ನವದೆಹಲಿ:ಅಫ್ತಾಬ್ ಪೂನಾವಾಲಾನಿಂದ ಕೊಲೆಯಾದ ಶ್ರದ್ಧಾಳ 13 ಮೂಳೆ ಚೂರುಗಳನ್ನು ದೆಹಲಿ ಪೊಲೀಸರು ಮೆಹರೌಲಿ ಅರಣ್ಯ ಪ್ರದೇಶದಲ್ಲಿ ಪತ್ತೆ ಹಚ್ಚಿದ್ದಾರೆ. ಲಿವ್-ಇನ್ ಸಂಬಂಧದಲ್ಲಿದ್ದ ಅಫ್ತಾಬ್, ಗೆಳತಿ ಶ್ರದ್ಧಾಳನ್ನು ಉಸಿರುಗಟ್ಟಿಸಿ ಸಾಯಿಸಿ ಮೃತದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಫ್ಲಾಟ್​ನಲ್ಲಿ ಫ್ರಿಡ್ಜ್​ನಲ್ಲಿಟ್ಟಿದ್ದ. ನಂತರ ಹಲವು ದಿನಗಳ ಕಾಲ ಅವುಗಳನ್ನು ಕಾಡಿನಲ್ಲಿ ಎಸೆದಿದ್ದ.
ಘೋರ ಕೃತ್ಯ ಬೆಳಕಿಗೆ ಬಂದು ಕಿರಾತಕನನ್ನು ಬಂಧಿಸಿದಾಗ ಆತ ಈ ವಿಚಾರ ಬಾಯ್ಬಿಟ್ಟಿದ್ದ. ಕಾಡಿನಲ್ಲಿ ಎಸೆದಿದ್ದ ದೇಹದ ಭಾಗಗಳ ಪತ್ತೆಗೆ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿದ್ದರು. ಅರಣ್ಯ ಪ್ರದೇಶದಲ್ಲಿ ದೊರೆತ 13 ಮೂಳೆಗಳಿಂದ ಸಂಗ್ರಹಿಸಿದ ಡಿಎನ್​ಎ ಶ್ರದ್ಧಾಳ ತಂದೆ ವಿಕಾಸ್​ರ ಡಿಎನ್​ಎ ಸ್ಯಾಂಪಲ್​ನೊಂದಿಗೆ ಸರಿಹೊಂದುತ್ತದೆ ಎನ್ನುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದರಿಂದ ಅಫ್ತಾಬ್ ವಿರುದ್ಧ ಮಹತ್ವದ ಸಾಕ್ಷ್ಯ ಲಭಿಸಿದಂತಾಗಿದೆ. ಕೇಂದ್ರೀಯ ಫೊರೆನ್ಸಿಕ್ ವಿಜ್ಞಾನ ಪ್ರಯೋಗಾಲಯದಲ್ಲಿ ಡಿಎನ್​ಎ ವಿಶ್ಲೇಷಣೆ ನಡೆಸಲಾಗಿತ್ತು.
ನವೆಂಬರ್ 12ರಂದು 28 ವರ್ಷದ ಅಫ್ತಾಬ್​ನನ್ನು ಬಂಧಿಸಿದ ಮೇಲೆ ಕೊಲೆ ಕುರಿತು ಹೊರಬಂದಿದ್ದ ಘೋರ ವಿವರಗಳು ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಆತ 27 ವರ್ಷದ ಶ್ರದ್ಧಾಳನ್ನು ಮೇ 18ರಂದು ಉಸಿರುಗಟ್ಟಿಸಿ ಕೊಂದಿದ್ದ. ದೇಹವನ್ನು ತುಂಡು ಮಾಡಿ ಸುಮಾರು ಮೂರು ವಾರ ಫ್ರಿಡ್ಜ್​ನಲ್ಲಿಟ್ಟಿದ್ದ. ದೇಹದ ಭಾಗಗಳನ್ನು ವಿವಿಧೆಡೆ ಎಸೆದಿರುವುದಾಗಿ ಆತ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಅರಣ್ಯ ಪ್ರದೇಶಗಳಲ್ಲಿ ಜಾಲಾಡಿದ್ದರು. ತಪ್ಪಿಹೋಗಿರುವ ಭಾಗಗಳನ್ನು ಪತ್ತೆಹಚ್ಚಲು ಮದಂಗೀರ್​ನ ಒಂದು ಕೆರೆಯ ನೀರನ್ನೂ ಖಾಲಿ ಮಾಡಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 11 =
Remember me
