ವಿಜಯವಾಡ:ಆಂಧ್ರ ಪ್ರದೇಶದ ನೆಲ್ಲೂರ್​ ಪಟ್ಟಣದ ವೃತ್ತ ನಿರೀಕ್ಷಕ (ಸರ್ಕಲ್​ ಇನ್ಸ್​ಪೆಕ್ಟರ್​) ಶೇಷ ರಾವ್​ ನಿಗೂಢ ಸಾವಿನ ಪ್ರಕರಣದ ರಹಸ್ಯ ಸಿಸಿಟಿವಿ ಕ್ಯಾಮೆರಾ ಸಹಾಯದಿಂದ ಬಯಲಾಗಿದೆ. ಆರಂಭದಲ್ಲಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಸಿಐಡಿಗ ಸಿಸಿಟಿವಿ ದೃಶ್ಯಾವಳಿ ಮಹತ್ವದ ತಿರುವು ನೀಡಿದೆ.
ಸಿಐ ಶೇಷ ರಾವ್​ ಸಾವಿಗೆ ಹಲ್ಲಿ ಕಾರಣ ಎಂದು ತಿಳಿದುಬಂದಿದೆ. ಶೇಷ ರಾವ್​ ಅವರು ತಮ್ಮ ಪರಿಚಯದ ಮಹಿಳೆ ಮನೆಗೆ ತೆರಳಿದ್ದಾರೆ. ಈ ವೇಳೆ ನಿರ್ಮಾಣ ಹಂತದಲ್ಲಿದ್ದ ಎಲೆವೇಟರ್​ ಬಳಿ ಹಲ್ಲಿಯೊಂದನ್ನು ನೋಡಿದ್ದಾರೆ. ಅದನ್ನು ಓಡಿಸಲು ಎಂದು ಕಸಬರಿಕೆ ತೆಗೆದುಕೊಂಡು ಹೋಗಿ ಗುಡಿಸುವಾಗ ಕಾಲು ಜಾರಿ ಕಟ್ಟದಿಂದ ಕೆಳಗೆ ಬಿದ್ದಿದ್ದಾರೆ. ಈ ಎಲ್ಲ ಘಟನೆಯೂ ಸಿಸಿಟಿವಿಯಲ್ಲಿ ದಾಖಲಾಗಿದೆ.
ತಕ್ಷಣ ಶೇಷ ರಾವ್​ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ತೀವ್ರ ಗಾಯಗೊಂಡಿದ್ದರಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆರಂಭದಲ್ಲಿ ಪ್ರಕರಣದಲ್ಲಿ ಅನುಮಾನ ಮೂಡಿತ್ತು ಬಳಿಕ ಸಿಸಿಟಿವಿಯನ್ನು ಪರಿಶೀಲಿಸಿದಾಗ ಕೆಲವು ಮಹತ್ವದ ಸುಳಿವು ಸಿಕ್ಕಿತು.
ಇದನ್ನೂ ಓದಿರಿ:ಕಾಂಗ್ರೆಸ್ ಮನೆ ಹೊಸ್ತಿಲಿಗೆ ಬಂದ ಮಧುಬಂಗಾರಪ್ಪ! ಶಿವರಾತ್ರಿ ದಿನವೇ ಮಹತ್ವದ ಚರ್ಚೆ
ಘಟನೆ ಹಿನ್ನೆಲೆನೆಲ್ಲೂರ್​ನಲ್ಲಿ ವಾಸವಿದ್ದ ಸಿಐ ಶೇಷ ರಾವ್​, ಭಾನುವಾರ (ಮಾರ್ಚ್​​ 7) ಗುಂಟೂರಿನ ಪಂಡರಿಪುರಂನಲ್ಲಿರುವ ಮಹಿಳೆ ಮನೆಗೆ ತೆರಳಿದ್ದರು. ಮಗಳ ಮೆಡಿಕಲ್​ ಸೀಟ್​ ಬಗ್ಗೆ ಮಾತನಾಡಲು ಬೆಳಗ್ಗೆ 9 ಗಂಟೆ ಸುಮಾರಿಗೆ ಹೋಗಿದ್ದರು. ಈ ವೇಳೆ ನಿರ್ಮಾಣ ಹಂತದ ಎಲೆವೇಟರ್​ ಬಳಿ ಹಲ್ಲಿ ಪತ್ತೆಯಾಗಿದೆ. ಅದನ್ನು ಓಡಿಸಲೆಂದು ಕಸಬರಿಕೆ ತೆಗೆದುಕೊಂಡು ಹೋಗಿ ಗುಡಿಸುವಾಗ ಆಕಸ್ಮಿಕವಾಗಿ ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ.
ತಕ್ಷಣ ಮಹಿಳೆ ಶೇಷ ರಾವ್​ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಅವರನ್ನು ಗುಂಟೂರು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
(ವಿಡಿಯೋ ಕೃಪೆ- ಸಾಹೋ ಟಿವಿ)

Roberrt Twitter Review: ದರ್ಶನ್​ ಅಭಿನಯದ ರಾಬರ್ಟ್​ ಚಿತ್ರದ ಟ್ವಿಟರ್​ ವಿಮರ್ಶೆ ಹೀಗಿದೆ…

ಮಮತಾ ಬ್ಯಾನರ್ಜಿಗೆ ಏಟು ಬಿದ್ದಿದ್ದು ಹೇಗೆ ? ಘಟನೆ ಒಂದು, ಕಥೆಗಳು ಹಲವು !

ಆಸ್ಪತ್ರೆಯಲ್ಲಿ ದೀದಿ : ಕಾಲಿಗೆ ಫ್ರಾಕ್ಚರ್, ಭುಜಕ್ಕೆ ಮೂಗೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + six =
Remember me
