ನವದೆಹಲಿ:ಬಾಲಿವುಡ್​ನ ಬಂಡಾಯಗಾರ್ತಿ ಎಂದೇ ಗುರುತಿಸಲ್ಪಡುವ ನಟಿ ಕಂಗನಾ ರಣಾವತ್​ ಅವರ ಮನೆಯ ಬಳಿ ದುಷ್ಕರ್ಮಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ಕಂಗನಾ ಮನೆಯ ಬಳಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಆ ಸಂದರ್ಭದಲ್ಲಿ ಅವರು ಮನೆಯೊಳಗೆ ಇದ್ದರು ಎನ್ನಲಾಗಿದೆ.
ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲವಾದರೂ, ತಮ್ಮನ್ನು ಬೆದರಿಸುವ ಸಲುವಾಗಿ ಸ್ಥಳೀಯ ಗೂಂಡಾಗಳನ್ನು ಬಳಸಿಕೊಂಡು ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದು ಎಂದು ಕಂಗನಾ ಶಂಕೆ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಕಂಗನಾ ರಣಾವತ್​​ ಹಲವು ಹೇಳಿಕೆಗಳನ್ನು ನೀಡಿದ್ದು ಅವು ಸಾಕಷ್ಟು ವಿವಾದವನ್ನು ಸೃಷ್ಟಿಸಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನು ಬೆದರಿಸಲು ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲಿಸರು ಸದ್ಯ ಮನಾಲಿಯಲ್ಲಿನ ಅವರ ಮನೆಯ ಸುತ್ತ ಭದ್ರತೆ ಕಲ್ಪಿಸಿದ್ದಾರೆ.
ಇದನ್ನೂ ಓದಿ:ತ್ರಿಪುರಾದಲ್ಲಿ ಮರುಸಂಘಟನೆಗೆ ಬಂಡುಕೋರರ ಪ್ರಯತ್ನ: ಮಾಣಿಕ್ ಸರ್ಕಾರ್ ಹೊಸ ರಾಜಕೀಯ ವರಸೆ
ರಾತ್ರಿ 11.30ರಲ್ಲಿ ನಾನು ನನ್ನ ಬೆಡ್​ರೂಂನಲ್ಲಿ ಇದ್ದೆ. ನಮ್ಮ ಮನೆ ಮೂರು ಅಂತಸ್ತಿನದ್ದಾಗಿದೆ. ಅದರ ಸುತ್ತ ಕಾಂಪೌಂಡ್​ ಕೂಡ ಇದೆ. ಅದರ ಹಿಂದೆ ಸೇಬಿನ ತೋಟ ಮತ್ತು ಸಿಹಿನೀರಿನ ತೊರೆ ಕೂಡ ಹರಿಯುತ್ತದೆ. ಮಲಗಲು ಸಿದ್ಧವಾಗುತ್ತಿರುವಾಗ 11.30ರಲ್ಲಿ ಪಟಾಕಿ ಸಿಡಿದಂತೆ ರೀತಿ ಸದ್ದಾಯಿತು. ಪಟಾಕಿ ಎಂದುಕೊಂಡು ಸುಮ್ಮನಾದೆ. ಆದರೆ, ಅದರ ಬೆನ್ನಲ್ಲೇ ಇನ್ನೊಮ್ಮೆ ಅದೇ ರೀತಿಯ ಸದ್ದು ಬಂದಿದ್ದು, ಅದು ಗನ್​ನಿಂದ ಗುಂಡು ಸಿಡಿಸಿದಂತೆ ಇತ್ತು. ಸದ್ಯಕ್ಕೆ ಮನಾಲಿಯಲ್ಲಿ ಪ್ರವಾಸಿಗರ ಸಂಖ್ಯೆಯೂ ಕಡಿಮೆ ಇದೆ. ಅಲ್ಲದೆ, ಈ ಸಮಯದಲ್ಲಿ ಯಾರೂ ಕೂಡ ಪಟಾಕಿ ಸಿಡಿಸುವುದಿಲ್ಲ ಎಂದು ವಿವರಿಸಿದ್ದಾರೆ.
ತಕ್ಷಣವೇ ನಾನು ನನ್ನ ಭದ್ರತಾ ಮುಖ್ಯಸ್ಥರನ್ನು ಸಂಪರ್ಕಿಸಿದೆ. ಏನಾಯಿತು ಎಂದು ವಿಚಾರಿಸಿದೆ. ಮನೆಯ ಸುತ್ತ ಪರಿಶೀಲಿಸಿ ಹೇಳುವುದಾಗಿ ತಿಳಿಸಿದರು. ಬಹುಶಃ ಈ ವ್ಯಕ್ತಿಗೆ ಗುಂಡು ಸಿಡಿತದ ಸದಸ್ಯ ಕೇಳಿಸಿರಲಾರದು. ಆದರೆ ನನಗೆ ಕೇಳಿಸಿತು. ಅಲ್ಲದೆ, ನನ್ನ ಕುಟುಂಬದ ಐವರು ಸದಸ್ಯರಿಗೂ ಗುಂಡು ಸಿಡಿತದ ಸದ್ದು ಕೇಳಿದೆ. ಆದ್ದರಿಂದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ಹೇಳಿದ್ದಾರೆ.
ಗಂಡು ಮಗು ಬೇಕೆಂದು ಬೆಳಗ್ಗೆಯಷ್ಟೇ ಜನಿಸಿದ್ದ ಹೆಣ್ಣು ಶಿಶುವನ್ನು ಅಪ್ಪನೇ ಕೊಂದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − nine =
Remember me
