ಲಖನೌ:ಶಾಲೆಗೆ ಮಾಂಸಹಾರ ತಂದಿದ್ಯಾ ಎಂದು ಆರೋಪಿಸಿ ಪ್ರಾಂಶುಪಾಲನೋರ್ವ ಮುಸ್ಲಿಂ ವಿದ್ಯಾರ್ಥಿಯನ್ನು ಸ್ಕೂಲ್​ನಿಂದ ಅಮಾನತು ಮಾಡಿರುವ ಘಟನೆ ಉತ್ತರಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಅಮ್ರೋಹಾದ ಹಿಲ್ಟನ್​ ಪಬ್ಲಿಕ್​ ಸ್ಕೂಲ್​ನಲ್ಲಿ ಈ ಘಟನೆ ನಡೆದಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಪ್ರಾಂಶುಪಾಲರು ಮತ್ತು ಮಗುವಿನ ತಾಯಿ ನಡುವೆ ತೀವ್ರ ವಾಗ್ವಾದ ನಡೆದಿರುವುದನ್ನು ನೋಡಬಹುದಾಗಿದೆ. ಎಲ್ಲರಿಗೂ ನಾನ್ ವೆಜ್ ತಿನ್ನಿಸಿ ಅವರನ್ನು ಇಸ್ಲಾಂಗೆ ಪರಿವರ್ತಿಸುವ ಬಗ್ಗೆ ಬಾಲಕ ಮಾತನಾಡಿದ್ದಾನೆ ಎಂದು ಪ್ರಾಂಶುಪಾಲರು ಆರೋಪಿಸಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ವೈರಲ್​ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿಯ ತಾಯಿ ತನ್ನ ಮಗನು ಶಾಲೆಗೆ ಮಾಂಸಹಾರ ತಂದಿಲ್ಲ. ಆತ ತಂದಿರುವುದು ಶುದ್ಧ ಸಸ್ಯಾಹಾರಿ ಎಂದು ಹೇಳುತ್ತಿರುವುದು ನೋಡಬಹುದಾಗಿದೆ. ಇದಕ್ಕೆ ಉತ್ತರಿಸಿದ ಪ್ರಾಂಶುಪಾಲ ನಿಮ್ಮ ಮಗ ಶಾಲೆಗೆ ತಂದಿರುವುದು ನಾನ್​ವೆಜ್​ ಊಟ. ಆತ ಎಲ್ಲರಿಗೂ ನಾನ್​ವೆಜ್​ ತಿನ್ನಿಸಿ ಇಸ್ಲಾಂಗೆ ಮತಾಂತರಿಸಲು ಮುಂದಾಗಿದ್ದಾನೆ. ಆತನ ಮಾತನ್ನು ಕೇಳಿಕೊಂಡು ಹಿಂದೂ ದೇವಾಲಯಗಳನ್ನು ಕೆಡವಲು ವಿದ್ಯಾರ್ಥಿಗಳು ಬಯಸುತ್ತಿದ್ದಾರೆ.
A 4-5-year-old Muslim child was expelled from Hilton Public School, Amroha, over allegations of bringing non-veg food.The principal allegedly stated, "We can't educate kids who break our temples, harm Hindus, talk about converting all Hindus, and destroying Ram Mandir."pic.twitter.com/7E3duOyNn9
ಇದನ್ನೂ ಓದಿ:ಸರಣಿ ಅಪಘಾತದಲ್ಲಿ ಮಗು ಸೇರಿದಂತೆ ಒಂದೇ ಕುಟುಂಬದ ಐವರು ಸಾವು; ಅಂತ್ಯಕ್ರಿಯೆಗೆ ತೆರಳುತ್ತಿದ್ದವರು ನೇರ ಸೇರಿದ್ದು ಮಸಣಕ್ಕೆ
ನಮ್ಮ ದೇವಾಲಯಗಳನ್ನು ಒಡೆಯುವ, ಶಾಲೆಗೆ ಮಾಂಸಾಹಾರಿ ಆಹಾರವನ್ನು ತರುವ, ಹಿಂದೂಗಳಿಗೆ ಹಾನಿ ಮಾಡುವ ಮತ್ತು ಎಲ್ಲಾ ಹಿಂದೂಗಳನ್ನು ಮತಾಂತರಿಸುವ ಮತ್ತು ರಾಮಮಂದಿರವನ್ನು ಕೆಡವಲು ಬಯಸುವ ವಿದ್ಯಾರ್ಥಿಗಳಿಗೆ ನಮ್ಮ ಶಾಲೆಯಲ್ಲಿ ನಾವು ಪಾಠ ಕಲಿಸುವುದಿಲ್ಲ. ಹೀಗಾಗಿ ನಿಮ್ಮ ಮಗನನ್ನು ಶಾಲೆಯಿಂದ ಅಮಾನತು ಮಾಡಿದ್ದೇವೆ ಎಂದು ಹೇಳುತ್ತಿರುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಅಮ್ರೋಹಾ ಜಿಲ್ಲಾ ಶಿಕ್ಷಣಾಧಿಕಾರಿ ಮೂರು ಜನರ ಸಮಿತಿಯನ್ನು ರಚಿಸಿ ತನಿಖೆಗೆ ಆದೇಶಿಸಿದ್ದು, ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − nine =
Remember me
