ಪುಣೆ:ಸಾಮಾನ್ಯವಾಗಿ ಹಾವುಗಳನ್ನು ಕಂಡರೆ ಎಲ್ಲರು ಭಯಪಡುತ್ತಾರೆ. ಕೆಲವರಂತೂ ಎದ್ನೋ ಬಿದ್ನೋ ಎಂದು ಓಡಿ ಹೋಗುತ್ತಾರೆ. ಹೀಗಿರುವಾಗ ಜೀವಂತ ಹಾವು ತಿನ್ನುವ ಆಹಾರಕ್ಕೆ ಬಿದ್ದರೆ ಏನಾಗಬೇಡ ಹೇಳಿ? ಇಂಥದ್ದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.
ಸಾಂಬರ್​ ಬಕೆಟ್​ನಲ್ಲಿ ಹಾವು ಇರುವುದನ್ನು ಅರಿಯದ ವ್ಯಕ್ತಿಯೊಬ್ಬ ಹಾವನ್ನು ಆಹಾರದೊಂದಿಗೆ ಚೆನ್ನಾಗಿ ಬೆರೆಸಿ ಸೌಟ್​ನಿಂದ ಹೊರತೆಗೆದು ತಟ್ಟೆಯಲ್ಲಿ ಬಡಿಸಿದ ದೃಶ್ಯ ವೈರಲ್​ ವಿಡಿಯೋದಲ್ಲಿದೆ. ವಿಡಿಯೋ ನೋಡಿದರೆ ಹಾವು ಇರುವುದು ಸ್ಪಷ್ಟವಾಗಿ ಕಾನಿಸುತ್ತದೆ.
ಈ ಘಟನೆಯ ಸಂಪೂರ್ಣ ವಿವರಗಳನ್ನು ನೋಡುವುದಾದರೆ, ಈ ಘಟನೆ ಮಹಾರಾಷ್ಟ್ರದ ಬಾಂಡಾರಾದಲ್ಲಿ ಎರಡು ತಿಂಗಳ ಹಿಂದೆ ನಡೆದಿದ್ದು, ಈ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಆಹಾರ ಬಡಿಸುವ ಸ್ಥಳದಲ್ಲಿ ತರಕಾರಿ ಕರಿಯಲ್ಲಿ ಮರಿ ಹಾವು ಇರುವುದು ವೈರಲ್ ವೀಡಿಯೊದಲ್ಲಿ ನೋಡಬಹುದು.
ಹಾವು ಬಿಸಿ ಸಾಂಬರ್​ ಒಳಗೆ ಬಿದ್ದ ಬಳಿಕ ಸತ್ತಿದೆ ಎಂದು ಆರಂಭದಲ್ಲಿ ಅಂದುಕೊಳ್ಳುತ್ತಾರೆ. ಆದರೆ, ತುಂಬಾ ಹತ್ತಿರದಿಂದ ನೋಡಿದಾಗ ಹಾವು ಇನ್ನೂ ಬದುಕಿರುವುದು ಗೊತ್ತಾಗುತ್ತದೆ. ಸಾಂಬರ್​ ಒಳಗೆ ಬಿದ್ದ ಹಾವು ನಮ್ಮ ದೇಶದ ಮೂರನೇ ಅತ್ಯಂತ ವಿಷಕಾರಿ ಹಾವು. ಈ ವಿಡಿಯೋ ನೋಡಿದ ನೆಟಿಜನ್‌ಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

A post shared by ꧁mr.satya️m꧁️ (@official__satyam__6287)

ಯಾರಾದರೂ ಈ ಸಾಂಬರ್​ ಸೇವಿಸಿದ್ದರೆ ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಈ ಹಾವು ವಿಷಕಾರಿಯಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.(ಏಜೆನ್ಸೀಸ್​)
ಬಾಯ್​ಫ್ರೆಂಡ್​ಗೆ ಪದೇಪದೆ ಕಾಲ್​ ಮಾಡ್ತಿದ್ದೀರಾ? ಹುಷಾರ್​ ಗೊತ್ತಿಲ್ಲದೇ ವಕ್ಕರಿಸುತ್ತೇ ಈ ಮಾರಕ ಕಾಯಿಲೆ!

ರೋಹಿತ್​ ನಂತ್ರ ಈತನೇ ಟೀಮ್​ ಇಂಡಿಯಾ ಕ್ಯಾಪ್ಟನ್​! ಯಾರೂ ಊಹಿಸದ ಹೆಸರು ಹೇಳಿದ ಭಜ್ಜಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:6 + thirteen =
Remember me
