ಮೀರತ್​ :‘ಶೂಟರ್ ದಾದಿ’ ಎಂದೇ ಪ್ರಖ್ಯಾತರಾಗಿದ್ದ ಹಿರಿಯ ಶೂಟಿಂಗ್ ಕ್ರೀಡಾಪಟು ಚಂದ್ರೋ ತೋಮರ್​ ಅವರು ಕರೊನಾದಿಂದಾಗಿ ಇಂದು ಸಾವಪ್ಪಿದ್ದಾರೆ. 89 ವರ್ಷ ವಯಸ್ಸಿನ ತೋಮರ್​ ಅವರಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡ ನಂತರ ಮೀರತ್​​ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಉತ್ತರ ಪ್ರದೇಶದ ಬಘ್​ಪತ್​ ಗ್ರಾಮದ ನಿವಾಸಿಯಾಗಿದ್ದ ತೋಮರ್​ ಅವರು, ಮೊದಲ ಬಾರಿ ಬಂದೂಕು ಹಿಡಿದಾಗ 60 ರ ಹರೆಯ ದಾಟಿತ್ತು. ಆದರೆ ಹಿರಿಯರಿಗೆ ನಡೆಯುವ ಹಲವಾರು ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಅವರ ಸಾಧನೆಗಳು ಜನರನ್ನು ಬಹಳವಾಗಿ ಪ್ರಭಾವಿತಗೊಳಿಸಿದ್ದು, ಅವರ ಮೇಲೆ ‘ಸಾಂಡ್​ ಕಿ ಆಂಖ್’ ಎಂಬ ಪ್ರೇರಣಾದಾಯಕ ಬಾಲಿವುಡ್ ಚಿತ್ರ ತೆಗೆಯಲಾಗಿದೆ.
ಇದನ್ನೂ ಓದಿ:ನಾಳೆ ಲಸಿಕಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಲ್ಲಬೇಡಿ : ಸಿಎಂ
“ಚಂದ್ರೋ ನನ್ನನ್ನು ಬಿಟ್ಟು ಎಲ್ಲಿಗೆ ಹೊರಟುಹೋದೆ ?” ಎಂದು ಅತ್ಯಂತ ಹಿರಿಯ ಮಹಿಳಾ ಶಾರ್ಪ್​ ಶೂಟರ್​​ಗಳಲ್ಲಿ ಒಬ್ಬರಾದ​ ಅವರ ಸೋದರಿ ಪ್ರಕಾಶಿ ತೋಮರ್ ತಮ್ಮ ಟ್ವಿಟರ್ ಪೇಜ್​ನಲ್ಲಿ ಬರೆದಿದ್ದಾರೆ. ರಾಜಕೀಯ, ಕ್ರೀಡೆ ಮತ್ತು ಸಿನಿಮಾ ಕ್ಷೇತ್ರಗಳ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
“ಲೈಂಗಿಕ ಸಮಾನತೆಯ ಪ್ರತೀಕ ಮತ್ತು ಮಹಿಳಾ ಹಕ್ಕುಗಳ ಚಾಂಪಿಯನ್​ ಆಗಿದ್ದ ಚಂದ್ರೋ ತೋಮರ್ ಅವರು ಇನ್ನಿಲ್ಲ. ಪುರುಷ ಪ್ರಧಾನ ವ್ಯವಸ್ಥೆಗೆ ಸವಾಲೊಡ್ಡಿ ಶೂಟಿಂಗ್​ಅನ್ನು ಕ್ರೀಡೆಯಾಗಿ ಆಯ್ಕೆ ಮಾಡಿದ್ದ ಅವರ ಸಾಹಸವು ಬರುವ ಎಷ್ಟೋ ಪೀಳಿಗೆಗಳಿಗೆ ಪ್ರೇರಣೆಯಾಗಿದೆ” ಎಂದು ಕೇಂದ್ರ ಸಚಿವ ಹರ್​ದೀಪ್​ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.(ಏಜೆನ್ಸೀಸ್)
“ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ, ಇಲ್ಲದಿದ್ದರೆ ರಸ್ತೆಯಲ್ಲಿ ಹೆಣಗಳು ಬೀಳುತ್ತವೆ”

ಜಿಲ್ಲಾಸ್ಪತ್ರೆಯಲ್ಲಿ ರೋಗಿ ಕುಳಿತುಕೊಳ್ಳಲೂ ಅವಕಾಶವಿಲ್ಲ ! ಫುಟ್‌ಪಾತ್ ಮೇಲೆ ಮಲಗಿದ ಮಹಿಳೆ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − twelve =
Remember me
