ಬೆಂಗಳೂರು:ಹಿಂದೂಗಳು ಶ್ರಾವಣ ಮಾಸವನ್ನು ತುಂಬಾ ಪವಿತ್ರವಾಗಿ ನೋಡುತ್ತಾರೆ. ಆರೋಗ್ಯಕ್ಕೆ ಎಷ್ಟು ಮುಖ್ಯವೋ ಅಧ್ಯಾತ್ಮಿಕವಾಗಿಯೂ ಅಷ್ಟೇ ಮಹತ್ವದ್ದು ಎಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಮಾಂಸವನ್ನು ತಿನ್ನುವುದನ್ನು ನಿಷೇಧಿಸಲಾಗಿದೆ. ಇದರ ಹಿಂದಿನ ವೈಜ್ಞಾನಿಕ ಕಾರಣವನ್ನು ತಿಳಿಯಲು ಪ್ರಯತ್ನಿಸೋಣ….
ಇದನ್ನೂ ಓದಿ:ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಬಾಲಿವುಡ್​​ ನಟ ಅಭಿಷೇಕ್ ಬಚ್ಚನ್ !
ಹಲವಾರು ವ್ರತ, ಉಪವಾಸ, ಕಟ್ಟು ನಿಟ್ಟಿನ ಪೂಜಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಶ್ರಾವಣ ಮಾಸದ ಈ ತಿಂಗಳಲ್ಲಿ ಭಕ್ತರು ಶಿವನನ್ನು ವಿಶೇಷವಾಗಿ ಪೂಜಿಸುತ್ತಾರೆ. ಈ ತಿಂಗಳಲ್ಲಿ ಬರುವ ಪ್ರತಿ ಸೋಮವಾರವನ್ನು ದೇವಾಲಯಗಳಲ್ಲಿ ಶ್ರಾವಣ ಸೋಮವಾರ ಎಂದು ಭಕ್ತಿ-ಭಾವದಿಂದ ಆಚರಿಸಲಾಗುತ್ತದೆ.
ಈ ತಿಂಗಳು ತುಂಬಾ ವಿಶೇಷ ಯಾಕೆ?:ಈ ಮಾಸದಿಂದ ಸಾಲು ಸಾಲು ಹಬ್ಬಗಳು ಸಹ ಶುರುವಾಗುತ್ತವೆ. ಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ, ಭೀಮನ ಅಮವಾಸೆ, ನಾಗ ಪಂಚಮಿಯಂತಹ ಅನೇಕ ಪ್ರಮುಖ ಹಿಂದೂ ಹಬ್ಬಗಳು ಶ್ರಾವಣ ಮಾಸದಲ್ಲಿ ಬರುವುದರಿಂದ ಈ ತಿಂಗಳು ಮತ್ತಷ್ಟು ಪವಿತ್ರವಾಗಿದೆ.
ಇದನ್ನೂ ಓದಿ:VIDEO | ಮಮ್ಮಿ..ಮಮ್ಮಿ.. ಮಗುವಿನ ಕೂಗು ತಾಯಿಗೆ ಕೇಳಿಸಲಿಲ್ಲ; ಪತಿಯೊಂದಿಗೆ ಸೆಲ್ಫಿ ತೆಗೆಯುತ್ತಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿ ಮಹಿಳೆ ಸಾವು!
