ನವದೆಹಲಿ:ರೈತ ಹೋರಾಟ ದಿನೇದಿನೆ ಯಾವ ರೀತಿಯ ಬದಲಾವಣೆಗಳನ್ನು ಪಡೆದುಕೊಳ್ಳುತ್ತಿದೆ ಎನ್ನುವುದನ್ನು ಪೂರ್ತಿ ವಿಶ್ವವೇ ಗಮನಿಸುತ್ತಿದೆ. ಒಂದತ್ತ ನಿಜವಾದ ರೈತರು ನ್ಯಾಯ ಬೇಕೆಂದು ಹೋರಾಡುತ್ತಿದ್ದರೆ ಇನ್ನೊಂದತ್ತ ಕೆಲ ಸಂಘಟನೆಗಳು ಕೇವಲ ಕೇಂದ್ರ ಸರ್ಕಾರವನ್ನು ವಿರೋಧಿಸುವ ನಿಟ್ಟಿನಲ್ಲಿ ಮಾತ್ರವೇ ಹೋರಾಟದ ಹಾದಿಯಲ್ಲಿ ತೊಡಗಿಸಿಕೊಂಡಿವೆ. ಇದಕ್ಕೆ ನಿದರ್ಶನವೆನ್ನುವಂತೆ ಮಹಿಳಾ ಹೋರಾಟಗಾರ್ತಿಯರ ತಂಡವೊಂದು ಕಾಣಿಸಿಕೊಂಡಿದೆ.
ಇದನ್ನೂ ಓದಿ:ಹೆಂಡತಿಯನ್ನು ಕೊಂದು, ಶವದ ಜತೆ ಮಲಗಿ, ಮಾರನೇ ದಿನ ಊರು ಬಿಟ್ಟ ಪತಿರಾಯ!
‘ಮೋದಿ ಮರ್​ ಜಾ ತೂ.. ದೇಶವನ್ನು ಲೂಟಿ ಮಾಡಿ ತಿನ್ನುತ್ತಿರುವ ಮೋದಿ, ನೀನು ಸತ್ತು ಹೋಗು… ರೈಲನ್ನು ಮಾರಿಕೊಂಡು ತಿನ್ನುತ್ತಿರುವ ಮೋದಿ, ನೀನು ಸತ್ತು ಹೋಗು’ ಇದು ಆ ಹೋರಾಟನಿರತ ಮಹಿಳಾ ತಂಡದ ಘೋಷಣೆಗಳು. ದೇಶದ ಪ್ರಧಾನಿಗೆ ಸತ್ತು ಹೋಗು ಎಂದು ಘೋಷಣೆ ಕೂಗುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ.
ಬಿಜೆಪಿ ಐಟಿ ಸೆಲ್​ನ ಮುಖ್ಯಸ್ಥ ಅಮಿತ್​ ಮಾಲ್ವಿಯಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಮ್ಯುನಿಷ್ಟರು ಮಾಡಲು ಸಾಧ್ಯವಿರುವುದು ಇದನ್ನೇ? ಎಂದು ಅವರು ಪ್ರಶ್ನೆ ಕೇಳಿದ್ದಾರೆ.
ಇದನ್ನೂ ಓದಿ:ಪಂಜಾಬಿಗರಿಗಾಗಿ ಹೃದಯ ಮಿಡಿಯುತ್ತೆ! ರೈತರ ಹೋರಾಟದ ಬಗ್ಗೆ ಮಾತನಾಡಿದ ಪಾಕ್​ ಸಚಿವ
ರೈತ ಹೋರಾಟವನ್ನು ನಕ್ಸಲರು ಮತ್ತು ಮಾವೋವಾದಿಗಳು ಹೈಜ್ಯಾಕ್​ ಮಾಡಿದ್ದಾಗಿ ಈ ಹಿಂದೆ ಕೇಂದ್ರ ಸಚಿವ ಪಿಯೂಷ್​ ಗೋಯಲ್​ ಅವರು ಹೇಳಿದ್ದರು. ಒಮ್ಮೆ ಈ ಹೈಜ್ಯಾಕ್​ನಿಂದ ರೈತರು ಹೊರಗೆ ಬಂದರೆ ಅವರಿಗೆ ಕೃಷಿ ಕಾಯ್ದೆ ಅರ್ಥವಾಗುತ್ತದೆ ಎಂದು ಅವರು ತಿಳಿಸಿದ್ದರು. (ಏಜೆನ್ಸೀಸ್​)
Shameful behavior at the ‘farmer protest’, with women singing ‘Modi Mar Jaa Tu’!
Is this all that the Communist parties of India capable of?pic.twitter.com/6QkQ6ksxEa
— Amit Malviya (@amitmalviya)December 13, 2020

ಇನ್​ಸ್ಟಾಗ್ರಾಂ ಸ್ಟಾರ್​ಗೆ 10 ವರ್ಷ ಜೈಲು! ವಿಚಿತ್ರವಾಗಿ ಕಾಣಲು ಹೋಗಿ ಜೈಲು ಸೇರಿದ ಯುವತಿ

ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three − 3 =
Remember me
