ವಿಜಯವಾಡ:ಸುಡು ಬೇಸಿಗೆ ಆರಂಭವಾಗಿರುವುದರಿಂದ ಈ ಸಮಯದಲ್ಲಿ ತಂಪು ಪಾನೀಯಗಳಿಗೆ ತುಂಬಾ ಬೇಡಿಕೆ ಹೆಚ್ಚಾಗುವುದು ಸಾಮಾನ್ಯ. ಆದರೆ, ತಂಪು ಪಾನೀಯ ಸಿಕ್ಕಿದ ಖುಷಿಯಲ್ಲಿ ಅದನ್ನು ಒಮ್ಮೆ ಪರಿಶೀಲಿಸದೇ ಹಾಗೇ ಕುಡಿದು ಬಿಡಬೇಡಿ. ಏಕೆಂದರೆ ನಾವಿಂದು ನಿಮಗೆ ನೀಡುತ್ತಿರುವ ತಾಜಾ ಉದಾಹರಣೆಯು ಆಘಾತ ಉಂಟು ಮಾಡಲಿದೆ.
ಹೌದು. ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಅಮಲಾಪುರಂನಲ್ಲಿರುವ ಪೆರೂರ್​ ವೈ ಜಂಕ್ಷನ್​ ಬೇಕರಿಯಲ್ಲಿ ಖರೀದಿಸಿ ಕೂಲ್​ ಡ್ರಿಂಕ್ಸ್​ನಲ್ಲಿ ಸತ್ತ ಹಾವಿನ ಮರಿ ನೋಡಿ ಗ್ರಾಹಕ ಬೆಚ್ಚಿ ಬಿದ್ದಿದ್ದಾನೆ.
ಇದನ್ನೂ ಓದಿರಿ:2021ರ ಪ್ರಬಲ ಮಿಲಿಟರಿ ದೇಶ ಯಾವುದು? ಒಂದು ವೇಳೆ ಯುದ್ಧ ನಡೆದ್ರೆ ಈ ರಾಷ್ಟ್ರಕ್ಕೆ ಗೆಲುವು ಖಚಿತವಂತೆ!
ಸ್ಥಳೀಯ ಬೇಕರಿಗೆ ಹೋಗಿ ಕೂಲ್​ ಡ್ರಿಂಕ್ಸ್​ ಖರೀದಿಸಿದ ಗ್ರಾಹಕ ಮನೆಗೆ ಬಂದು ಬಾಟಲ್​ ಮುಚ್ಚಳ ತೆಗೆದು ತಂಪು ಪಾನೀಯ ಕುಡಿಯುವಾಗ ಏನೋ ಒಂದು ವಿಚಿತ್ರವಾಗಿ ಕಂಡಿದೆ. ಬಳಿಕ ಕುಡಿಯುವುದನ್ನು ನಿಲ್ಲಿಸಿ ಬಾಟಲ್​ ಕೆಳಗೆ ನೋಡಿದಾಗ ಹಾವಿನ ಮರಿ ಕಂಡು ಗ್ರಾಹಕನಿಗೆ ಭಾರಿ ಆಘಾತವಾಗಿದೆ.
ಇದೀಗ ಕೂಲ್​ ಡ್ರಿಂಕ್​ನಲ್ಲಿ ಹಾವಿನ ಮರಿ ಇರುವ ಸುದ್ದಿ ಆಂಧ್ರದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಮೂರು ದಿನಗಳ ಹಿಂದೆ ಕೂಲ್​ ಡ್ರಿಂಕ್ಸ್​ ಏಜೆನ್ಸಿ ಅದನ್ನ ಒದಗಿಸಿತ್ತು. ಇದೀಗ ಗ್ರಾಹಕ ಬೇಕರಿಗೆ ದೂರು ನೀಡಿದ್ದು, ಬೇಕರಿಯವರು ಏಜೆನ್ಸಿ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಬಾಟಲ್​ ಒಳಗೆ ಹಾವು ಹೇಗೆ ಬಂದಿತು ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ.
ಹೀಗಾಗಿ ಬೇಸಿಗೆ ಇರುವುದರಿಂದ ಕೂಲ್​ ಡ್ರಿಂಕ್ಸ್​ ಮೊರೆ ಹೋಗುವವರು ಕುಡಿಯುವ ಮುನ್ನ ಅದನ್ನೊಮ್ಮೆ ಪರಿಶೀಲಿಸುವುದು ಒಳಿತು. ಇಲ್ಲವಾದಲ್ಲಿ ಇದೇ ರೀತಿಯ ಅನುಭವವನ್ನು ಒಂದು ನೀವು ಎದುರಿಸಿದರೆ ಅಚ್ಚರಿಯೇನಿಲ್ಲ.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಇದನ್ನೂ ಓದಿರಿ:ಸಲೂನ್​ ಹುಡುಗನ ಮರ್ಮಾಂಗ ಸ್ಪರ್ಶಿಸಿದ ಲಾಯರ್​: ದೂರಿನಲ್ಲಿ ವಕೀಲನ ಕರಾಳ ಮುಖ ಅನಾವರಣ!
ಇಕ್ಕಟ್​ನಲ್ಲಿ ಸಿಲುಕಿದ ಭೂಮಿ; ಲಾಕ್​ಡೌನ್ ಪರಿಕಲ್ಪನೆಯ ಸಿನಿಮಾ ಇದು..

Web Exclusive | ಬಹಮನಿ ಕೋಟೆಯೊಳಗೊಂದು ಭವ್ಯ ದೇಗುಲ; ಪುರಾತತ್ವ, ಪ್ರವಾಸೋದ್ಯಮ ಇಲಾಖೆ ದಿವ್ಯ ನಿರ್ಲಕ್ಷ್ಯ

‘ಧರ್ಮ’ದ ಮಾತಿಗೆ ಟ್ರೋಲ್ ಆದ ಪ್ರಿಯಾಂಕಾ ಚೋಪ್ರಾ; ತಂದೆ ಮಸೀದಿಯಲ್ಲಿ ಹಾಡುತ್ತಿದ್ದರು ಎಂದಿದ್ದಕ್ಕೆ ಕಾಲೆಳೆದ ಟ್ವಿಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
