ರಾಂಚಿ:ಅಂಗಡಿ ಮಾಲೀಕನೊಬ್ಬ ಎಲೆಕ್ಟ್ರಿಷಿಯನ್​ ಒಬ್ಬನನ್ನು ಸರಪಳಿಯಿಂದ ತಳ್ಳುವ ಗಾಡಿಗೆ ಕಟ್ಟಿ ಹಾಕಿರುವ ಘಟನೆ ಜಾರ್ಖಂಡ್​ನ ಧನ್​ಬಾದ್​ನಲ್ಲಿ ನಡೆದಿದೆ.ಇದನ್ನೂ ಓದಿ:ಕೇರಳದಿಂದ ಕಾಲ್ನಡಿಗೆಯಲ್ಲೇ ಹಜ್ ಯಾತ್ರೆ ಕೈಗೊಂಡ ಯುವಕ; ಈತ ಕ್ರಮಿಸಿದ್ದು 8,600 ಕಿ.ಮೀ ದೂರ!
ಕೆಲಸ ಮಾಡಿಸಿಕೊಡುತ್ತೇನೆಂದು ಹೇಳಿ ಅಂಗಡಿಯಾತನಿಂದ, ಎಲೆಕ್ಟ್ರೀಷಿಯನ್ ಮುಂಗಡ 15 ಸಾವಿರ ರೂ. ಪಡೆದುಕೊಂಡಿದ್ದ. ಆದರೆ ಹಣ ಪಡೆದು ಆರು ತಿಂಗಳು ಕಳೆದರೂ ಹೇಳಿದ ಕೆಲಸ ಮಾತ್ರ ಮಾಡಿಕೊಟ್ಟಿಲ್ಲ. ಕೊನೆಗೆ ಫೋನ್ ಕರೆ ಸ್ವೀಕರಿಸುವುದನ್ನೂ ನಿಲ್ಲಿಸಿದ್ದ. ಇದರಿಂದ ಬೇಸತ್ತ ಅಂಗಡಿಯಾತ, ಎಲೆಕ್ಟ್ರೀಷಿಯನ್​ನನ್ನು ಹೇಗೋ ಪತ್ತೆ ಮಾಡಿ ಕೈಗೆ ಸರಪಳಿ ಜಡಿದು ತಳ್ಳುವ ಗಾಡಿಗೆ ಕಟ್ಟಿ ಹಾಕಿದ್ದಾನೆ.
ಇದನ್ನೂ ಓದಿ:ಮಾವನ 3 ಷರತ್ತುಗಳನ್ನು ಕೇಳಿ ಮದುವೆ ದಿನವೇ ಹೆಂಡತಿಯನ್ನು ಬಿಟ್ಟು ಹೋದ ಗಂಡ!
ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಅಂತಿಮವಾಗಿ ಎಲೆಕ್ಟ್ರೀಷಿಯನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ‘ಅಂಗಡಿಯಲ್ಲಿ ಕೆಲಸ ಮಾಡಿಸಿಕೊಡುವುದಾಗಿ ಎಲೆಕ್ಟ್ರೀಷಿಯನ್ ಮುಂಗಡ ಹಣ ಪಡೆದುಕೊಂಡು ಮೋಸ ಮಾಡಿದ್ದಾನೆ. ಆರು ತಿಂಗಳು ಕಳೆದರೂ ಕೆಲಸ ಮಾಡಿಕೊಟ್ಟಿರಲಿಲ್ಲ. ಇದರಿಂದ ಬೇಸತ್ತು ಅಂಗಡಿಯಾತ ಈತನನ್ನು ಸರಪಳಿಯಿಂದ ಕಟ್ಟಿ ಹಾಕಿದ್ದಾನೆ’ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + nine =
Remember me
