ನವದೆಹಲಿ:ವಿದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು ಕರೆತರುವ ಮಹಾ ಮರುವಲಸೆಗಾಗಿ ಬೃಹತ್​ ಪ್ರಮಾಣದಲ್ಲಿ ಏರ್​ಲಿಫ್ಟ್​ ನಡೆಸಲಾಗುತ್ತಿದೆ. ಕೊಲ್ಲಿ ರಾಷ್ಟ್ರಗಳಿಂದ ಬರುವವರಿಗಾಗಿ ಆಪರೇಷನ್​ ಸಮುದ್ರ ಸೇತು ನಡೆದಿದೆ. ಸಾವಿರಾರು ಸಂಖ್ಯೆಯಲ್ಲಿ ಭಾರತೀಯರು ತಾಯ್ನಾಡಿಗೆ ಮರಳುತ್ತಿದ್ದಾರೆ.
ಇನ್ನೊಂದೆಡೆ, ಬೇರೆ ಬೇರೆ ರಾಜ್ಯಗಳಲ್ಲಿರುವ ತಮ್ಮವರನ್ನು ಕರೆಯಿಸಿಕೊಳ್ಳಲು ಆಯಾ ರಾಜ್ಯಗಳು ಮುಂದಾಗಿವೆ. ಇವರಲ್ಲಿ ಬಹುತೇಕರು ವಲಸೆ ಕಾರ್ಮಿಕರಾಗಿದ್ದಾರೆ. ಅವರಿಗಾಗಿ ಇದಕ್ಕಾಗಿ ವಿಶೇಷ ಬಸ್​ಗಳನ್ನು ಕಾರ್ಯಾಚರಿಸಲಾಗುತ್ತದೆ. ಶ್ರಮಿಕ್​ ಎಕ್ಸ್​ಪ್ರೆಸ್​ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ;ತಾಯ್ನಾಡು ಕರೆಸಿಕೊಳ್ಳುತ್ತಿಲ್ಲ, ಭಾರತ ವೀಸಾ ನೀಡುತ್ತಿಲ್ಲ; 55 ದಿನಗಳಿಂದ ವಿಮಾನ ನಿಲ್ದಾಣವೇ ಆತನಿಗೆ ಜಗತ್ತು
ಆದರೆ, ಸರ್ಕಾರ ತಮ್ಮವರನ್ನು ನಡೆಸಿಕೊಳ್ಳುವಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂಬ ಆಕ್ಷೇಪ, ಆಕ್ರೋಶ ವ್ಯಕ್ತವಾಗಿದೆ.ಯಾರೇ ಎಲ್ಲಿಂದ ಬಂದರೂ ಅವರಿಗೆ ಕಡ್ಡಾಯವಾಗಿ ಕ್ವಾರಂಟೈನ್​ನಲ್ಲಿ ಇರಿಸಲಾಗುತ್ತಿದೆ. ಅಂತೆಯೇ, ವಿದೇಶಗಳಿಂದ ಬಂದವರನ್ನು ಪಂಚತಾರಾ ಹೋಟೆಲ್​ಗಳಲ್ಲಿ (ಬೆಂಗಳೂರು ಸೇರಿ) ಇರಿಸಲಾಗುತ್ತಿದೆ. ವಿಪರ್ಯಾಸವೆಂದರೆ, ಪಕ್ಕದ ರಾಜ್ಯಗಳಿಂದ ಬರುವ ನಮ್ಮವರಿಗೆ ರೈಲಿನಲ್ಲಿ ವ್ಯಕ್ತಿಗತ ಅಂತರವನ್ನು ಕಾಯ್ದುಕೊಂಡು ಬರಲು ಸಾಧ್ಯವಾಗುತ್ತಿಲ್ಲ. ಅವರನ್ನು ಅವರ ಜಿಲ್ಲೆಗಳಲ್ಲಿ ಕಲ್ಯಾಣ ಮಂಟಪವೋ, ಛತ್ರ, ಶಾಲೆ ಮೊದಲಾದ ಕಡೆಗಳಲ್ಲಿ ತುಂಬಲಾಗುತ್ತಿದೆ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ. ಈ ರೈಲುಗಳಲ್ಲಿ ಕಾರ್ಮಿಕರಿಂದ ಟಿಕೆಟ್​ ಶುಲ್ಕ ಪಡೆಯುವ ವಿಚಾರವೂ ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಕಳೆದ ಕೆಲ ದಿನಗಳಿಂದ ವಲಸೆ ಕಾರ್ಮಿಕರಿಗೆ ಆಹಾರ, ನೀರು ಸೌಲಭ್ಯದೊಂದಿಗೆ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ರೈಲುಗಳಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆಯಾ ರಾಜ್ಯಗಳಿಗೆ ಅವರನ್ನು ಕರೆದೊಯ್ಯಲಾಗುತ್ತಿತ್ತು. ಇದೀಗ ಶ್ರಮಿಕ್​ ಎಕ್ಸ್​ಪ್ರೆಸ್​ ರೈಲುಗಳ ಎಲ್ಲ ಆಸನಗಳಲ್ಲೂ ಪ್ರಯಾಣಿಕರು ಸಂಚರಿಸಬಹುದು. ಅಂದರೆ, ಈವರೆಗೆ 1,200 ಪ್ರಯಾಣಿಕರಿಗೆ ಅವಕಾಶವಿದ್ದ ರೈಲಿನಲ್ಲಿ ಈಗ 1,700 ಜನರನ್ನು ಕರೆದೊಯ್ಯಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇದನ್ನೂ ಓದಿ;ಕೋವಿಡ್​ ಪರಿಹಾರ ನಿಧಿಗೆ ಒಂದು ಕೋಟಿ ರೂ. ನೀಡಿದ ಆದಿಚುಂಚನಗಿರಿ ಶ್ರೀಗಳು
ಈವರೆಗೆ ನಿಲುಗಡೆರಹಿತ ಪ್ರಯಾಣವಾಗಿದ್ದ ಶ್ರಮಿಕ್​ ಎಕ್ಸ್​ಪ್ರೆಸ್​ ರೈಲುಗಳು ಮೂರು ಕಡೆಗಳಲ್ಲಿ ನಿಲುಗಡೆ ನೀಡಲಿವೆ. ಪ್ರಯಾಣಿಕ ರೈಲುಗಳ ಸಂಚಾರವನ್ನು ಹಂತಹಂತವಾಗಿ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಕರೊನಾದೊಂದಿಗೆ ಬದುಕಲು ಕಲಿಯಿರಿ, ಇನ್ನೆರಡು ವರ್ಷ ಲಸಿಕೆ ಅನುಮಾನ…!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − 1 =
Remember me
