ಬಾರ್ಮೇರ್​:ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಮಗುವಿಗೆ ವಿಷವುಣಿಸಿ ಹತ್ಯೆ ಮಾಡಲು ಯತ್ನಿಸಿರುವ ರಾಜಸ್ಥಾನದ ಬಾರ್ಮೇರ್​ನಲ್ಲಿ ನಡೆದಿದೆ. ಈ ವಿಡಿಯೋ NCM ಇಂಡಿಯಾ ಕೌನ್ಸಿಲ್​ ಫಾರ್​ ಮೆನ್​ ಅಫೇರ್ಸ್​ ಪೋಸ್ಟ್​ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಮಗುವನ್ನು ಆಟವಾಡಿಸುತ್ತ ರೂಮ್​ ಪ್ರವೇಶಿಸುವ ಮಹಿಳೆ ಹಾಸಿಗೆ ಮೇಲೆ ಮಲಗಿಸಿದ್ದ ಮತ್ತೊಂದು ಮಗುವಿನ ಬಾಯಿಗೆ ಪೋಲಿಯೋ ರೀತಿ ಡ್ರಾಪ್ಸ್​ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಅದು ವಿಷ ಎಂದು ಹೇಳಲಾಗಿದ್ದು, ಆಕೆಯ ದುಷ್ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತಳ ಹೆಸರು ಜೇಥನಿ ಎಂದು ತಿಳಿದು ಬಂದಿದೆ.
Wife of Elder Brother allegedly gave poison to the child of younger brother in Bhadres village of Rajasthan's Barmer district. Two children of the younger brother died in past in similar circumstance and the mother of the child was suspecting the role of her Jethani in the same.…pic.twitter.com/6TezjeqWcg
ಇದನ್ನೂ ಓದಿ:ಕೆಮಿಕಲ್​ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ; ನಾಲ್ವರು ಸಾವು, ಹಲವರು ಗಂಭೀರ
ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮಹಿಳೆ ತನ್ನ ಪತಿಯ ಸಹೋದರನ (ಮೈದುನ) ಮಗುವಿಗೆ ವಿಷವುಣಿಸಿ ಹತ್ಯೆ ಮಾಡಲು ಯತ್ನಿಸಿದ್ದಾರೆ. ಈ ಹಿಂದೆ ಇಬ್ಬರು ಮಕ್ಕಳನ್ನು ಈಕೆ ಇದೇ ರೀತಿ ಕೊಲೆ ಮಾಡಿದ್ದಳು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದರಿಂದಾಗಿ ಅನುಮಾನಗೊಂಡ ಕುಟುಂಬಸ್ಥರು ಆಕೆಯ ಚಲನವಲನದ ಮೇಲೆ ನಿಗಾ ವಹಿಸಿದ್ದರು ಮತ್ತು ಮಗು ಇರುವ ರೂಮ್​ನಲ್ಲಿ ಕ್ಯಾಮರಾ ಹಾಕಿಸಿದ್ದರು. ಈ ಬಾರಿ ಮಗುವಿಗೆ ವಿಷ ಹಾಕಿದಾಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾಳೆ. ಕೂಡಲೇ ಎಚ್ಚೆತ್ತ ಕುಟುಂಬಸ್ಥರು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಳೆಂದು ಆಕೆ ಹೇಳಿಲ್ಲ. ಆದರೆ, ಇದಕ್ಕೂ ಮುನ್ನಮೈದುನನ ಇಬ್ಬರ ಮಕ್ಕಳಿಗೆ ವಿಷವುಣಿಸಿ ಕೊಂದಿದ್ದಾಗಿ ಹೇಳಿದ್ದಾಳೆ. ವಿಚಾರಣೆ ನಡೆಸಲಾಗುತ್ತಿದ್ದು, ಮಾಹಿತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 2 =
Remember me
