ಅಯೋಧ್ಯೆ:ರಾಮಮಂದಿರ ಭೂಮಿ ಪೂಜೆಗಾಗಿ ದೇಶದ ಅನೇಕರು ದೇಣಿಗೆಯನ್ನು ಸಮರ್ಪಿಸಿದ್ದಾರೆ. ಆಗಸ್ಟ್​ 4ರವರೆಗೆ ಒಟ್ಟು 30 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಹೇಳಿದೆ.
ಇಂದು ಖಜಾಂಚಿ ಸ್ವಾಮಿ ಗೋವಿಂದ್​ ದೇವ್​ ಗಿರಿ ಅವರು ಈ ಬಗ್ಗೆ ವಿವರಣೆ ನೀಡಿದ್ದಾರೆ. ಇಂದು ಆಗಸ್ಟ್​ 4ರವರೆಗೆ ಅಂದಾಜು 30 ಕೋಟಿ ರೂ.ಸಂಗ್ರಹವಾಗಿದೆ. ನಾಳೆಯಷ್ಟರಲ್ಲಿ 11 ಕೋಟಿ ರೂ.ಇದಕ್ಕೆ ಸೇರ್ಪಡೆಯಾಗಲಿದೆ. ಈ ಹಣವನ್ನು ಆಧ್ಯಾತ್ಮಿಕ ಗುರು ಮೊರಾರಿ ಬಾಪು ಅವರು ದೇಶದ ಜನರಿಂದ ಸಂಗ್ರಹ ಮಾಡಿದ್ದಾರೆ. ಇದನ್ನು ಹೊರತು ಪಡಿಸಿದರೆ ಸುಮಾರು 7 ಕೋಟಿ ರೂಪಾಯಿಯನ್ನು ವಿದೇಶದಲ್ಲಿರುವ ಭಾರತೀಯರು ದೇಣಿಗೆ ನೀಡಿದ್ದಾರೆ. ಆದರೆ ಈ ಹಣವನ್ನು ಸದ್ಯಕ್ಕೆ ನಾವು ಪಡೆದಿಲ್ಲ. ನಮ್ಮ ಟ್ರಸ್ಟ್​ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯಡಿ ಪ್ರಮಾಣೀಕರಿಸಲ್ಪಟ್ಟ ನಂತರವಷ್ಟೇ 7 ಕೋಟಿ ರೂ.ನಮ್ಮ ಕೈಸೇರುತ್ತದೆ ಎಂದು ಗೋವಿಂದ್​ ದೇವ್​ ಗಿರಿ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ:ರಾಮಮಂದಿರ ಭೂಮಿಪೂಜೆಗಾಗಿ ಬಿಎಸ್‌ವೈ ಮಾಡಿಕೊಂಡರೊಂದು ಮನವಿ…
ನಾಳೆ ಪ್ರಧಾನಮಂತ್ರಿ ಮೋದಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಹಲವು ಗಣ್ಯರು, ಪ್ರಮುಖರು, ಧಾರ್ಮಿಕ ಗುರುಗಳು, ಸಾಧು-ಸಂತರು ಭೂಮಿಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.(ಏಜೆನ್ಸೀಸ್​)
ಮಾಸ್ಕ್​ ಯಾಕೆ ಧರಿಸಲಿಲ್ಲ ಎಂದು ಪ್ರಶ್ನೆ ಮಾಡಿದ ಪೊಲೀಸ್​ ತಲೆಯನ್ನು ಸಿಮೆಂಟ್​​ ನೆಲಕ್ಕೆ ಜಜ್ಜಿದ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + eight =
Remember me