ಮಾಂಸಹಾರ ತ್ಯಜಿಸಲು ವೈಜ್ಞಾನಿಕ ಕಾರಣ:ಈ ಋತುವಿನಲ್ಲಿ ಭಗವಾನ್ ಶಂಕರನ ಆರಾಧನೆಯಿಂದಾಗಿ, ಧಾರ್ಮಿಕ ದೃಷ್ಟಿಕೋನದಿಂದ ಮಾಂಸಾಹಾರವನ್ನು ನಿಷೇಧಿಸಲಾಗಿದೆ. ವೈಜ್ಞಾನಿಕ ದೃಷ್ಟಿಯಿಂದಲೂ ಈ ಮಾಸದಲ್ಲಿ ಮಾಂಸಾಹಾರ ಸೇವಿಸಬಾರದು. ಈ ತಿಂಗಳಲ್ಲಿ ಸ್ವಲ್ಪ ಮಳೆಯಾಗುತ್ತದೆ. ಪರಿಸರದಲ್ಲಿ ಶಿಲೀಂಧ್ರಗಳು ಮತ್ತು ವೈರಸ್‌ಗಳ ಸೋಂಕು ಹೆಚ್ಚಾಗುತ್ತದೆ. ಆಹಾರವು ಬೇಗನೆ ಹಾಳಾಗುತ್ತದೆ. ಸೂರ್ಯನ ಬೆಳಕಿನ ಕೊರತೆಯಿಂದಾಗಿ ಮಳೆಗಾಲದಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿರುತ್ತದೆ, ಹೀಗಾಗಿ ಈ ಸಮಯದಲ್ಲಿ ಮಾಂಸಾಹಾರವನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮವಾಗಿದೆ. ಮಳೆಗಾಲದಲ್ಲಿ ನೀರಿನಿಂದ ಹರಡುವ ಹಲವಾರು ರೋಗಗಳು ಇವೆ ಮತ್ತು ಪ್ರಾಣಿಗಳ ಮಾಂಸವು ಕಲುಷಿತವಾಗುವ ಅಪಾಯವಿದೆ. ಪರಿಣಾಮವಾಗಿ, ಮಳೆಗಾಲದಲ್ಲಿ ಮಾಂಸಾಹಾರ ತಪ್ಪಿಸುವುದು ಉತ್ತಮ ಎನ್ನಲಾಗುತ್ತದೆ.
ಇದನ್ನೂ ಓದಿ:ನಿತ್ಯಾ ಮೆನನ್ ಮನೆಯಲ್ಲಿ ಸೂತಕದ ಛಾಯೆ; ಅಜ್ಜಿಯನ್ನು ನೆನೆದು ಭಾವುಕರಾದ ನಟಿ
ಮಳೆಗಾಲದಲ್ಲಿ ಮೀನು ಮತ್ತು ಇತರ ಜಲಚರಗಳು ಸಂತಾನೋತ್ಪತ್ತಿ ಮಾಡುತ್ತವೆ. ಈ ಸಮಯದಲ್ಲಿ ಜಲಚರ ಪ್ರಾಣಿಗಳನ್ನು ತಿನ್ನುವುದರಿಂದ ಅವುಗಳ ಸಂತಾನೋತ್ಪತ್ತಿ ಕುಂಠಿತವಾಗುತ್ತದೆ. ಪರಿಸರದಲ್ಲಿ ಕೀಟಗಳು ಮತ್ತು ವೈರಸ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಡೆಂಗ್ಯೂ, ಚಿಕೂನ್‌ಗುನ್ಯಾದಂತಹ ಅನೇಕ ರೋಗಗಳು ಬರಲು ಪ್ರಾರಂಭಿಸುತ್ತವೆ, ಇದರಿಂದಾಗಿ ಪ್ರಾಣಿಗಳು ಸಹ ಅನಾರೋಗ್ಯಕ್ಕೆ ಒಳಗಾಗುತ್ತವೆ. ಅವುಗಳ ಮಾಂಸವನ್ನು ತಿನ್ನುವುದು ಹಾನಿಕಾರಕ.
