ಮುಜಾಫರನಗರ: ವರದಕ್ಷಿಣ ಸಂಬಂಧ ಗಲಾಟೆಯಲ್ಲಿ ಗರ್ಭಿಣಿಯನ್ನು ಹತ್ಯೆಗೈದು ಗಂಗಾ ನದಿ ಕಾಲುವೆಗೆಸೆದ ಹೃದಯವಿದ್ರಾವಕ ಘಟನೆ ಉತ್ತರ ಪರದೇಶದ ಮುಜಫರನಗರ ವ್ಯಾಪ್ತಿಯಲ್ಲಿ ನಡೆದಿದೆ.
ವರದಕ್ಷಿಣೆ ಬೇಡಿಕೆಯನ್ನು ಈಡೇರಿಸುವಲ್ಲಿ ವಿಫಲಳಾದ ಗರ್ಭಿಣಿಯನ್ನು ಪತಿ ಮತ್ತು ಆತನ ಕುಟುಂಬದವರು ಸೇರಿ ಹೊಡೆದು ಸಾಯಿಸಿದ್ದಾರೆ. ನಂತರ ಸಮೀಪದ ಗಂಗಾ ಕಾಲುವೆಗೆ ಎಸೆದು ಬಂದಿದ್ದಾರೆ. ಮೃತಳನ್ನು ನೇಹಾ (30) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಆಶ್ರಮಕ್ಕಾಗಿ ಮಾಂಗಲ್ಯ ಒತ್ತೆ! : ಅನಾಥರಿಗೆ ಸಂಸ್ಕಾರ ಆಶ್ರಮ!
ಆಕೆಯ ತಂದೆ ಕೊಟ್ಟ ದೂರಿನ ಮೇರೆಗೆ ಪತಿ ಮತ್ತು ಕುಟುಂಬದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೂರಿನ ಪ್ರಕಾರ, ನೇಹಾಳನ್ನು ನಾಲ್ಕು ವರ್ಷ ಹಿಂದೆ ಕಮಲ್​ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಆತ ಮತ್ತು ಆತನ ಮನೆಯವರು ವರದಕ್ಷಿಣೆಗಾಗಿ ಇನ್ನಿಲ್ಲದಂತೆ ಪೀಡಿಸುತ್ತಿದ್ದರು.
ಇದನ್ನೂ ಓದಿ:‘ತುಪ್ಪ’ದ ಬೆಡಗಿ ರಾಗಿಣಿಗೆ ಸೊಳ್ಳೆ ಕಾಟವಂತೆ! ಹೀಗಿತ್ತು ಬಂಧನದ ಮೊದಲ ರಾತ್ರಿ
ಆರಂಭದಲ್ಲಿ ಮನ್ನಿಸಲಾಗಿತ್ತಾದರೂ, ಬಳಿಕ ದುರಾಸೆ ಪ್ರದರ್ಶಿಸಲಾರಂಭಿಸಿದ್ದರಿಂದ ನೇಹಾ ಪ್ರತಿರೋಧ ತೋರಿದ್ದಳು. ಪರಿಣಾಮ ಆಕೆಯ ಜೀವ ಹೋಗಿದೆ.ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಕಮಲ್​ನನ್ನು ಪೊಲೀಸರು ಬಂಧಿಸಿದ್ದು, ಉಳಿದವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಅತ್ಯಂತ ಅಮಾನವೀಯ ಘಟನೆ: ಹುಟ್ಟಿದ ಬೆನ್ನಲ್ಲೇ ಅವಳಿ ಮಕ್ಕಳಿಗೆ ವಿಷವುಣಿಸಿದ ತಂದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
