ಕೊಲ್ಕತಾ :ತಾವು ಚುನಾಯಿತರಾದಲ್ಲಿ, ಮತದಾರರಿಗೆ ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಉಚಿತ ಪ್ರವಾಸದ ಅವಕಾಶ ಕಲ್ಪಿಸುವುದಾಗಿ ಆಶ್ವಾಸನೆ ಕೊಟ್ಟಿದ್ದ ಬಿಜೆಪಿ ಅಭ್ಯರ್ಥಿಗೆ, ಚುನಾವಣಾ ಆಯೋಗ ಶೋ ಕಾಸ್ ನೋಟೀಸ್ ಜಾರಿ ಮಾಡಿದೆ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಪಾಂಡಬೇಶ್ವರ್​ನಿಂದ ಬಿಜೆಪಿ ಪರವಾಗಿ ಸ್ಪರ್ಧಿಸುತ್ತಿರುವ ಜಿತೇಂದ್ರ ತಿವಾರಿ ಅವರಿಗೆ ನೋಟೀಸು ಜಾರಿಯಾಗಿದೆ.
ತಿವಾರಿ ಅವರು, ಮಾರ್ಚ್ 21 ರಂದು ಹರಿಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮತ್ತು ಪಕ್ಷದ ಸಭೆಯಲ್ಲಿ – ಹೀಗೆ ಎರಡು ಸಂದರ್ಭಗಳಲ್ಲಿ ಅಯೋಧ್ಯೆಗೆ ಉಚಿತ ಪ್ರವಾಸ ಒದಗಿಸುವ ಭರವಸೆ ನೀಡಿದ್ದರು. ಈ ಬಗ್ಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಲ್ಲಿಸಿದ ದೂರಿನ ಮೇಲೆ, ಆಯೋಗ ನೋಟೀಸ್ ಜಾರಿ ಮಾಡಿದೆ ಎನ್ನಲಾಗಿದೆ.
ಇದನ್ನೂ ಓದಿ:‘ಎಲೆಕ್ಷನ್ ಡ್ಯೂಟಿಗೆ ಯುಪಿ ಪೊಲೀಸ್ ಬೇಡ’ : ಟಿಎಂಸಿ ತಕರಾರು
ಈ ನೋಟೀಸಿಗೆ ಪ್ರತಿಕ್ರಿಯೆ ನೀಡಿರುವ ತಿವಾರಿ ಅವರು, ಈ ರೀತಿ ವಚನ ನೀಡುವುದು ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂಬುದು ತಮಗೆ ಗೊತ್ತಿರಲಿಲ್ಲ ಎಂದಿದ್ದಾರೆ. ಈ ಬಗ್ಗೆ “ತಿಳುವಳಿಕೆ ಹೊಂದಿಲ್ಲದ್ದಕ್ಕೆ” ಆಯೋಗದ ಕ್ಷಮೆ ಕೋರಿದ್ದಾರೆ.(ಏಜೆನ್ಸೀಸ್)
“ರಾಜ್ಯದಲ್ಲಿ ಲವ್​ ಜಿಹಾದ್, ಲ್ಯಾಂಡ್ ಜಿಹಾದ್ ವಿರುದ್ಧ ಕಾನೂನು ತರುತ್ತೇವೆ”

ಎಲೆಕ್ಟೊರಲ್ ಬಾಂಡ್​ಗಳ ವಿರುದ್ಧ ತಡೆಯಾಜ್ಞೆ ಇಲ್ಲ : ಸುಪ್ರೀಂ ಕೋರ್ಟ್

ಭಾರತದಲ್ಲಿ ಶೇ. 30 ಮುಸ್ಲಿಮರು ಒಂದಾದ್ರೆ ಸಾಕು, 4 ಪಾಕಿಸ್ತಾನ್‌ ಸೃಷ್ಟಿ ಆಗ್ಬಿಡುತ್ತೆ!; ದೇಶದ್ರೋಹಿ ಹೇಳಿಕೆ ನೀಡಿದ ರಾಜಕಾರಣಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
