮಾಡಿದ್ದಾನೆ.
ಇದನ್ನೂ ಓದಿ:ಪತಿಗಾಗಿ ಏನೇನು ತಂದಿದ್ದರು ವಿಜಯಲಕ್ಷ್ಮಿ; ಈ ಒಂದು ವಸ್ತುವನ್ನು ಜೈಲಧಿಕಾರಿಗಳು ವಾಪಸ್​ ಕಳಿಸಿದ್ದು ಯಾಕೆ ಗೊತ್ತಾ?
ಎಚ್ಚಗೊಂಡಾಗ ಆತನ ಕೈಕಾಲು ಕಟ್ಟಿರುವುದನ್ನು ಗಮನಿಸಿದ ಚಾಲಕ ತಾನು ಲಾರಿ ನಿಲ್ಲಿಸಿದ್ದಕ್ಕಿಂತ ಸುಮಾರು 125 ಕಿಲೋಮೀಟರ್​ ದೂರದ ರಸ್ತೆ ಒಂದರಲ್ಲಿ ಆತನನ್ನು ಬಿಡಲಾಗಿತ್ತು. ರಸ್ತೆ ಬದಿ ಚಾಲಕನನ್ನು ಕಟ್ಟಿಹಾಕಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಆತನ ನೆರವಿಗೆ ಧಾವಿಸಿದ್ದು, ಸ್ಥಳೀಯರ ಸಹಾಯದೊಂದಿಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾನೆ. ಈ ವೇಳೆ ಅಧಿಕಾರಿಗಳು ಆತನ ;ಆರೊ ಕಳುವಾದ ವ್ಯಾಪ್ತಿಗೆ ಬರುವ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದು, ಅದರಂತೆ ಆತ ಲಖ್ನಾಡಸ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಕರ್ತವ್ಯ ಲೋಪ ಆರೋಪದಡಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಕಳುವಾದ ಲಾರಿ ಜಿಪಿಎಸ್​ ತಂತ್ರಜ್ಞಾನ ಅಳವಡಿಸಲಾಗಿತ್ತು ಎಂದು ವರದಿಯಾಗಿದೆ. ಟ್ರಕ್​ನ ಲಾಕ್​ಗಳು ಸಹ ತಂತ್ರಜ್ಞಾನ ಆಧಾರವಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಅನುಮಾದನ ಮೇರೆಗೆ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಾಗರ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಕಾಸ್​ ಸೆಹ್ವಾಲ್​ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
