ಇಟಾನಗರ: ಭಾರತದೊಂದಿಗೆ ಗಡಿ ಸಂಘರ್ಷಕ್ಕೆ ಇಳಿದಿರುವ ಚೀನಾ ತನ್ನ ಭಯೋತ್ಪಾದನೆಯ ಮತ್ತೊಂದು ಮುಖವನ್ನು ತೋರತೊಡಗಿದೆಯೇ? ಹೌದು ಎನ್ನುತ್ತಿದ್ದಾರೆ ಅರುಣಾಚಲ ಪ್ರದೇಶದ ಗಡಿಭಾಗದ ಜನರು. ಅಲ್ಲಿನ ಐವರು ಯುವಕರನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್​ಎ) ಅಪಹರಿಸಿದ್ದಾಗಿ ಮಾಜಿ ಕೇಂದ್ರ ಸಚಿವ, ಪಾಸಿಘಾಟ್ ವೆಸ್ಟ್ ಕ್ಷೇತ್ರದ ಶಾಸಕ ನಿನೊಂಗ್ ಎರಿಂಗ್​ ಟ್ವೀಟ್ ಮಾಡಿದ್ದಾರೆ!
ಭಾರತ-ಚೀನಾ ಗಡಿ ಭಾಗದ ಸಮೀಪ ಸೆರಾ 7 ಪ್ರದೇಶದಲ್ಲಿ ಅರುಣಾಚಲ ಪ್ರದೇಶದ ಅಪ್ಪರ್​ ಸಬನ್​ಸಿರಿ ಜಿಲ್ಲೆಯ ನಾಚೋ ವೃತ್ತದ ಐವರು ಯುವಕರನ್ನು ಚೀನಾ ಪಿಎಲ್​ಎ ಅಪಹರಿಸಿದೆ. ಅಪಹರಣಕ್ಕೆ ಒಳಗಾದವರನ್ನು ತನು ಬಾಕಡ್​, ಪ್ರಶಾಂತ್​ ರಿಂಗ್ಲಿಂಗ್, ನಗ್ರು ದಿರಿ, ದೊನ್​ಗ್ಟು ಎಬಿಯಾ ಮತ್ತು ತೋಚ್​ ಸಿಂಗ್​ಕಾಮ್​ ಎಂಬ ತಾಗಿನ್ ಸಮುದಾಯದ ಯುವಕರು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಚೀನಾಕ್ಕೆ ಜರ್ಮನಿ ಕಡಕ್ ವಾರ್ನಿಂಗ್!
ಪ್ರಕಾಶ್ ರಿಂಗ್ಲಿಂಗ್ ಎಂಬುವವರು ಫೇಸ್​ಬುಕ್​ನಲ್ಲಿ ಈ ಸಂಬಂಧ ಹಾಕಿರುವ ಪೋಸ್ಟ್ ವೈರಲ್ ಆಗಿದೆ. ನನ್ನ ಸಹೋದರ ಪ್ರಸಾದ್ ರಿಂಗ್ಲಿಂಗ್​ ಮತ್ತು ಇತರೆ ನಾಲ್ವರನ್ನು ಸೆರಾ 7ರಲ್ಲಿ ಪಿಎಲ್​ಎ ಅಪಹರಿಸಿದೆ. ಹೀಗಾಗಿ ಅರುಣಾಚಲ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕೂಡಲೇ ಈ ಹುಡುಗರನ್ನು ಸುರಕ್ಷಿತವಾಗಿ ಮನೆಗೆ ಕರೆತರುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಅದರಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಇನ್ನೂ ಅಧಿಕೃತವಾಗಿ ದೂರು ದಾಖಲಾಗಿಲ್ಲ ಎಂದು ಅಪ್ಪರ್ ಸಬನ್​ಸಿರಿ ಜಿಲ್ಲೆಯ ಎಸ್​ಪಿ ತಾರು ಗುಸಾರ್ ತಿಳಿಸಿದ್ದು, ಸೋಷಿಯಲ್ ಮೀಡಿಯಾ ಪೋಸ್ಟ್ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಚೀನಾ ಆಧಿಪತ್ಯ ಅಂತ್ಯಕ್ಕೆ ಪ್ಲ್ಯಾನ್​
ಏತನ್ಮಧ್ಯೆ, ಪಾಸಿಘಾಟ್ ವೆಸ್ಟ್​ ಶಾಸಕ ನಿನೊಂಗ್ ಎರಿಂಗ್ ಶನಿವಾರ ಮುಂಜಾನೆ 5.08 ನಿಮಷಕ್ಕೆ ಟ್ವೀಟ್​ ಮಾಡಿದ್ದು, ಶಾಕಿಂಗ್ ನ್ಯೂಸ್​ – ಅಪ್ಪರ್​ ಸಬನ್​ಸಿರಿ ಜಿಲ್ಲೆಯ ಐವರನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಅಪಹರಿಸಿದೆ ಎಂದು ಹೇಳಲಾಗುತ್ತಿದೆ ಎಂಬ ಸ್ಟೇಟಸ್ ಜತೆಗೆ ಫೇಸ್​ಬುಕ್ ಪೋಸ್ಟ್​ನ ಸ್ಕ್ರೀನ್ ಶಾಟ್, ಅರುಣಾಚಲ ಟೈಮ್ಸ್​​ನ ವರದಿಯ ಲಿಂಕ್​ ಕೂಡ ಸೇರಿ ಕೇಂದ್ರ ಸರ್ಕಾರದ ಗಮನಸೆಳೆದಿದ್ದಾರೆ. (ಏಜೆನ್ಸೀಸ್)
@rajnathsingh@DefenceMinIndia@adgpi@ShekharGupta@AdityaRajKaul@AartiTikoo@RLAnalytica@suhasinih
— Ninong Ering 🇮🇳 (@ninong_erring)September 4, 2020

ಎರಡೂವರೆ ಗಂಟೆ ಕಾಲ ನಡೆಯಿತು ಭಾರತದ ರಕ್ಷಣಾ ಸಚಿವರ ಜತೆಗೆ ಚೀನಾ ರಕ್ಷಣಾ ಸಚಿವರ ಮಾತುಕತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
