ಸಂಭಾಲ್​:ಸರ್ಕಾರಿ ಆಸ್ಪತ್ರೆಗಳು ಅವ್ಯವಸ್ಥೆಯ ಆಗರ ಎಂಬುದಕ್ಕೆ ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ. ಸಂಭಾಲ್​ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಯುವತಿಯ ದೇಹವನ್ನು ಬೀದಿ ನಾಯಿಯೊಂದು ತಿನ್ನಲು ಯತ್ನಿಸಿರುವ ವಿಡಿಯೋ ವೈರಲ್​ ಆಗಿದ್ದು, ಜನಾಕ್ರೋಶ ವ್ಯಕ್ತವಾಗಿದೆ.
ಗುರುವಾರ ಘಟನೆ ನಡೆದಿದ್ದು, ರಸ್ತೆ ಅಪಘಾತದಿಂದಾಗಿ ಯುವತಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಯುವತಿ ಆಸ್ಪತ್ರೆ ತಲುಪುವ ಮುಂಚೆ ಆಕೆ ಸತ್ತಿದ್ದಳಾ? ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಸ್ಟ್ರೆಚರ್​ ಮೇಲಿದ್ದ ಯುವತಿಯ ದೇಹಕ್ಕೆ ನಾಯಿ ಬಾಯಾಕಿರುವ 20 ಸೆಕೆಂಡ್​ ವಿಡಿಯೋ ಮಾತ್ರ ವೈರಲ್​ ಆಗಿದೆ.
ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿದೆ. ಅಲ್ಲದೆ, ಆಸ್ಪತ್ರೆಯ ಆಡಳಿತ ಮಂಡಳಿ ಆಸ್ಪತ್ರೆಯಲ್ಲಿ ಬೀದಿ ನಾಯಿಯಿಂದ ಸಮಸ್ಯೆ ಇದೆ ಎಂದು ಸಹ ಒಪ್ಪಿಕೊಂಡಿದೆ.
ಇದನ್ನೂ ಓದಿ:ಇನ್ನೇನು ಮೃತದೇಹ ಶವಗಾರದಲ್ಲಿಡಬೇಕು ಅಷ್ಟರಲ್ಲಿ ದಿಢೀರನೆ ಎದ್ದು ಕುಳಿತು ಕಣ್ಣೀರಿಟ್ಟ ಸತ್ತ ವ್ಯಕ್ತಿ!
ಸುಮಾರು ಒಂದೂವರೆ ಗಂಟೆ ಯುವತಿಯನ್ನು ಯಾರೂ ಬಂದು ನೋಡಲಿಲ್ಲ. ಆ ಸಮಯದಲ್ಲಿ ಈ ರೀತಿ ನಡೆದಿದೆ. ಇದಕ್ಕೆ ಕಾರಣ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೆಂದು ಸಂತ್ರಸ್ತೆಯ ತಂದೆ ಚರಣ್​ ಸಿಂಗ್​ ತಿಳಿಸಿದ್ದಾರೆ. ಇನ್ನು ಆಸ್ಪತ್ರೆಯೊಳಗೆ ಬೀದಿ ಸಮಸ್ಯೆ ಇದೆ ಎಂದು ಸ್ಥಳೀಯ ಆಡಳಿತಕ್ಕೆ ಪತ್ರ ಬರೆದಿದ್ದೇವೆ. ಆದರೆ, ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಸಮರ್ಥನೆ ನೀಡಿದೆ.
ಎಲ್ಲ ಫಾರ್ಮಾಲಿಟಿಗಳನ್ನು ಮುಗಿಸಿದ ಬಳಿಕ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಶವಪರೀಕ್ಷೆಯನ್ನು ನಿರಾಕರಿಸಿ, ದೇಹವನ್ನು ಹಾಗೇ ಕೊಡೊಯ್ದರು. ಫಾರ್ಮಾಲಿಟಿಯ ಸಮಯದಲ್ಲಿ ದೇಹವನ್ನು ಹಾಗೇ ಬಿಟ್ಟಿದ್ದ ಸಮಯದಲ್ಲಿ ಬೀದಿ ನಾಯಿಯ ಘಟನೆ ನಡೆದಿರಬಹುದು ಎಂದು ಡಾ. ಸುಶಿಲ್​ ವರ್ಮಾ ತಿಳಿಸಿದ್ದಾರೆ.
ಘಟನೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಮಾಜವಾದಿ ಪಕ್ಷ ಆಗ್ರಹಿಸಿದ್ದು, ಆಸ್ಪತ್ರೆಯ ಸ್ವೀಪರ್​ ಮತ್ತು ವಾರ್ಡ್​ ಬಾಯ್​ ಅನ್ನು ಅಮಾನತು ಮಾಡಿರುವುದು ತಿಳಿದುಬಂದಿದೆ. ಅಲ್ಲದೆ, ಈ ವಿಚಾರದ ತನಿಖೆಗೆ ಸಮಿತಿಯನ್ನು ಸಹ ರಚಿಸಲಾಗಿದೆ.(ಏಜೆನ್ಸೀಸ್​)
संभल में स्वास्थ्य सेवाओं की रोंगटे खड़े कर देने वाली खौफनाक तस्वीर आई सामने।जिला अस्पताल में स्वास्थ्य कर्मियों की लापरवाही की वजह से स्ट्रेचर पर रखे बच्ची के शव को कुत्तों ने नोच कर खाया। जांच करा लापवाही बरतने वालों के खिलाफ हो सख्त कार्रवाई। शोकाकुल परिवार के प्रति संवेदना!pic.twitter.com/3tgEHCTQpb
— Samajwadi Party (@samajwadiparty)November 26, 2020

ಬಸ್ಸಿನಲ್ಲಿದ್ದ 41 ಜನರನ್ನು ಬಲಿಪಡೆದ ಟ್ರಕ್​ ಚಾಲಕ: ತನಿಖೆಯಲ್ಲಿ ಬಯಲಾಯ್ತು ಭಯಾನಕ ಸತ್ಯ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:19 + seven =
Remember me
