|ರಾಘವ ಶರ್ಮ ನಿಡ್ಲೆನವದೆಹಲಿ
ಕೇಂದ್ರ ಸರ್ಕಾರ ಮತ್ತು ಭಾರತೀಯ ಮಕ್ಕಳ ಕಲ್ಯಾಣ ಪರಿಷತ್ತು (ಐಇಇಗ) ನೀಡುವ ಈ ಸಾಲಿನ ಶೌರ್ಯ ಪ್ರಶಸ್ತಿಗೆ ಕರ್ನಾಟಕದ 8 ವರ್ಷದ ಕೆ.ಆರ್. ದೀಕ್ಷಿತ್ ಮತ್ತು 12 ವರ್ಷದ ಕೀರ್ತಿ ವಿವೇಕ್ ಎಂ. ಸಾಹುಕಾರ ಆಯ್ಕೆಯಾಗಿದ್ದು, ಬುಧವಾರ (ಜ.25) ದೆಹಲಿಯ ನೆಹರೂ ಸ್ಟೇಡಿಯಂನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. 2020ರಲ್ಲಿ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ಹುಬ್ಬಳ್ಳಿ ಮೂಲದ ಆದಿತ್ಯರನ್ನೂ ದೆಹಲಿಗೆ ಕರೆಸಲಾಗಿದ್ದು, ಆತನಿಗೂ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ.
ಪುಟಾಣಿಯ ಸಮಯಪ್ರಜ್ಞೆ:ಸೋಮವಾರಪೇಟೆ ತಾಲ್ಲೂಕಿನ ಕೂಡ್ಲೂರು ಗ್ರಾಮದ ಬಾಲಕ ಕೆ.ಆರ್. ದೀಕ್ಷಿತ್ ಸಮಯಪ್ರಜ್ಞೆ ಹಾಗೂ ಸಾಹಸದ ಮೂಲಕ ತಾಯಿ ಅರ್ಪಿತಾಗೆ ಪುನರ್ಜನ್ಮ ನೀಡಿದ್ದಾನೆ. ತಂದೆ ರವಿಕುಮಾರ್ ಕೂಲಿ ಮಾಡುತ್ತಿದ್ದು, ತಾಯಿ ಅರ್ಪಿತಾ ಮನೆಯಲ್ಲಿ ರಾಗಿ ಮಿಲ್ ನಡೆಸುತ್ತಾರೆ. 2021ರ ನವೆಂಬರ್​ನಲ್ಲಿ ರಾಗಿ ಮಷಿನ್​ನಲ್ಲಿ ಅರ್ಪಿತಾ ತಲೆ ಕೂದಲು ಸಿಕ್ಕಿ ಹಾಕಿಕೊಂಡಿತ್ತು. ಮಷಿನ್ ರಕ್ತಮಯವಾಗಿತ್ತು. ಹೊರಗೆ ಆಡುತ್ತಿದ್ದ ದೀಕ್ಷಿತ್ ಅಮ್ಮನ ಬೊಬ್ಬೆ ಕೇಳಿ ಮನೆಯೊಳಗೆ ಬಂದವನೇ ಮೊದಲಿಗೆ ಮೇನ್ ಸ್ವಿಚ್​ಆಫ್ ಮಾಡಿದ್ದರಿಂದ ತಿರುಗುತ್ತಿದ್ದ ರಾಗಿ ಮಷಿನ್ ಬಂದ್ ಆಗಿತ್ತು. ನಂತರ ನಿಧಾನವಾಗಿ ಅಮ್ಮನ ಕೂದಲನ್ನು ಯಂತ್ರದಿಂದ ತೆಗೆಯಲು ನೆರವಾಗಿದ್ದ. ತಾಯಿಯನ್ನು ಬದಿಯಲ್ಲಿ ಕೂರಿಸಿ, ತಂದೆಗೆ, ಪರಿಚಯಸ್ಥರಿಗೆ ಫೋನ್ ಮಾಡಿ ವಿಷಯ ತಿಳಿಸಿದ. ನಂತರ ಅರ್ಪಿತಾರನ್ನು ಆಸ್ಪತ್ರೆಗೆ ಸೇರಿಸಿ, ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಅವರು ಬದುಕುಳಿದಿದ್ದಾರೆ. ‘ಇಲ್ಲಿ ಮಗನೇ ಅಮ್ಮನ ಪಾಲಿಗೆ ದೇವರಾಗಿ ಬಂದಿದ್ದಾನೆ’ ಎಂದು ತಂದೆ ರವಿಕುಮಾರ್ ಹೇಳುತ್ತಾರೆ.
