ನವದೆಹಲಿ :ಇಬ್ಬರು ತೃತೀಯಲಿಂಗಿಗಳು 24 ವರ್ಷದ ಯುವಕನ ಮರ್ಮಾಂಗವನ್ನು ಕೊಯ್ದು ಹಾಕಿರುವ ಘಟನೆಯೊಂದು ಉತ್ತರ ಪ್ರದೇಶದಿಂದ ವರದಿಯಾಗಿದೆ. ಸಂತ್ರಸ್ತ ಯುವಕನು ಆರೋಪಿಗಳ ಜೊತೆಗೆ ಮದುವೆ ಸಮಾರಂಭಗಳಲ್ಲಿ ನೃತ್ಯ ಮಾಡಲು ಹೋಗುತ್ತಿದ್ದ ಎನ್ನಲಾಗಿದೆ.
ಸಂತ್ರಸ್ತನ ಸೋದರಿ ದೆಹಲಿ ಗೇಟ್ ಪೊಲೀಸರಿಗೆ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಗುಡ್ಡಿ ಮತ್ತು ರಜ್ಜಿ ಎಂಬ ಇಬ್ಬರು ತೃತೀಯಲಿಂಗಿಗಳ ವಿರುದ್ಧ ಐಪಿಸಿ ಸೆಕ್ಷನ್ 326 ರ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ.
ಇದನ್ನೂ ಓದಿ:ಸಮೋಸಾ ಕೊಡ್ತೇನೆಂದು ಚಿಕ್ಕಪ್ಪ ಕರ್ಕೊಂಡೋದ… ಅಲ್ಲಿ ಅಜ್ಜನೂ ಇದ್ದ… ಭಯಾನಕ ಘಟನೆ ಬಿಚ್ಚಿಟ್ಟ 6 ವರ್ಷದ ಬಾಲಕಿ!
ಸಂತ್ರಸ್ತನು ಆರೋಪಿಗಳೊಂದಿಗೆ ಮದುವೆಯೊಂದರಲ್ಲಿ ನೃತ್ಯ ಮಾಡಲು ಏಪ್ರಿಲ್ 7 ರಂದು ತೆರಳಿದ್ದ. ಮಾರನೇ ದಿನ ಗಾಯಗೊಂಡು ರಸ್ತೆ ಮೇಲೆ ಸಿಕ್ಕ. ವಿಚಾರಿಸಲಾಗಿ ಗುಡ್ಡಿ ಮತ್ತು ರಜ್ಜಿ ತನ್ನ ಮರ್ಮಾಂಗವನ್ನು ಕತ್ತರಿಸಿಹಾಕಿದರು ಎಂದು ಹೇಳಿದ ಎನ್ನಲಾಗಿದೆ.
ಪ್ರಕರಣದ ತನಿಖೆ ಆರಂಭವಾಗಿದ್ದು, ಪೊಲೀಸರು ಹಲವಾರು ಜನರನ್ನು ಈ ಬಗೆಗೆ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸಂತ್ರಸ್ತ ಯುವಕನನ್ನು ವೈದ್ಯಕೀಯ ಶುಶ್ರೂಷೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.(ಏಜೆನ್ಸೀಸ್)
ಸೈನಿಕನನ್ನು ಕೊಂದ ಭಯೋತ್ಪಾದಕರ ಅಂತ್ಯ

ಭಾರತದಲ್ಲಿ ಇಂದಿನಿಂದ ನಾಲ್ಕು ದಿನ ‘ಲಸಿಕೆ ಉತ್ಸವ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + eight =
Remember me
