ನವದೆಹಲಿ:18 ವರ್ಷದ ಕೆಳಗಿನ ಹದಿಹರೆಯದ ತರುಣ ತರುಣಿಯರ ನಡುವಿನ ಸಮ್ಮತಿಯ ಲೈಂಗಿಕ ಸಂಪರ್ಕ ನಿರಪರಾಧವೆಂದು ಪರಿಗಣಿಸಲು ರೋಮಿಯೋ ಜ್ಯೂಲಿಯೆಟ್ ಕಾನೂನು ಅನ್ವಯಗೊಳಿಸಬೇಕೇ? ಎಂಬ ಪ್ರಶ್ನೆಗೆ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸುತ್ತಿದೆ.
18 ವರ್ಷದೊಳಗಿನವರು ಸಮ್ಮತಿಯ ಲೈಂಗಿಕ ಸಂಪರ್ಕ ನಡೆಸಿ, ನಂತರದಲ್ಲಿ ಹೆಣ್ಣು ಗರ್ಭಿಣಿಯಾದರೆ ಹುಡುಗಿಯ ಹೆತ್ತವರು ನೀಡಿದ ದೂರಿನ ಆಧಾರದಲ್ಲಿ ಅತ್ಯಾಚಾರದ ಕೇಸು ಹಾಕಿ ಬಂಧಿಸುವ ಕಾನೂನು ಜಾರಿಯಲ್ಲಿದೆ. 2012ರ ಪೋಕ್ಸೋ ಕಾಯ್ದೆ ಪ್ರಕಾರ 18 ವರ್ಷದ ಕೆಳಗಿನವರೊಂದಿಗೆ ಲೈಂಗಿಕ ಸಂಪರ್ಕ ನಡೆಸುವುದು ಅಪರಾಧ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375ರ ಪ್ರಕಾರ 16 ವರ್ಷ ಕೆಳಗಿನ ಹುಡುಗಿ ಲೈಂಗಿಕ ಸಂಪರ್ಕಕ್ಕೆ ಸಮ್ಮತಿ ನೀಡಿದರೂ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಿ ಶಿಕ್ಷೆ ನೀಡಲಾಗುತ್ತದೆ. ಸಮ್ಮತಿಯ ಲೈಂಗಿಕ ಸಂಪರ್ಕದ ಪ್ರಕರಣದಲ್ಲಿ ಅಪ್ರಾಪ್ತ ಹುಡುಗಿ ಮತ್ತು ಹುಡುಗನ ನಡುವಿನ ವಯಸ್ಸಿನ ಅಂತರ 4 ವರ್ಷಕ್ಕಿಂತ ಕಡಿಮೆ ಇದ್ದಾಗ ಹುಡುಗನನ್ನು ಬಂಧನಕ್ಕೊಳಗಾಗದಂತೆ ರೋಮಿಯೋ ಜ್ಯೂಲಿಯೆಟ್ ಕಾನೂನು ರಕ್ಷಣೆ ಮಾಡುತ್ತದೆ. ಹಲವು ದೇಶಗಳು ಈ ಕಾನೂನನ್ನು ಜಾರಿ ಮಾಡಿವೆ. ಈ ವಿಚಾರ ಪ್ರಸ್ತಾಪಿಸಿ ವಾದಿಸಿದ ವಕೀಲ ಹರ್ಷ ವಿಭೋರ್ ಸಿಂಗಾಲ್, 16-18 ವಯಸ್ಸಿನ ಹುಡುಗಿ ಜತೆ ಸಮ್ಮತಿಯ ಲೈಂಗಿಕ ಸಂಪರ್ಕ ನಡೆಸಿದರೂ ಜೈಲು ಶಿಕ್ಷೆ ಅನುಭವಿಸಬೇಕು ಎಂಬ ಆತಂಕವಿದೆ. ಹೀಗಾಗಿ 16-20 ವಯಸ್ಸಿನ ಹುಡುಗರು 16ಕ್ಕಿಂತ ಮೇಲ್ಪಟ್ಟ ವಯಸ್ಸಿನ ಹುಡುಗಿಯರ ಜತೆ ನಡೆಸುವ ಸಮ್ಮತಿಯ ಲೈಂಗಿಕ ಸಂಪರ್ಕವನ್ನು ನಿರಪರಾಧಗೊಳಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ತಮ್ಮ ಅರ್ಜಿಯಲ್ಲಿ ಕೇಂದ್ರ ಸರ್ಕಾರದ ಅಧ್ಯಯನವೊಂದನ್ನು ಉಲ್ಲೇಖಿಸಿರುವ ಅರ್ಜಿದಾರರು, 25-49 ವಯಸ್ಸಿನ ಶೇ. 10ರಷ್ಟು ಮಹಿಳೆಯರು ತಮ್ಮ 15ನೇ ವಯಸ್ಸಿಗೆ ಮುನ್ನವೇ ಲೈಂಗಿಕ ಸಂಪರ್ಕದ ಅನುಭವ ಹೊಂದಿದ್ದಾರೆ. ಹಾಗೇ ಶೇ. 39ರಷ್ಟು ಮಹಿಳೆಯರು 18 ವಯಸ್ಸಿಗೆ ಮುನ್ನವೇ ಲೈಂಗಿಕ ಸಂಪರ್ಕ ನಡೆಸಿದ್ದಾರೆ ಎಂದು ಗಮನ ಸೆಳೆದಿದ್ದಾರೆ. ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ 18 ವರ್ಷದ ಕೆಳಗಿನ ಹುಡುಗ ಹುಡುಗಿಯರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕೆ ಲಕ್ಷೋಪಲಕ್ಷ ಉದಾಹರಣೆಗಳಿವೆ. ಆದರೆ, ದುರದೃಷ್ಟವಶಾತ್ ಈ ಕ್ರಿಯೆಯಲ್ಲಿ ತೊಡಗಿ, ಸಿಕ್ಕಿ ಹಾಕಿಕೊಂಡವರು ವಿನಾಕಾರಣ ಜೈಲು ಶಿಕ್ಷೆ ಅನುಭವಿಸುವಂತಾಗಿದೆ ಎಂದು ವಿವರಿಸಿದ್ದಾರೆ. ಹೀಗಾಗಿ ಸಂವಿಧಾನದ ಆರ್ಟಿಕಲ್ 142 ನೀಡಿರುವ ವಿಶೇಷಧಿಕಾರ ಬಳಸಿ, ಸುಪ್ರೀಂಕೋರ್ಟ್ ಸೂಕ್ತ ಕಾನೂನು ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ.
ವಿವಿ ಕ್ಯಾಂಪಸ್​ನಲ್ಲಿ ಮದ್ಯಪಾನ-ಧೂಮಪಾನ ನಮ್ಮ ಹಕ್ಕು ಎಂದ ವಿದ್ಯಾರ್ಥಿನಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 2 =
Remember me