ಕೆಚ್ಚೆದೆಯ ಕೀರ್ತಿ:ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಂಜುನಾಥ್ ಸಾಹುಕಾರ-ಶ್ರುತಿ ದಂಪತಿ ಪುತ್ರ 12 ವರ್ಷದ ಕೀರ್ತಿ ವಿವೇಕ್ ಕುಟುಂಬವನ್ನು ರಕ್ಷಿಸುವ ಮೂಲಕ ಅಸಾಧಾರಣ ಧೈರ್ಯ ಮೆರೆದಿದ್ದಾನೆ. 2022ರ ಆಗಸ್ಟ್ 21ರಂದು ವಿವೇಕ್ ಕುಟುಂಬ ಜಗಳೂರಿನಿಂದ 25 ಕಿ.ಮೀ. ದೂರದ ಅಗಸನಹಳ್ಳಿಯಲ್ಲಿರುವ ದೇವಸ್ಥಾನಕ್ಕೆ ತೆರಳಿತ್ತು. ತಂದೆ ಕಾರು ಓಡಿಸುತ್ತಿದ್ದರು. ತಾಯಿ ಮತ್ತು 9 ವರ್ಷದ ಸಹೋದರಿ ಸಾತ್ವಿಕ ಕಾರಿನಲ್ಲಿದ್ದರು. ಕಡಿದಾದ ದಾರಿಯಲ್ಲಿ ಕಾರಿನ ಚಕ್ರಕ್ಕೆ ನಾಯಿಯೊಂದು ಸಿಕ್ಕಿ ಕೀರ್ತಿಯ ತಂದೆ ಬ್ರೇಕ್ ಹಾಕಿದಾಗ ಕಾರು ಪಲ್ಟಿಯಾಗಿ ಐದು ಅಡಿ ಆಳದ ಕಂದಕಕ್ಕೆ ಇಳಿದಿತ್ತು. ಬಾಗಿಲುಗಳು ಲಾಕ್ ಆಗಿದ್ದರಿಂದ ತೆಗೆಯಲಾಗಲಿಲ್ಲ. ಗಾಯಗೊಂಡಿದ್ದ ಸಹೋದರಿ ಅಳುತ್ತಿದ್ದಳು. ತಾಯಿ ಕೈ ಮುರಿದುಕೊಂಡು ಪ್ರಜ್ಞೆತಪ್ಪಿ ಬಿದ್ದಿದ್ದರು. ಬೆನ್ನುಮೂಳೆಗೆ ಪೆಟ್ಟು ಬಿದ್ದಿದ್ದರಿಂದ ತಂದೆಗೆ ಡ್ರೖೆವರ್ ಸೀಟಿನಿಂದ ಚಲಿಸಲು ಸಾಧ್ಯವಾಗಲಿಲ್ಲ. ಬಿಕ್ಕಟ್ಟಿನ ಈ ಸ್ಥಿತಿಯಲ್ಲಿ ಧೈರ್ಯ ತುಂಬಿಕೊಂಡ ಕೀರ್ತಿ, ತನ್ನ ಗಾಯಗಳನ್ನೂ ಲೆಕ್ಕಿಸದೆ ಲೋಹದ ನೀರಿನ ಬಾಟಲ್​ನಿಂದ ಕಾರಿನ ಮುಂಭಾಗದ ಗಾಜನ್ನು ಒಡೆದ. ಮೊದಲು ತಂಗಿಯನ್ನು ರಕ್ಷಿಸಿ ನಂತರ ತಂದೆಯನ್ನು ಹೊರಗೆ ತರುವಲ್ಲಿ ಯಶಸ್ವಿಯಾದ. ಎಚ್ಚರ ತಪ್ಪಿದ ಸ್ಥಿತಿಯಲ್ಲಿದ್ದ ತಾಯಿಯನ್ನು ತಂದೆ-ಮಗ ಇಬ್ಬರೂ ಸೇರಿ ಹೊರಗೆ ತರುತ್ತಾರೆ. ಹುಡುಗ ಪೊಲೀಸ್, ಆಂಬುಲೆನ್ಸ್ ಮತ್ತು ಸಂಬಂಧಿಕರಿಗೆ ಫೋನ್ ಮಾಡಿ, ಅರ್ಧ ಗಂಟೆ ನಂತರ ಪೊಲೀಸರು ಹಾಗೂ ಸಂಬಂಧಿಕರು ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರು.
ಹುಬ್ಬಳ್ಳಿ ಹುಡುಗನ ಸಾಹಸ:ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿ ಆದಿತ್ಯ ಮಲ್ಲಿಕಾರ್ಜುನ ಶಿವಳ್ಳಿ ನೀರಿನಲ್ಲಿ ಮುಳುಗುತ್ತಿದ್ದ ಮೂವರನ್ನು ಕಾಪಾಡಿದ್ದ. 2020ರ ಜನವರಿ 14ರ ಮಕರ ಸಂಕ್ರಾಂತಿ ದಿನ ಶಿರಸಿ ಬಳಿಯ ಮೋರೆಗಾರ ಫಾಲ್ಸ್ಗೆ ಪಾಲಕರಾದ ಮಲ್ಲಿಕಾರ್ಜುನ ಶಿವಳ್ಳಿ ಮತ್ತು ಸುಜಾತಾ ಜತೆ ತೆರಳಿದ್ದ. 25 ಅಡಿ ಅಗಲ ಮತ್ತು 35 ಅಡಿ ಆಳ ಇರುವ ಫಾಲ್ಸ್ನ ಗುಂಡಿಯಲ್ಲಿ ಮುಳುಗುತ್ತಿದ್ದ ಮೂವರನ್ನು ಆದಿತ್ಯ ರಕ್ಷಿಸಿದ್ದ. ರಾಜ್ಯಮಟ್ಟದ ಈಜುಪಟು ಎಂಬುದು ಗಮನಾರ್ಹ. ರಾಜ್ಯ ಸರ್ಕಾರ ಆದಿತ್ಯಗೆ 2021-22 ನೇ ಸಾಲಿನ ಹೊಯ್ಸಳ ಶೌರ್ಯ ಪ್ರಶಸ್ತಿ ನೀಡಿದೆ.
ಬಿಟ್ಟಿ ಪ್ರಚಾರಕ್ಕಾಗಿ ಚಿಲ್ರೆ ಕೆಲಸ: ತನ್ನ ಸಂಸ್ಥೆಯ ಮಾರ್ಕೆಟಿಂಗ್​ಗಾಗಿ ಫ್ಲೈಓವರ್​ ಮೇಲಿಂದ ಹಣ ಎಸೆದೆ ಎಂದು ತಪ್ಪೊಪ್ಪಿಕೊಂಡ

ನಾಲ್ಕು ದಿನಗಳ ಕಾಲ ಮೆಟ್ರೋ ರೈಲು ಸಂಚಾರ ಸ್ಥಗಿತ; ಯಾವ ಮಾರ್ಗದಲ್ಲಿ, ಯಾವ್ಯಾವ ದಿನ? ಇಲ್ಲಿದೆ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
