ಪಟನಾ:10 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಯೊಬ್ಬಳು ಟ್ಯೂಷನ್​ ಕ್ಲಾಸ್​ಗೆ ತೆರಳುವ ವೇಳೆಯಲ್ಲಿ ಕಿಡ್ನಾಪ್​ ಮಾಡಿ, ಗ್ಯಾಂಗ್​ ರೇಪ್​ ನಡೆಸಿರುವ ಘಟನೆ ಬಿಹಾರದ ಮುಜಾಫರ್​ನಗರದಲ್ಲಿ ನಡೆದಿದೆ. ಪಾಳು ಬಂಗಲೆಯ ಕಿಟಕಿಯಿಂದ ಹೊರ ಹಾರಿದ ಹುಡುಗಿ ಅಪರಿಚಿತರ ಸಹಾಯದಿಂದ ತನ್ನ ಪ್ರಾಣ ಉಳಿಸಿಕೊಂಡಿದ್ದಾಳೆ.
ಇದನ್ನೂ ಓದಿ:36 ಮಹಿಳೆಯರು & ಮಕ್ಕಳ ಕಿಡ್ನಾಪ್​ ಮಾಡಿದ ಗ್ಯಾಂಗ್​! ಒಂದೇ ಸಮುದಾಯವನ್ನು ಟಾರ್ಗೆಟ್​ ಮಾಡಿದ ಕಿಡ್ನಾಪರ್ಸ್​!
ಮುಜಾಫರ್​ನಗರದ ಸಕ್ರಾ ಪ್ರದೇಶದ ವಾಸಿ ಬಾಲಕಿ, ಜನವರಿ 4ರಂದು ಟ್ಯೂಷನ್​ ಕ್ಲಾಸ್​ಗೆಂದು ತನ್ನ ಸೈಕಲ್​ನಲ್ಲಿ ಹೊರಟಿದ್ದಳು. ಈ ಸಮಯದಲ್ಲಿ ಆಕೆಯ ಬಳಿ ಒಂದು ಬೊಲೆರೋ ಕಾರು ಮತ್ತೊಂದು ಬೈಕ್​ ಬಂದಿದೆ. ಬೊಲೆರೋ ಕಾರನ್ನು ಸೈಕಲ್​ಗೆ ತಾಕಿಸಲಾಗಿದ್ದು, ಬಾಲಕಿ ಮತ್ತು ಸೈಕಲ್​ ಕೆಳಗೆ ಬಿದ್ದಿದ್ದಾರೆ. ಆಗ ಬೈಕ್​​ನಲ್ಲಿದ್ದ ಒಬ್ಬ ವ್ಯಕ್ತಿ ಕೆಳಗಿಳಿದು ಬಾಲಕಿಗೆ ಕಾರನ್ನು ಹತ್ತಲು ಹೇಳಿದ್ದಾನೆ. ಅದಕ್ಕೆ ಆಕೆ ಒಪ್ಪದೆ ಚೀರಿಕೊಳ್ಳಲು ಮುಂದಾದಾಗ, ಬಾಯಿಗೆ ಬಟ್ಟೆ ತುರುಕಿ, ಮುಖವನ್ನು ಆಕೆ ತೊಟ್ಟಿದ್ದ ಸ್ಕಾರ್ಫ್​​ನಿಂದ ಮುಚ್ಚಿ, ಕಾರಳೊಗೆ ದೂಕಿದ್ದಾನೆ.
ಇದನ್ನೂ ಓದಿ:ರಾಧಿಕಾಗೆ ಮಾತ್ರವಲ್ಲ, ಬೇರೆ 8 ನಟಿಯರಿಗೂ ಲಕ್ಷಾಂತರ ಹಣ ಕೊಟ್ಟಿದ್ದ ಯುವರಾಜ್​!
ಬಾಲಕಿಯನ್ನು ಕಾರಿನಲ್ಲಿ ಒಂದು ಪಾಳು ಬಂಗಲೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಾಗಲೇ ಒಬ್ಬ ಕಾಮುಕ ಕಾರಿನಲ್ಲೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಂಗಲೆಯೊಳಗೆ ಆಕೆಯನ್ನು ಕರೆದೊಯ್ದು ಪಿಸ್ತೂಲು ತೋರಿಸಿದ ಹೆದರಿಸಿ ಐವರು ಆಕೆಯ ಮೇಲೆ ಗ್ಯಾಂಗ್​ ರೇಪ್​ ನಡೆಸಿದ್ದಾರೆ. ಆಕೆಯನ್ನು ಕೂಡಿ ಹಾಕಿ, ಅವರೆಲ್ಲ ಹೊರಗೆ ಹೋಗಿದ್ದಾಗ, ಕಿಟಕಿಯಿಂದ ಬಾಲಕಿ ಹೊರ ಹಾರಿದ್ದಾಳೆ. ಅಲ್ಲಿಂದ ಓಡಿ ಬಂದು ಅಲ್ಲೇ ಇದ್ದ ಅಪರಿಚಿತ ವ್ಯಕ್ತಿಯ ಸಹಾಯದಿಂದ ಮನೆಯವರನ್ನು ಸಂಪರ್ಕಿಸಿದ್ದಾಳೆ. ಮನೆಯವರು ಸ್ಥಳಕ್ಕೆ ಬಂದು ಆಕೆಯನ್ನು ಮನೆಗೆ ಕರೆದೊಯ್ದಿದ್ದಾರೆ. ಮನೆಯಲ್ಲಿ ಬಾಲಕಿ ನಡೆದ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದಾಳೆ. ಅದಾದ ನಂತರ ಮಹಿಳಾ ಪೊಲೀಸ್​ ಠಾಣೆಗೆ ಆಕೆಯನ್ನು ಕರೆದೊಯ್ಯಲಾಗಿದ್ದು, ದೂರು ದಾಖಲಿಸಲಾಗಿದೆ. ಇಜಾರ್​, ಆದಿತ್ಯಾ ಝಾ ಸೇರಿ ಒಟ್ಟು ಐವರು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)
ಕಬ್ಬಿನ ಗದ್ದೆಯಲ್ಲಿ ಅತ್ತಿಗೆ ಮೈದುನನ ಚಕ್ಕಂದ! ಸರಸದಲ್ಲಿದ್ದ ಜೋಡಿಯನ್ನು ಕೊಚ್ಚಿ ಕೊಂದ ಗಂಡ!

ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 6 =
Remember me
