
ನವದೆಹಲಿ:ಮುಘಲ್​ ದೊರೆಗಳ ಆಡಳಿತದಲ್ಲಿ ಹಿಂದೂಸ್ಥಾನವಾಗಿದ್ದ ನಮ್ಮ ದೇಶವು, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ “ಇಂಡಿಯಾ” ಆಗಿ ಬದಲಾಗಿದೆ. ಆದರೆ ಬ್ರಿಟಿಷರ ಹೆಸರು ನಮಗೆ ಬೇಡ. ನಮ್ಮ ದೇಶ ಒಂದೋ ಭಾರತವಾಗಲೀ ಇಲ್ಲವೇ ಹಿಂದೂಸ್ಥಾನವಾಗಲಿ ಎಂಬ ಮನವಿಯೊಂದಿಗೆ ಸುಪ್ರೀಂಕೋರ್ಟ್​ಗೆ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ಭಾರತೀಯ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ‘ಇಂಡಿಯಾ” ಎಂಬ ಹೆಸರನ್ನು “ಭಾರತ” ಅಥವಾ “ಹಿಂದೂಸ್ಥಾನ” ಎಂದು ಬದಲಾಯಿಸುವಂತೆ ಕೋರಿ ದೆಹಲಿಯ ನಮಃ ಎಂಬುವವರು ಅರ್ಜಿ ಸಲ್ಲಿಸಿದ್ದು ಇದರ ವಿಚಾರಣೆಯು ಸುಪ್ರೀಂಕೋರ್ಟ್​ ಇಂದು ನಡೆಸಲಿದೆ.
ಇದನ್ನೂ ಓದಿ:ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಕುರ್ಚಿಗೆ ಕರ್ನಾಟಕ ಬರೆಯಲಿದೆಯೇ ಇತಿಹಾಸ?
ಸಂವಿಧಾನದ 1 ನೇ ಪರಿಚ್ಛೇದವು “ಒಕ್ಕೂಟದ ಹೆಸರು ಮತ್ತು ಭೂಪ್ರದೇಶದೊಂದಿಗೆ ವ್ಯವಹಾರ” ಇದರ ಬಗ್ಗೆ ಉಲ್ಲೇಖಿಸಿದೆ. ಇದರಲ್ಲಿಯೇ ತಿದ್ದುಪಡಿ ತರುವ ಮೂಲಕ ನಮ್ಮ ದೇಶವನ್ನು “ಇಂಡಿಯಾ”ಮುಕ್ತ ಗೊಳಿಸುವಂತೆ ಅರ್ಜಿದಾರರು ಕೋರಿದ್ದಾರೆ. ಸಂವಿಧಾನಕ್ಕೆ ತಿದ್ದುಪಡಿ ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಕಳೆದ ಶುಕ್ರವಾರ ಈ ಅರ್ಜಿಯು ಮುಖ್ಯನ್ಯಾಯಮೂರ್ತಿ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆದರೆ ಅವರು ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜೂನ್​ 2 (ಇವತ್ತಿಗೆ) ಮುಂದೂಡಲಾಗಿತ್ತು. ಆದ್ದರಿಂದ ಅರ್ಜಿಯ ವಿಚಾರಣೆಯನ್ನು ಕೋರ್ಟ್​ ಇಂದು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ:ರಾಷ್ಟ್ರ ರಾಜಧಾನಿ ಗಡಿ ಕ್ಲೋಸ್​: ಸದ್ಯ ದೆಹಲಿಗೆ ಪ್ರವೇಶವಿಲ್ಲ ಎಂದ ಸಿಎಂ ಕೇಜ್ರಿವಾಲ್​
“ಇಂಡಿಯಾ” ಎನ್ನುವುದು ಇಂಗ್ಲಿಷ್​ ಪದ. ಇದನ್ನು ತೆಗೆದು ಹಾಕಿ ಹಿಂದೂಸ್ಥಾನ ಅಥವಾ ಭಾರತ ಎಂದು ಮಾಡಿದರೆ ಎಲ್ಲರಲ್ಲಿಯೂ ರಾಷ್ಟ್ರೀಯತೆ ಭಾವ ಮೂಡುತ್ತದೆ. ಹೆಸರು ತೆಗೆಯುವುದು ಸಾಂಕೇತಿಕ ಎಂದು ಎನಿಸಿದರೂ ಹೆಸರು ಬದಲಾವಣೆಯಿಂದ ನಮ್ಮತನದ ಭಾವನೆ ಮೂಡುವ ಕಾರಣ ಇಂಗ್ಲಿಷರ ಶಬ್ದ ನಮಗೆ ಬೇಡ. ನಮ್ಮ ಪೂರ್ವಜರು ಸ್ವಾತಂತ್ರ್ಯ ತರಿಸಿಕೊಡಲು ಸಾಕಷ್ಟು ಹೋರಾಟ ನಡೆಸಿದ್ದಾರೆ. ಆದ್ದರಿಂದ ಇಂಗ್ಲಿಷರು ಆಳ್ವಿಕೆಯ ಹೆಸರನ್ನು ತೆಗೆದುಹಾಕಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
1948ರಲ್ಲಿ ಸಂವಿಧಾನದ 1ನೇ ಪರಿಚ್ಛೇದದ ಕುರಿತಾದ ಚರ್ಚೆಯ ಸಂದರ್ಭದಲ್ಲಿ ದೇಶವನ್ನು ‘ಭಾರತ’ ಅಥವಾ ‘ಹಿಂದೂಸ್ಥಾನ” ಎಂದು ಮಾರ್ಪಾಟು ಮಾಡುವುದಕ್ಕೆ ಸಂಬಂಧಿಸಿದಂತೆ ಅನೇಕರು ಒಲವು ತೋರಿದ್ದರು. ಆದರೆ ನಾನಾ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದ್ದರಿಂದ ನಮ್ಮ ದೇಶವನ್ನು ಅದರ ಮೂಲ ಮತ್ತು ಅಧಿಕೃತ ಹೆಸರಿನಿಂದ ಗುರುತಿಸಬೇಕಿದ್ದು, ಕೋರ್ಟ್​ ಅದನ್ನು ಮಾನ್ಯ ಮಾಡುವಂತೆ ಅರ್ಜಿದಾರರು ಕೋರಿದ್ದಾರೆ.
ಆನ್​ಲೈನ್​ ತರಗತಿ ಆವಾಂತರ: ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