ಶ್ರಾವಣವನ್ನು ಹಿಂದೂ ಧರ್ಮದಲ್ಲಿ ಪವಿತ್ರ ತಿಂಗಳು ಎಂದು ಮತ್ತು ಹಿಂದೂ ಸಂಸ್ಕೃತಿಯಲ್ಲಿ ಯಾವುದೇ ಜೀವಿಗಳನ್ನು ಕೊಲ್ಲುವುದು ಅನೈತಿಕವೆಂದು ಪರಿಗಣಿಸಲ್ಪಟ್ಟಿರುವುದರಿಂದ ಜನರು ಮಾಂಸಾಹಾರ ಊಟವನ್ನು ಶ್ರಾವಣ ಮಾಸದಲ್ಲಿ ತ್ಯಜಿಸುತ್ತಾರೆ. ಹಿಂದೂ ಧರ್ಮದಲ್ಲಿ ಸಸ್ಯಹಾರಿಗಳು, ಮಾಂಸಾಹಾರಿಗಳು ಇಬ್ಬರೂ ಇದ್ದಾರೆ. ಈ ಮಾಸದಲ್ಲಿ ಮಾಂಸಾಹಾರಿಗಳು ಸಹ ಸಂಪೂರ್ಣವಾಗಿ ಆ ಆಹಾರವನ್ನು ತ್ಯಜಿಸುತ್ತಾರೆ. ಕಾರಣ ಇಷ್ಟೇ ಗೌರವ ಮತ್ತು ನಂಬಿಕೆಯ ಸಮರ್ಪಣೆಗಾಗಿ ಪವಿತ್ರ ಮಾಸ ಶ್ರಾವಣದಲ್ಲಿ ಮಾಂಸವನ್ನು ತಿನ್ನುವುದನ್ನು ಬಿಡಲು ಸಲಹೆ ನೀಡಲಾಗುತ್ತದೆ.
ಇದನ್ನೂ ಓದಿ:ಪರ್ಮಿಶನ್ ಇಲ್ದೆ ಟೊಮ್ಯಾಟೋ ಅಡುಗೆಗೆ ಹಾಕಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ; ಅರ್ಧ ಕೆಜಿ ಟೊಮ್ಯಾಟೋ ಕೊಟ್ಟು ಕರೆದುಕೊಂಡು ಬಂದ ಪತಿ!
ಆಹಾರ ಪದ್ಧತಿ ವೈಯಕ್ತಿಕ ಆಯ್ಕೆಯಾಗಿದ್ದರೂ ಸಹ ನಮ್ಮ ಪುರಾತನ ಭಗವದ್ಗೀತೆ, ವೇದ, ಪುರಾಣ ಮತ್ತು ಮಹಾಭಾರತದಂತಹ ಹಿಂದೂ ಧರ್ಮಗ್ರಂಥಗಳ ಕೆಲವು ಭಾಗಗಳಲ್ಲಿ ಮಾಂಸ ಸೇವನೆಗೆ ಖಂಡನೆ ಇದೆ. ಉದಾಹರಣೆಗೆ, ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ತನ್ನ ಸಸ್ಯಾಹಾರದ ಆಯ್ಕೆಯನ್ನು ಘೋಷಿಸುವ ಒಂದು ಭಾಗದಲ್ಲಿ “ಒಂದು ಎಲೆ, ಹೂವು, ಹಣ್ಣು ಅಥವಾ ನೀರನ್ನು ನನಗೆ ಪ್ರೀತಿ ಮತ್ತು ಭಕ್ತಿಯಿಂದ ಅರ್ಪಿಸಿದರೆ, ಸಾಕು ನಾನು ಅದನ್ನು ಸ್ವೀಕರಿಸುತ್ತೇನೆ.” ಎಂದು ಹೇಳುವ ಪ್ರಸಂಗವಿದೆ. ಹೀಗಾಗಿ ಪವಿತ್ರ ಮಾಸದಲ್ಲಿ ಹಿಂದೂಗಳು ದೇವರ ಕೃಪೆಗೆ ಪಾತ್ರರಾಗಲು ಮಾಂಸಾಹಾರವನ್ನು ತ್ಯಜಿಸುತ್ತಾರೆ.
ಕುಡಿದ ಮತ್ತಿನಲ್ಲಿ ಗೋಡೆಗೆ ತಲೆ ಜಜ್ಜಿ ಮಾವನನ್ನ ಕೊಂದ ಅಳಿಯ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:eleven + nine =
Remember me
